ದಾವಣಗೆರೆ, ಜೂ. 30 – ಕೋವಿಡ್-19 ಮುಂಜಾಗ್ರತಾ ಕ್ರಮವಾಗಿ ಲಾಕ್‌ಡೌನ್ ಅವಧಿಯಲ್ಲಿ ಜಿಲ್ಲೆಯ 1 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ `ದ್ರೋಣ್ ಎಜು’ ಎಂಬ ಆಪ್ ಮೂಲಕ ಉಚಿತವಾಗಿ ಆನ್‌ಲೈನ್ ಮೂಲಕ ಶಿಕ್ಷಣ ನೀಡಲಾಗುವುದು ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
1 ರಿಂದ 10ನೇ ತರಗತಿ ರಾಜ್ಯ ಪಠ್ಯಕ್ರಮದ ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮದ ವಿದ್ಯಾರ್ಥಿ ಗಳಿಗೆ ಪುನಶ್ಚೇತನ ಗೊಳಿಸಲು ಆಧುನಿಕ ಶಿಕ್ಷಣ ಪದ್ಧತಿಗೆ ತಕ್ಕಂತೆ `ದ್ರೋಣ್ ಎಜು’ ಆನ್‌ಲೈನ್ ಲರ್ನಿಂಗ್ ಆಪ್ ಪರಿಚಯಿಸಲಾಗಿದೆ.
1 ರಿಂದ 10ನೇ ತರಗತಿ ಪಠ್ಯಕ್ರಮದ ವಿಡಿಯೋಗಳನ್ನು ನೇರ ಸಂವಹನ ಹಾಗೂ ರಸಪ್ರಶ್ನೆಗಳನ್ನು ಜಿಲ್ಲೆಯ ಸಂಪನ್ಮೂಲ ಶಿಕ್ಷಕರಿಂದ ಹಾಗೂ ನುರಿತ ಶಿಕ್ಷಣ ತಜ್ಞರಿಂದ ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡಲು ದ್ರೋಣ್ ಎಜು ಸಂಸ್ಥೆ ಮುಂದಾಗಿದೆ.
ಇದರ ಸದುಪಯೋಗ ಪಡೆಯಲು `ದ್ರೋಣ್ ಎಜು’ ಆಪ್ ಡೌನ್‌ಲೋಡ್ ಮಾಡಿಕೊಂಡು ಜಿಲ್ಲೆ ಯ ಕೋಡ್ ಸಂಖ್ಯೆ A 106 ND 939 ಬಳಸಿ ನೋಂದಣಿ ಮಾಡಿ ಕೊಳ್ಳಲು ಮುಖ್ಯೋಪಾಧ್ಯಾಯರು ಮಕ್ಕಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐ ಸೂಚನೆ ನೀಡಿದ್ದಾರೆ.