ದಾವಣಗೆರೆ, ಜು.7- ನಗರ ಪಾಲಿಕೆಯ 38ನೇ ವಾರ್ಡಿನ ಎಂಸಿಸಿ `ಬಿ’ ಬ್ಲಾಕ್ ನಲ್ಲಿರುವ ಈಜುಕೊಳ ಆವರಣದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೋವಿಡ್ ಲಸಿಕಾ ಶಿಬಿರ ಜರುಗಿತು.
ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಹಾಗೂ ಶಾಮನೂರು ಮಲ್ಲಿಕಾರ್ಜುನ್ ಅವರುಗಳ ಕೊಡುಗೆಯಿಂದ ಹಾಗೂ ವಾರ್ಡಿನ ಪಾಲಿಕೆ ಸದಸ್ಯ ಗಡಿಗುಡಾಳ್ ಮಂಜುನಾಥ್ ಅವರುಗಳ ನೇತೃತ್ವದಲ್ಲಿ ಯುವಕರಿಗೆ ಉಚಿತ ಕೋವಿಡ್ ಲಸಿಕೆ ನೀಡಲಾಯಿತು.
ಶಿಬಿರಕ್ಕೆ ಆಗಮಿಸಿದ್ದ ಜೆಜೆಎಂಸಿ ಪ್ರಾಂಶುಪಾಲ ಡಾ.ಎಸ್.ಬಿ.ಮುರುಗೇಶ್, ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್.ಕುಮಾರ್, ಇತರರನ್ನು ಸನ್ಮಾನಿಸಿ, ಗೌರವಿಸಲಾಯಿತು. ಶಿಬಿರದಲ್ಲಿ ಆಲೂರು ಲಿಂಗರಾಜ್, ಸತೀಶ್, ಪ್ರಮೋದ್, ಪ್ರಜ್ವಲ್, ನಿಖಿಲ್, ನೀಲಕಂಠಪ್ಪ, ಮನೀಶ್, ಮಂಜುನಾಥ್ ಮದಕರಿ, ಕೆ.ಬಿ.ಮಂಜುನಾಥ್, ಶೌಕತ್ ಅಲಿ, ನವೀನ್ ನಲವಾಡಿ ಮತ್ತಿತರರು ಹಾಜರಿದ್ದರು.