ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ನವಜಾತ ಶಿಶು ಶ್ರವಣ ಶಕ್ತಿ ತಪಾಸಣೆ ವಿಭಾಗ ಪ್ರಾರಂಭ

ದಾವಣಗೆರೆ, ಫೆ.12- ಬಾಪೂಜಿ ಮಕ್ಕಳ ಆಸ್ಪತ್ರೆ ಯಲ್ಲಿ ಹೊಸದಾಗಿ ನವಜಾತ ಶಿಶು ಶ್ರವಣ ಶಕ್ತಿ ತಪಾ ಸಣೆ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ. ನಗರದ ಬಾಪೂಜಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿಯೂ ಆಗಿರುವ ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಅವರು ಮಕ್ಕಳ ಆಸ್ಪತ್ರೆಯ ಓಪಿಡಿ ವಿಭಾಗದ ರೂಂ ನಂ. 5 ರಲ್ಲಿ ತಪಾಸಣಾ ವಿಭಾಗವನ್ನು ನಿನ್ನೆ ಉದ್ಘಾಟಿಸುವುದರ ಮೂಲಕ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.

ಕಾರ್ಯಕ್ರಮದಲ್ಲಿ ಜ.ಜ.ಮು ವೈದ್ಯಕೀಯ ವಿದ್ಯಾಲಯದ ಪ್ರಾಂಶುಪಾಲ ಡಾ. ಎಸ್‌.ಬಿ. ಮುರುಗೇಶ್‌, ಮಕ್ಕಳ ವಿಭಾಗದ ಮುಖ್ಯಸ್ಥ ಡಾ. ಮೂಗನಗೌಡ, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ. ಮೋಹನ್‌ ಮರುಳಯ್ಯ, ಬಾಪೂಜಿ ಆಸ್ಪತ್ರೆಯ ನಿರ್ದೇಶಕ ಡಾ. ಕುಮಾರ್‌ ಉಪಸ್ಥಿತರಿದ್ದರು. 

ಇದರೊಂದಿಗೆ ಮಕ್ಕಳ ವಿಭಾಗದಲ್ಲಿ ಹೃದಯ ರೋಗ ವಿಭಾಗ, ಮಕ್ಕಳ ಶ್ವಾಸಕೋಶ ವಿಭಾಗ, ಮಕ್ಕಳ ಮೂತ್ರಪಿಂಡ ವಿಭಾಗ, ಮಕ್ಕಳ ಎಂಡೋಕ್ರೈನೋಲಜಿ, ಮಕ್ಕಳ ತಲಸ್ಸೇಮಿಯ ರಕ್ತದ ಕಾಯಿಲೆ, ನವಜಾತ ಶಿಶುಗಳ ಕಣ್ಣಿನ ಪರೀಕ್ಷೆ, ಮಕ್ಕಳ ಶಸ್ತ್ರ ಚಿಕಿತ್ಸೆ ಮತ್ತು ನವಜಾತ ಶಿಶು ವಿಭಾಗಗಳನ್ನು ಪ್ರಾರಂಭಿಸಲಾಗಿದೆ. ಇವೆಲ್ಲದರ ಸೌಲಭ್ಯಗಳ ಸದುಪಯೋಗವನ್ನು ನಗರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಪಡೆಯಬಹುದು.

error: Content is protected !!