ನಗರದ ವೀರೇಶ್ವರ ಪುಣ್ಯಾಶ್ರಮದ ಶಿಲಾಮಂಟಪ ಯಡಿಯೂರಪ್ಪನವರಿಂದ ಶೀಘ್ರ ಲೋಕಾರ್ಪಣೆ

ದಾವಣಗೆರೆ, ಫೆ. 8- ನಗರಕ್ಕೆ ಸಮೀಪದ ಬಾಡಾ ಕ್ರಾಸ್ ಬಳಿಯಿರುವ ವೀರೇಶ್ವರ ಪುಣ್ಯಾಶ್ರ ಮದಲ್ಲಿ ಎರಡೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾ ಮಂಟಪವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೇ ತಿಂಗಳಲ್ಲಿ ಲೋಕಾರ್ಪಣೆ ಮಾಡುವರು.

ಈ ವಿಷಯವನ್ನು ಆಶ್ರಮದ ಕಾರ್ಯದರ್ಶಿ ಎ.ಹೆಚ್. ಶಿವಮೂರ್ತಿ ಸ್ವಾಮಿ ಅವರು ಬನದ ಹುಣ್ಣಿಮೆ ಅಂಗವಾಗಿ ಆಶ್ರಮದಲ್ಲಿ ಕಳೆದ ವಾರ ನಡೆದ ಶಿವಾನುಭವ ಗೋಷ್ಠಿ ಕಾರ್ಯಕ್ರಮದಲ್ಲಿ ತಿಳಿಸಿದರು.

ಈಗಾಗಲೇ ಶೇ. 95 ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಪುಟ್ಟರಾಜ ಗವಾಯಿಗಳ ಆಶಯದಂತೆ ಶಿಲಾ ಮಂಟಪ ನಿರ್ಮಾಣವಾ ಗುತ್ತಿದೆ.  ದಾನಿಗಳು ಸ್ವಯಂ ಪ್ರೇರಿತರಾಗಿ ಶಿಲಾ ಮಂಟಪದ ನಿರ್ಮಾಣಕ್ಕೆ ದೇಣಿಗೆ ನೀಡುತ್ತಿದ್ದಾರೆಂದು ಹರ್ಷ ವ್ಯಕ್ತಪಡಿಸಿದರು.

ಆಶ್ರಮದ ನಿವೇಶನ ಖರೀದಿಸಲು ಹನ್ನೆರ ಡೂವರೆ ಲಕ್ಷ ರೂ.ಗಳ ಅವಶ್ಯಕತೆ ಇರುವಾಗ, ಪುಟ್ಟರಾಜ ಗವಾಯಿಗಳು ನೂರಾರು ತುಲಾಭಾರ ವನ್ನು ನಡೆಸುವ ಮೂಲಕ ನಿವೇಶನಕ್ಕೆ ಅಗತ್ಯವಾದ ಹಣವನ್ನು ಒದಗಿಸಿಕೊಟ್ಟರು ಎಂದು ಸ್ಮರಿಸಿದರು.

ಆಶ್ರಮ ದಿನದಿಂದ ದಿನಕ್ಕೆ ಅಭಿವೃದ್ಧಿ ಹೊಂ ದುತ್ತಾ, ಅಂಧ ಮಕ್ಕಳಿಗೆ ಆಶ್ರಯ ತಾಣವಾಗಿದೆ. ಆಶ್ರಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಿಲಾ ಮಂಟಪ ಭಕ್ತರನ್ನು ಆಕರ್ಷಿಸುತ್ತಿದ್ದು, ಇಂತಹ ಶಿಲಾ ಮಂಟಪ ಸುತ್ತಮುತ್ತಲ ಭಾಗದಲ್ಲಿಯೇ ಇಲ್ಲ ಎಂದು ಹೆಮ್ಮೆಯಿಂದ ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ರಾಜ್ಯದಲ್ಲಿ ಗದುಗಿನ ಪುಣ್ಯಾಶ್ರಮ ಮೊದಲನೆಯದಾಗಿದ್ದು, ದಾವಣಗೆರೆಯದು ಎರಡನೆಯದಾಗಿದೆ. ಮೂರ ನೆಯ ಪುಣ್ಯಾಶ್ರಮ ಶಿವಮೊಗ್ಗದಲ್ಲಿದೆ ಎಂದರು.

ದಾವಣಗೆರೆ ಭಕ್ತರಿಗೂ ಪುಟ್ಟರಾಜ ಗವಾಯಿಗಳಿಗೂ ಅವಿನಾಭಾವ ಸಂಬಂಧವಿದ್ದು, ದಾವಣಗೆರೆಗೆ ಬರಲು ಪುಟ್ಟರಾಜ ಗವಾಯಿಗಳು ಬಹಳ ಇಷ್ಟಪಡುತ್ತಿದ್ದರು. ನಗರದ ಬಕ್ಕೇಶ್ವರ ದೇವಸ್ಥಾನದಲ್ಲಿ ಪುರಾಣ ಪ್ರವಚನವನ್ನು ಸುದೀರ್ಘ ಅವಧಿವರೆಗೆ ನಡೆಸಿಕೊಂಡು ಬಂದರು ಎಂದು ತಿಳಿಸಿದರು.

ಮುಖ್ಯ ಅತಿಥಿಗಳಾಗಿ ಕನ್ನಡ ಪರ ಸಂಘಟನೆಗಳ ಮುಖಂಡರಾದ ಕೆ.ಜೆ. ಯಲ್ಲಪ್ಪ, ಐಗೂರು ಸುರೇಶ್, ಆಶ್ರಮದ ಉಪಾಧ್ಯಕ್ಷ ಟಿ.ಕೆ. ಕರಿಬಸಪ್ಪ, ಸಹ ಕಾರ್ಯದರ್ಶಿ ಜೆ.ಎನ್. ಕರಿಬಸಪ್ಪ, ಹಿರಿಯ ಪತ್ರಕರ್ತ ಬಕ್ಕೇಶ್ ನಾಗನೂರು ಮತ್ತಿತರರು ಆಗಮಿಸಿದ್ದರು.

ಆಶ್ರಮದ ಅಂಧ ಮಕ್ಕಳು ಪ್ರಾರ್ಥಿಸಿದರು. ಶಿವಬಸಯ್ಯ ಕಾರ್ಯಕ್ರಮ ನಿರೂಪಿಸಿದರು.

error: Content is protected !!