ಇತಿಹಾಸದಲ್ಲಿ ಉಳಿಯುವ ಕಾರ್ಯವನ್ನು ಮಾಡಿದ ಪುಟ್ಟರಾಜ ಗವಾಯಿಗಳು

ಇತಿಹಾಸದಲ್ಲಿ ಉಳಿಯುವ ಕಾರ್ಯವನ್ನು ಮಾಡಿದ ಪುಟ್ಟರಾಜ ಗವಾಯಿಗಳು - Janathavaniಶ್ರೀ ಕಲ್ಲಯ್ಯಜ್ಜನವರ ವಿಶ್ಲೇಷಣೆ

ದಾವಣಗೆರೆ, ಫೆ. 14- ಪುಟ್ಟರಾಜ ಗವಾಯಿಗಳು ಇತಿಹಾಸದಲ್ಲಿ ಉಳಿಯುವ ಕಾರ್ಯವನ್ನು ಮಾಡಿದರು ಎಂದು ಗದಗ-ದಾವಣಗೆರೆ-ಶಿವಮೊಗ್ಗ ಪುಣ್ಯಾಶ್ರಮದ ಶ್ರೀ ಕಲ್ಲಯ್ಯಜ್ಜ ಅವರು ವಿಶ್ಲೇಷಿಸಿದರು.

ಶ್ರೀಗಳು ನಗರದ ಚೌಕಿಪೇಟೆಯ ಶ್ರೀ ಬಕ್ಕೇಶ್ವರ ದೇವಸ್ಥಾನದಲ್ಲಿ ಶ್ರೀ ಎಡೆಯೂರು ಸಿದ್ಧಲಿಂಗೇಶ್ವರರ ಪುರಾಣ ಪ್ರವಚನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಯಡಿಯೂರು ಸಿದ್ಧಲಿಂಗೇಶ್ವರರು ಮತ್ತು ಪುಟ್ಟರಾಜ ಗವಾಯಿಗಳು ನಿಸ್ವಾರ್ಥ ಭಾವನೆಯಿಂದ ನಶಿಸುತ್ತಿರುವ ಧರ್ಮವನ್ನು ಉಳಿಸಲು ಶ್ರಮಿಸಿದರು ಎಂದು ಸ್ಮರಿಸಿದರು.

ಇಬ್ಬರೂ ಮಹಾಪುರುಷರು ತಮ್ಮ ಜೀವನದಲ್ಲಿ ಅನೇಕ ಅಡೆ-ತಡೆಗಳನ್ನು ಎದುರಿಸಿ, ಲೋಕ ಕಲ್ಯಾಣಕ್ಕಾಗಿ ಮುಂದಾದರು ಎಂದು ಹೇಳಿದರು.

ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಇಬ್ಬರೂ ತಮ್ಮ ಬಾಲ್ಯದಲ್ಲಿಯೇ ತಮ್ಮ ಪವಾಡವನ್ನು ತೋರಿಸಿದರು ಎಂದರು.

ಪುಟ್ಟರಾಜ ಗವಾಯಿಗಳು, ಪ್ರತಿವರ್ಷ ಪುರಾಣ ಪ್ರವಚನವನ್ನು ಅನೇಕ ವರ್ಷಗಳ ಕಾಲ ನಡೆಸಿಕೊಂಡು ಬಂದರು. ಗದಗದಲ್ಲಿ ಅಂಧ ಮಕ್ಕಳ ಆಶ್ರಮ ಸ್ಥಾಪನೆಯಾದ ನಂತರ ದಾವಣಗೆರೆಯಲ್ಲಿ ಎರಡನೆಯ ಆಶ್ರಮವನ್ನು ಆರಂಭಿಸಲು ಪ್ರೇರಣೆ ನೀಡಿದರು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶ್ರೀ ಕಲ್ಲಯ್ಯಜ್ಜನವರಿಗೆ 1456ನೇ ತುಲಾಭಾರವನ್ನು ಶ್ರೀಮತಿ ಪದ್ದಮ್ಮ ಕೋಂ ದಿ. ನಾರಾಯಣಪ್ಪ ಮತ್ತು ಮಕ್ಕಳು ನಡೆಸಿಕೊಟ್ಟರು.

ಯಾದಗಿರಿಯ ತೋಟಯ್ಯ ಶಾಸ್ತ್ರಿಗಳು ಯಡಿಯೂರು ಸಿದ್ಧಲಿಂಗೇಶ್ವರ ಸ್ವಾಮಿ ಪುರಾಣ ಪ್ರವಚನ ನಡೆಸಿಕೊಟ್ಟರು. ಕೊರೊನಾ ಕಾರಣದಿಂದಾಗಿ ಒಂದು ತಿಂಗಳ ಪುರಾಣ ಪ್ರವಚನವನ್ನು ಒಂದು ದಿನಕ್ಕೆ ಸೀಮಿತಗೊಳಿಸಲಾಗಿತ್ತು.

ಮುಖ್ಯ ಅತಿಥಿಗಳಾಗಿ ಶ್ರೀ ಬಕ್ಕೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಮಾಗಾನಹಳ್ಳಿ ಶಿವಾನಂದಪ್ಪ, ದಾವಣಗೆರೆ ವೀರೇಶ್ವರ ಪುಣ್ಯಾಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿಸ್ವಾಮಿ, ನಗರ ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಸೋಗಿ ಶಾಂತಕುಮಾರ್ ಮತ್ತಿತರರು ಆಗಮಿಸಿದ್ದರು.

ಆರಂಭದಲ್ಲಿ ಅಜ್ಜಂಪುರ ಶೆಟ್ರು ಮೃತ್ಯುಂಜಯ ಸ್ವಾಗತಿಸಿದರು.

error: Content is protected !!