4ನೇ ವರ್ಗದ ಜನರಿಗೆ ಅಸ್ಮಿತೆಯ ಗೌರವ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ

ಜಾತ್ರೆ ಬರೀ ಜನಜಂಗುಳಿ ಆಗಬಾರದು. ಅದೊಂದು ಯಾತ್ರೆಯಂತಿರಬೇಕು. ಜಾತ್ರೆಗಳ ಮೂಲಕ ಆತ್ಮಾವಲೋಕನ ಮಾಡಿಕೊಂಡ ಬದಲಾವಣೆಯಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಆಗುತ್ತೆ ಎಂದು ಸಾಣೇಹಳ್ಳಿ ಸ್ವಾಮೀಜಿ ಒತ್ತಿ ಹೇಳಿದರು.

ವಾಲ್ಮೀಕಿ ಜಾತ್ರೆಯ ಧರ್ಮಸಭೆಯಲ್ಲಿ ಶ್ರೀ ನಿಜಗುಣಾನಂದ ಸ್ವಾಮೀಜಿ

ರಾಜನಹಳ್ಳಿ (ಚಳ್ಳಕೆರೆ ತಿಪ್ಪೇಸ್ವಾಮಿ ವೇದಿಕೆ) ಫೆ.09- ದೇಶದಲ್ಲಿ ಭಾವೈಕ್ಯತೆ ಹಾಗೂ ಸಮ ಸಮಾಜ ನಿರ್ಮಾಣವಾ ಗಬೇಕಾದರೆ ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ನಾಯಕನ ಅವಶ್ಯಕತೆ ನಮ್ಮ ದೇಶಕ್ಕಿದೆ ಎಂದು ಬೈಲೂರಿನ ನಿಷ್ಕಲ್ಮಠ ಮಂಟಪದ ಶ್ರೀ ನಿಜಗುಣಾನಂದ ಸ್ವಾಮೀಜಿ ಹೇಳಿದರು.

ಅವರು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದಲ್ಲಿ ನಡೆದ 3ನೇ ವರ್ಷದ ಐತಿಹಾಸಿಕ ವಾಲ್ಮೀಕಿ ಜಾತ್ರೆಯಲ್ಲಿ 2ನೇ ದಿನವಾದ ಮಂಗಳವಾರ ಬೆಳಿಗ್ಗೆ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಒಂದು ದೇಶ ಸಂತೃಪ್ತಿಯಿಂದ ಇರಬೇ ಕಾದರೆ ರೈತ ಬಹಳ ಮುಖ್ಯ. ರೈತನಿಂದ ಈ ದೇಶದಲ್ಲಿರುವ ಅನ್ನ  ತಿನ್ನುತ್ತಿದ್ದೇವೆ. ಮನು ಷ್ಯನಿಗೆ ಮೂಲಭೂತವಾಗಿ ಅನ್ನ, ಬಟ್ಟೆ, ಅರಿವು, ಆಶ್ರಯ ಅತಿ ಅವಶ್ಯವಾಗಿದ್ದು, ಅನ್ನ ಕೊಡುವ ರೈತ ಚೆನ್ನಾಗಿದ್ದರೆ ಮಾತ್ರ ದೇಶ ಸಂತೃಪ್ತಿಯಾಗಿರುತ್ತದೆ ಎಂದು ಸ್ವಾಮೀಜಿ ಪ್ರತಿಪಾದಿಸಿದರು.

4ನೇ ವರ್ಗದ ಜನರಿಗೆ ಅಸ್ಮಿತೆಯ ಗೌರವ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದ ಸ್ವಾಮೀಜಿ ಅವರು, ಜನರನ್ನು ಅಜ್ಞಾನದಿಂದ ಜ್ಞಾನದ ಕಡೆಗೆ ಕರೆದೊಯ್ಯಲು ವಾಲ್ಮೀಕಿ ಜಾತ್ರೆ ವೇದಿಕೆಯಾಗಿದೆ ಎಂದರು.

ಜ್ಞಾನ ಎಂದರೆ ಇನ್ನೊಬ್ಬರನ್ನು ತುಳಿದು ಆಳುವುದಲ್ಲ. ನಿಮ್ಮನ್ನು ಅರಿಯದ ಜ್ಞಾನ ಅಜ್ಞಾನ ಇದ್ದಂತೆ. ಹಾಗಾಗಿ ನಾವು ಜ್ಞಾನದ ಸ್ಪಷ್ಟತೆ ಕಡೆಗೆ ಬರಬೇಕು. ಜ್ಞಾನಕ್ಕಿಂತ ಸ್ಪಷ್ಟ ತೆಯ ಜ್ಞಾನ ಬಹಳ ಮುಖ್ಯ. ವಾಲ್ಮೀಕಿ, ಕನ ಕದಾಸರು, ಪುರಂದರ ದಾಸರು, ಬುದ್ಧ, ಬಸವಣ್ಣ, ಅಂಬೇಡ್ಕರ್‌ ಅವರು ತಮ್ಮಲ್ಲಿ ಸ್ಪಷ್ಟತೆಯ ಜ್ಞಾನದಿಂದಾಗಿ ಸಮಾಜಕ್ಕೆ ಬೆಳಕು ನೀಡಿದರು. ಅಂತಹ ಬೆಳಕು ಈ ಜಾತ್ರೆಯಲ್ಲಿ ಮೂಡಿದೆ. ಒಂದು ಗ್ರಂಥಸ್ಥವಾಗಿದ್ದ ವಾಲ್ಮೀಕಿಯನ್ನು ಜಾತ್ರೆ ಮೂಲಕ ಜನಮುಖಿಯನ್ನಾಗಿ ಮಾಡಿದ ಕೀರ್ತಿ ಶ್ರೀಗಳಿಗೆ ಸಲ್ಲುತ್ತದೆ.

ನಮ್ಮನ್ನು ನಾವು ಮರೆತಾಗ ಸಮಸಮಾಜದ ಹತ್ತಿರವಾಗುತ್ತೇವೆ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳ ಬೇಕು. ನಾವೆಲ್ಲರೂ ಸೇರಿ ಭಾವೈಕ್ಯತೆಯ ಭಾರತ ಕಟ್ಟಲು ಸಂಕಲ್ಪ ಮಾಡೋಣ. ಬುದ್ಧ, ಬಸವ, ಅಂಬೇಡ್ಕರ್‌ ಅವರ ಸಾಕ್ಷಿ ಪ್ರಜ್ಞೆಯಾಗಿ ನಾಡಿನಲ್ಲಿ ಉಳಿದಿರುವ ರಾಜಕಾರಣಿ ಸತೀಶ್‌ ಜಾರಕಿಹೊಳಿ ಅವರನ್ನು ನಾವೆಲ್ಲರೂ ಬೆಂಬಲಿಸಬೇಕೆಂದು ಸ್ವಾಮೀಜಿ ಹೇಳಿದರು.

ಸಾಣೇಹಳ್ಳಿ ಮಠದ ಡಾ. ಪಂಡಿತಾ ರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತ ನಾಡಿ, ಬೇಟೆಗಾರನಾಗಿದ್ದ ವಾಲ್ಮೀಕಿ ಅವರು ಹೇಗೆ ಪರಿವರ್ತನೆ ಆಗಿ ಸಮಾಜಕ್ಕೆ ಬೆಳಕು ನೀಡಿದ್ದಾರೋ ನಾವು ಹಾಗೆ ಪರಿವರ್ತನೆ ಆಗಬೇಕು. ಅಸೂಯೆ, ಸ್ವಾರ್ಥ, ಅಧಿಕಾ ರದ ದುರಾಸೆಯಿಂದ ದೂರ ಇದ್ದು, ಪರಿವ ರ್ತನೆಯ ಮನೋಸ್ಥಿತಿಯನ್ನು ಮೈಗೂಡಿಸಿ ಕೊಂಡಾಗ ಈ ಜಾತ್ರೆ ಯಾತ್ರೆ ಆಗುತ್ತದೆ.

ಈ ಮಠದ ಲಿಂಗೈಕ್ಯ ಶ್ರೀಗಳು ತಾಯಿ ಹೃದಯ ಹೊಂದಿದ್ದರು. ಸದೃಢ ಸಮಾಜ ಕಟ್ಟುವ ಕನಸು ಹೊಂದಿದ್ದರು. ನಮ್ಮ ಜೊತೆ ನಿರಂತರ ಸಂಪರ್ಕ ಇಟ್ಟುಕೊಂಡು ತುಂಬಾ ಆತ್ಮೀಯರಾಗಿದ್ದರು. ದುರ್ದೈವ ಅಪಘಾತದಲ್ಲಿ ಲಿಂಗೈಕ್ಯರಾದರು. ಒಬ್ಬರಿಗಿಂತ ಮತ್ತೊಬ್ಬರು ಸಮರ್ಥರು ಎಂಬಂತೆ ಈಗಿನ ಶ್ರೀಗಳು ಜನಪರ ಕಾರ್ಯದಲ್ಲಿ ತೊಡಗಿದ್ದಾರೆ. ಗುರುಗಳಿಗೆ ಶಿಷ್ಯರ ಸಹಭಾಗಿತ್ವ ಬಹಳ ಮುಖ್ಯ. ಸಿರಿಗೆರೆಯ ಲಿಂಗೈಕ್ಯ ಶ್ರೀಗಳು ಹೇಳಿದಂತೆ ಶಿಷ್ಯರಿಗೆ ಅಂಜಿ ಗುರು, ಗುರುವಿಗೆ ಅಂಜಿ ನಡೆಯುವ ಶಿಷ್ಯ ಇದ್ದಾಗ ಸಮಾಜ ಸದೃಢವಾಗುತ್ತದೆ. ಗುರು-ಶಿಷ್ಯರಿಬ್ಬರೂ ತಪ್ಪು ಹೆಜ್ಜೆ ಇಡದಂತೆ ಎಚ್ಚರ ವಹಿಸಿದಾಗ ಸಮಾಜ ಉನ್ನತ ಸ್ಥಾನಕ್ಕೆ ಹೋಗುತ್ತದೆ. ಸಕಲ ಜೀವಾತ್ಮರಿಗೂ ಲೇಸನ್ನೇ ಮಾಡಿದರೂ ತಪ್ಪೇ?ಎಂದು ನೇರವಾಗಿ, ನಿಷ್ಠೂರವಾಗಿ ಹೇಳಿ, ಜಾತಿಗಿಂತ ಮಾನವ ಕುಲ ಒಂದೇ ಎಂಬ ಮನೋಭಾವನೆಯಿಂದ ಕಲ್ಯಾಣ ನಾಡನ್ನು ಕಟ್ಟಬಹುದು. ಜಾತಿಯ ಸೆಳೆತ ಹೆಚ್ಚಾದರೆ ಸಮಗ್ರ ದೇಶ, ರಾಜ್ಯ ಕಟ್ಟಲು ಸಾಧ್ಯವಿಲ್ಲ ಎಂದು ಪಂಡಿತಾರಾಧ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಶ್ರೀ ದುರ್ದುಂಡೇಶ್ವರ ಮಹಾಂತ ಸ್ವಾಮೀಜಿ ಮಾತನಾಡಿ, ಪ್ರತಿ ಮಂಗಳವಾರ ಮೌನವಾಗಿರುವ ನಾವು ವಾಲ್ಮೀಕಿ ಜಾತ್ರೆಗಾಗಿ ಮೌನ ಮುರಿದಿದ್ದೇವೆ. ನಾವು-ನೀವು ಒಂದಾಗಿ ಬದುಕುವುದೇ ನಿಜವಾದ ಧರ್ಮ. ಮಹಾತ್ಮರು ಜಾತಿಯ ಸಂಕೇತವಲ್ಲ. ಇಡೀ ಮಾನವ ಕುಲದ ಉದ್ಧಾರದ ಸಂಕೇತವಾಗಿದ್ದರು. ಅಂತಹ ಮಹಾತ್ಮ ವಾಲ್ಮೀಕಿ ಹೆಸರಿನಲ್ಲಿ ಅರ್ಥಪೂರ್ಣ ಜಾತ್ರೆಯನ್ನು ಸಂಘಟಿಸಿ ಶ್ರೀಗಳು ಇತಿಹಾಸದ ಪುಟದಲ್ಲಿ ಉಳಿಯುವಂತೆ ಮಾಡಿದ್ದಾರೆ ಎಂದರು.

ಶಿಡ್ಲಕೋಣ ವಾಲ್ಮೀಕಿ ಆಶ್ರಮದ ಶ್ರೀ ಸಂಜಯಕುಮಾರ ಸ್ವಾಮೀಜಿ, ಗೊಲ್ಲಪಲ್ಲಿ ವಾಲ್ಮೀಕಿ ಆಶ್ರಮದ ಶ್ರೀ ವರದಾನೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಸಿ. ಲಿಂಗಯ್ಯ, ಸಿರಿಗೆರೆ ಬೃಹನ್ಮಠದ ಆಡಳಿತಾಧಿಕಾರಿ ಪ್ರೊ. ಎಸ್‌.ಬಿ. ರಂಗನಾಥ್‌ ಅವರನ್ನು ಸನ್ಮಾನಿಸಲಾಯಿತು.

ಜಾತ್ರಾ ಸಮಿತಿ ಸಂಚಾಲಕ ಹೊದಿಗೆರೆ ರಮೇಶ್‌ ಸ್ವಾಗತಿಸಿದರು. ಟಿ. ಈಶ್ವರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಶಾಸಕರಾದ ಸತೀಶ್‌ ಜಾರಕಿಹೊಳಿ, ಹೆಚ್‌.ಡಿ ರೇವಣ್ಣ, ರಾಜಾ ವೆಂಕಟಪ್ಪ ನಾಯಕ, ಡಾ. ಯತೀಂದ್ರ ಸಿದ್ದರಾಮಯ್ಯ, ಅನಿಲ್‌ ಚಿಕ್ಕಮಾಧು, ಎಸ್‌.ವಿ. ರಾಮಚಂದ್ರ, ಮಾಜಿ ಶಾಸಕರಾದ ಬಿ.ಪಿ. ಹರೀಶ್‌, ಹೆಚ್‌.ಎಸ್‌. ಶಿವಶಂಕರ್‌, ಬಿ. ಚಿದಾನಂದಪ್ಪ, ಸಿರಿಗೆರೆ ತಿಪ್ಪೇಶ್‌, ಹರ್ತಿಕೊಟೆ ವೀರೇಂದ್ರಸಿಂಹ, ಶಾಂತಲಾ ರಾಜಣ್ಣ, ಮಠದ ಆಡಳಿತಾಧಿಕಾರಿ ಟಿ ಓಬಳಪ್ಪ, ಎಂ. ನಾಗೇಂದ್ರಪ್ಪ, ಬಿ. ವೀರಣ್ಣ, ಟಿ. ಶ್ರೀನಿವಾಸ್‌ ದಾಸಕರಿಯಪ್ಪ, ವಿನಾಯಕ ಪೈಲ್ವಾನ್‌, ಗಣೇಶ್‌ ಹುಲ್ಮನಿ, ಜಿಗಳಿ ಆನಂದಪ್ಪ ಮತ್ತಿತರರು ವೇದಿಕೆಯಲ್ಲಿದ್ದರು.


4ನೇ ವರ್ಗದ ಜನರಿಗೆ ಅಸ್ಮಿತೆಯ ಗೌರವ ಸಿಕ್ಕಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ - Janathavaniಜಿಗಳಿ ಪ್ರಕಾಶ್‌,
[email protected]

error: Content is protected !!