ಅಂತರ ಮರೆತ ಅಂಗಡಿಗಳಿಗೆ ದಂಡದ ಬಿಸಿ

ಸೋಮವಾರ ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಕಂಡು ಬಂದ ಜನಸ್ತೋಮವಿದು.
 ಇದನ್ನು ಕಂಡ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಇದು ‘ಕೊರೊನಾದ ಸೂಪರ್ ಸ್ಪ್ರೆಡರ್ ರಸ್ತೆ’ ಎಂದು ಉದ್ಘರಿಸಿದರು.

ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆ ಅಂಗಡಿಗಳಿಗೆ 50 ಸಾವಿರ ರೂ.ವರೆಗೆ ದಂಡ

ದಾವಣಗೆರೆ, ಏ. 19 – ನಗರದ ಜನನಿಬಿಡ ಮಾರುಕಟ್ಟೆಯ ಕೇಂದ್ರ ಬಿಂದುವಾದ ವಿಜಯಲಕ್ಷ್ಮಿ ರಸ್ತೆ, ಕಾಳಿಕಾದೇವಿ ರಸ್ತೆಗಳಲ್ಲಿರುವ ಅಂಗಡಿಗಳ ಮೇಲೆ ದಾಳಿ ನಡೆಸಿದ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ನೇತೃತ್ವದ ತಂಡ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಕೋವಿಡ್ ಮಾರ್ಗಸೂಚಿ ಪಾಲಿಸದ ಅಂಗಡಿಗಳಿಗೆ ದಂಡ ವಿಧಿಸಿದೆ.

ಅಂಗಡಿಗಳ ಒಳಗೆ ಹಾಗೂ ಅಂಗಡಿಗಳ ಹೊರಗೆ ಜನ ನೆರೆದಿದ್ದನ್ನು ನೋಡಿದ ಜಿಲ್ಲಾಧಿಕಾರಿ, ಇದು §ಕೊರೊನಾದ ಸೂಪರ್ ಸ್ಪ್ರೆಡರ್ ರಸ್ತೆ’ಯಂತಿದೆ ಎಂದು ಉದ್ಘರಿಸಿದರು.

ಅಂಗಡಿಯ ಒಳಗೆ ಬರುವಾ ಗಲೇ ಸ್ಯಾನಿಟೈಜರ್ ಬಳಕೆಗೆ ಅವ ಕಾಶ ಇರಬೇಕು ಎಂದು ಅಂಗಡಿ ಯವರಿಗೆ ಎಚ್ಚರಿಕೆ ನೀಡಿದ ಜಿಲ್ಲಾಧಿ ಕಾರಿ ಬೀಳಗಿ, ಮಾರ್ಗಸೂಚಿಗಳನ್ನು ಪಾಲಿಸದೇ ಇದ್ದರೆ ದಂಡವಷ್ಟೇ ಅಲ್ಲದೇ ನೋಟಿಸ್ ಕಳಿಸಿ ಎಫ್.ಐ.ಆರ್. ದಾಖಲಿಸಲಾಗು ವುದು ಹಾಗೂ ಅಂಗಡಿಯ ಲೈಸೆನ್ಸ್ ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಬಟ್ಟೆ ಅಂಗಡಿ ಹಾಗೂ ಬಂಗಾರದ ಅಂಗಡಿಗಳಲ್ಲಿ ಸಾಮಾಜಿಕ ಅಂತರ ಮರೆಯಾಗಿದ್ದು, ಪ್ರಮುಖವಾಗಿ ಕಂಡು ಬಂತು. ಈ ಸಂದರ್ಭದಲ್ಲಿ ಅಂಗಡಿ ಯವರಿಗೆ 5 ಸಾವಿರ ರೂ.ಗಳಿಂದ ಹಿಡಿದು 50 ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಯಿತು.

ಅಳಲು – ಆಕ್ರೋಶ : ಸಾಮಾಜಿಕ ಅಂತರವಿಲ್ಲದ ಕಾರಣಕ್ಕೆ ದಂಡ ವಿಧಿಸಿದಾಗ ಕೆಲ ವರ್ತಕರು ನಮ್ಮ ತಪ್ಪಾಗಿದೆ, ಅರ್ಥ ಮಾಡಿಕೊಂಡಿದ್ದೇವೆ. ದಂಡ ಕಡಿಮೆ ಮಾಡಿಕೊಳ್ಳಿ ಎಂದು ಮನವಿ ಮಾಡಿಕೊಂಡರು. ಆದರೆ, ಅದಕ್ಕೆ ಜಿಲ್ಲಾಧಿಕಾರಿ ಒಪ್ಪಲಿಲ್ಲ.

ಇನ್ನು ಕೆಲವರು ಜಿಲ್ಲಾಧಿಕಾರಿಗಳ ಸೂಚನೆಯಂತೆ ದಂಡ ವಸೂಲಿಗೆ ಬಂದ ಪಾಲಿಕೆ ಸಿಬ್ಬಂದಿಯ ಜೊತೆ ಚಕಮಕಿ ನಡೆಸುತ್ತಾ, ನಮಗೆ ಸಾಮಾಜಿಕ ಅಂತರ ಹೇಳುತ್ತೀರಿ, ಆದರೆ ನೀವೇ ಸಾಮಾಜಿಕ ಅಂತರ ಇರದೇ ಗುಂಪು ಕಟ್ಟಿಕೊಂಡು ಬಂದಿದ್ದೀರಿ. ನಾವು ದಂಡ ಕಟ್ಟುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದುದೂ ಕಂಡು ಬಂತು.

ವಾದಿಸಿದರೆ ಕೇಸ್ : ಸಾಮಾಜಿಕ ಅಂತರ ನಿಭಾಯಿಸದೇ ಅಂಗಡಿ ನಡೆಸುತ್ತಿರುವವರು ದಂಡ ಕಟ್ಟಲು ನಿರಾಕರಿಸಿದರೆ ಅಂಥವರ ಮೇಲೆ ಕೇಸ್ ಹಾಕಿ ಎಂದು ಖಡಕ್ ಸೂಚನೆ ನೀಡಿದ ಜಿಲ್ಲಾಧಿಕಾರಿ ಬೀಳಗಿ, ಪರಿಸ್ಥಿತಿ ಇದೇ ರೀತಿ ಮುಂದುವರೆಸಿದರೆ ಕೊನೆಗೆ ಅಂಗಡಿಗಳನ್ನೇ ಬಂದ್ ಮಾಡುವ ಸ್ಥಿತಿ ಬರಬಹುದು ಎಂದು ಎಚ್ಚರಿಸಿದ್ದಾರೆ.

ದೇವಸ್ಥಾನದಲ್ಲೂ ಅಂತರವಿಲ್ಲ : ಕಾಳಿಕಾಂಬ ದೇವಾಲಯಕ್ಕೆ ತೆರಳಿದ ಜಿಲ್ಲಾಧಿಕಾರಿ ಬೀಳಗಿ, ಅಲ್ಲಿ ಗುಂಪಾಗಿ ಕುಳಿತಿದ್ದ ಮಹಿಳೆಯರಿಗೆ ಸಾಮಾಜಿಕ ಅಂತರದ ಬಗ್ಗೆ ತಿಳಿ ಹೇಳಿದರಲ್ಲದೇ, ಅವರಿಗೆ ಮಾಸ್ಕ್ ತರಿಸಿಕೊಟ್ಟರು.

ಈ ಸಂದರ್ಭದಲ್ಲಿ ಎಸ್ಪಿ ಹನುಮಂತರಾಯ, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

error: Content is protected !!