ದಾವಣಗೆರೆ, ಏ. 15- ಪಾಲಿಕೆ ಮುಂಭಾಗದ ರೈಲ್ವೇ ಅಂಡರ್ ಬ್ರಿಡ್ಜ್ ಕೆಳಗಿನ ಕಸವನ್ನು ತೆರವುಗೊಳಿಸಿದ ಮೇಯರ್ ಎಸ್.ಟಿ. ವೀರೇಶ್, ಶಾಶ್ವತ ಪರಿಹಾರಕ್ಕೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಬುಧವಾರ ಸಂಜೆ ನಗರದಲ್ಲಿ ಮಳೆ ಸುರಿದ ಹಿನ್ನೆಲೆಯಲ್ಲಿ ರೈಲ್ವೇ ಕೆಳ ಸೇತುವೆಯಲ್ಲಿ ನೀರು ನಿಂತಿತ್ತು. ಇದನ್ನು ಗಮನಿರಿಸಿದ ಮೇಯರ್ ವೀರೇಶ್, ರಾತ್ರಿಯೇ ಸ್ಥಳಕ್ಕೆ ತೆರಳಿ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳೊಂದಿಗೆ ಕಸ ತೆರವುಗೊಳಿಸಿದ್ದರು.
ಗುರುವಾರ ಮುಂಜಾನೆಯ ಮತ್ತೆ ಸ್ಥಳಕ್ಕೆ ತೆರಳಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು.
ಅಲ್ಲದೆ ರೇಣುಕಾ ಮಂದಿರದ ಬಳಿ ಹಾದು ಹೋಗಿರುವ ರೈಲ್ವೇ ಟ್ರ್ಯಾಕ್ ಕೆಳಗಡೆ ಅಳವಡಿಸಿರುವ ತಗಡಿನ ಶೀಟುಗಳನ್ನು ಸರಿಪಡಿಸುವಂತೆ ಸೂಚಿಸಿದರು.
ಆದಷ್ಟು ಶೀಘ್ರದಲ್ಲಿಯೇ ಸಮಸ್ಯೆ ಸರಿಪಡಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.
ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಶಿವನಗೌಡ ಪಾಟೀಲ, ಆಯುಕ್ತ ವಿಶ್ವನಾಥ ಪಿ.
ಮುದಜ್ಜಿ, ಆರೋಗ್ಯಾಧಿಕಾರಿ ಡಾ.ಸಂತೋಷಕುಮಾರ್, ಮಧುಶ್ರೀ, ರಾಘವೇಂದ್ರ, ಲೋಹಿತ್,
ಸಾಮಾಜಿಕ ಕಾರ್ಯಕರ್ತ ಎಂ.ಜಿ.ಶ್ರೀಕಾಂತ್,
ಯುವ ಬ್ರಿಗೇಡ್‍ನ ಪವನ್, ನಿರಂಜನ ಇತರರು ಉಪಸ್ಥಿತರಿದ್ದರು.