ಮೇಯರ್ ಎಸ್.ಟಿ. ವೀರೇಶ್ ಅಭಿಮತ
ದಾವಣಗೆರೆ, ಏ.19- ಯುವಕರು ಸಮಾಜಮುಖಿ ಕೆಲಸದಲ್ಲಿ ತೊಡಗಿಸಿಕೊಂಡರೆ ಉತ್ತಮ ನಾಯಕರಾಗಲು ಬುನಾದಿ ಆಗುತ್ತದೆ ಎಂದು ಮೇಯರ್ ಎಸ್.ಟಿ. ವೀರೇಶ್ ತಿಳಿಸಿದರು.
ಅವರು, ಇಂದು ನಗರದ ಹಳೇ ಕುಂದುವಾಡದಲ್ಲಿ ಮನಾ ಯುವ ಬ್ರಿಗೇಡ್, ಜರವೇ ನಾಲ್ಕನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ, `ಕುಂದುವಾಡ ಯುವ ರತ್ನ ಪ್ರಶಸ್ತಿ’, ಕೆಎಪಿಎಲ್ ಬಹುಮಾನ ವಿತರಣಾ ಸಮಾರಂಭದಲ್ಲಿ ಮಾತನಾಡಿರು.
ಇಂದಿನ ಸಮಯದಲ್ಲಿ ಯುವಕರು ಬೇರೆ ಬೇರೆ ದಾರಿ ಕಡೆ, ದುಶ್ಚಟಗಳಿಗೆ ಬಲಿಯಾ ಗುತ್ತಿದ್ದಾರೆ. ಸಾಮಾಜಿಕ ಸೇವೆಗಳು, ಸಹಾಯ ಹಸ್ತ ಚಾಚುವಂತಹ ಯುವ ಮನಸ್ಸುಗಳು ಸಿಗು ವುದೇ ವಿರಳವಾಗಿದೆ, ಇಂತಹ ಕಾಲದಲ್ಲಿ ಮನಾ ಯುವ ಬ್ರಿಗೇಡ್ ಯುವಕರು, 44 ನೇ ವಾರ್ಡಿ ನಲ್ಲಿ ಅತ್ಯುತ್ತಮ ಸಾಮಾಜಿಕ ಸೇವೆ ಮಾಡುವ ಮೂಲಕ ಜವಾಬ್ದಾರಿ ಹೆಚ್ಚಿಸಿಕೊಂಡಿ ದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡ ದಿ. ಜೆ.ಎಂ. ಹನುಮಂತಪ್ಪ ಅವರಿಗೆ ಮರ ಣೋತ್ತರ ಕುಂದುವಾಡ ರತ್ನ ಪ್ರಶಸ್ತಿ ಹಾಗೂ ಸಿಆರ್ಪಿಎಫ್ ಯೋಧ ಆನಂದ್ ಎಸ್. ಹೆಚ್, ಎಸ್ಎಸ್ಬಿ ಯೋಧ ಭರ್ಮಪ್ಪ, ಸಮಾಜ ಸೇವಕ ರಾಜು ಕರೂರು ಅವರಿಗೆ `ಕುಂದುವಾಡ ಯುವ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಮಾಜ ಸೇವಕರಿಗೆ ಸನ್ಮಾನಿಸಿ ಗೌರವಿಸಲಾಯಿತು, ಕೆಪಿಎಲ್ ಚಾಂಪಿಯನ್ ಪವರ್ ಫೈಟರ್ಸ್ ತಂಡಕ್ಕೆ ಟ್ರೋಫಿ ವಿತರಿಸಲಾಯಿತು.
ಈ ಸಂದರ್ಭದಲ್ಲಿ ವರ್ತಕರಾದ ರಾಘವೇಂದ್ರ ಎನ್. ದಿವಾಕರ್, ಪಾಲಿಕೆ ಮಾಜಿ ಸದಸ್ಯ ಹೆಚ್. ತಿಪ್ಪಣ್ಣ, ಮುಖಂಡರಾದ ಬಾಡದ ಆನಂದರಾಜ್, ನಾಗಭೂಷಣ್ ವಾಣಿ, ಮಿಟ್ಲಕಟ್ಟೆ ಚಂದ್ರಪ್ಪ, ಶಿವಪ್ಪ, ಜೆ.ಸಿ. ದೇವರಾಜ್, ಎನ್.ಟಿ. ನಾಗರಾಜ್, ಸಣ್ಣಿಂಗಪ್ಪ, ಮಂಜಪ್ಪ, ಗಿರೀಶ್ ದೇವರಮನೆ, ಪತ್ರಕರ್ತ ಮಧು ನಾಗರಾಜ್ ಕುಂದುವಾಡ ಸೇರಿದಂತೆ ಮತ್ತಿತರರಿದ್ದರು.