ದಾವಣಗೆರೆ ಕ್ಲಬ್ : ಮತ್ತಿಹಳ್ಳಿ ಗುಂಪಿಗೆ ಅಧಿಕ ಸ್ಥಾನ

 

ದಾವಣಗೆರೆ ಕ್ಲಬ್ : ಮತ್ತಿಹಳ್ಳಿ ಗುಂಪಿಗೆ ಅಧಿಕ ಸ್ಥಾನ - Janathavani

ದಾವಣಗೆರೆ ಕ್ಲಬ್ : ಮತ್ತಿಹಳ್ಳಿ ಗುಂಪಿಗೆ ಅಧಿಕ ಸ್ಥಾನ - Janathavani

ದಾವಣಗೆರೆ,ಜ.31- ಸ್ಥಳೀಯ ಪ್ರತಿಷ್ಠಿತ ಕ್ರೀಡಾ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ದಾವಣಗೆರೆ ಕ್ಲಬ್ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಕೈಗಾರಿಕೋದ್ಯಮಿ ಮತ್ತಿಹಳ್ಳಿ ವೀರಣ್ಣ ಅವರ ನೇತೃತ್ವದ ಗುಂಪಿಗೆ ಅತ್ಯಧಿಕ ಸ್ಥಾನಗಳು ಲಭಿಸಿವೆ.

ಆಡಳಿತ ಮಂಡಳಿಯ ಒಟ್ಟು 11 ಸ್ಥಾನಗಳ ಪೈಕಿ ಮತ್ತಿಹಳ್ಳಿ ವೀರಣ್ಣ ಅವರ ನೇತೃತ್ವದ ಗುಂಪಿಗೆ 6 ಮತ್ತು ಅವರ ಪ್ರತಿಸ್ಪರ್ಧಿ ನಿವೃತ್ತ ಅಭಿಯಂತರ ಯು.ಜಿ. ಶಿವಕುಮಾರ್ ಅವರ ನೇತೃತ್ವದ ಗುಂಪಿಗೆ 5 ಸ್ಥಾನಗಳು ಲಭಿಸಿವೆ. 

ಮತ್ತಿಹಳ್ಳಿ ವೀರಣ್ಣ ಅವರಲ್ಲದೇ, ಅವರ ಗುಂಪಿನಿಂದ ಎ.ಬಿ.ಚಂದ್ರಶೇಖರ್, ಎಸ್.ಜಿ. ಉಳವಯ್ಯ, ಹೆಚ್.ಸಿ. ಲಿಂಗರಾಜ ವಾಲಿ, ಹೆಚ್.ವಿ. ರುದ್ರೇಶ್ ಮತ್ತು ಎಸ್. ಕೆ. ಪ್ರಶಾಂತ್ ಗುಪ್ತಾ ಅವರುಗಳು ಜಯ ಗಳಿಸಿದ್ದಾರೆ.

ಯು.ಜಿ. ಶಿವಕುಮಾರ್ ಅವರ ಗುಂಪಿನಿಂದ ಸ್ಪರ್ಧಿಸಿದವರಲ್ಲಿ ರವಿಶಂಕರ್ ಪಲ್ಲಾಗಟ್ಟೆ, ಬೆಳ್ಳೂಡಿ ಸದಾನಂದ, ಬಿ.ಜೆ. ಅಭಿಷೇಕ್ (ಬೇತೂರು), ಮಲ್ಲಿಕಾರ್ಜುನ ಬಾದಾಮಿ ಮತ್ತು ಎಸ್.ಕೆ. ತಿಮ್ಮರಾಜ ಗುಪ್ತಾ ಅವರುಗಳು ಆಯ್ಕೆಯಾಗಿದ್ದಾರೆ.

ಪದಾಧಿಕಾರಿಗಳು ಯಾರಾರು ? : ವಿಜೇತರಾದವರಲ್ಲಿ ಮತ್ತಿಹಳ್ಳಿ ವೀರಣ್ಣ ಅಧ್ಯಕ್ಷರಾಗಿದ್ದಾರೆ. ಎ.ಬಿ. ಚಂದ್ರಶೇಖರ್ ಉಪಾಧ್ಯಕ್ಷರಾಗಿದ್ದರೆ, ರವಿಶಂಕರ್ ಪಲ್ಲಾಗಟ್ಟೆ ಗೌರವ ಕಾರ್ಯದರ್ಶಿಯಾಗಿ, ಎಸ್.ಜಿ. ಉಳವಯ್ಯ ಗೌರವ ಸಹ ಕಾರ್ಯದರ್ಶಿಯಾಗಿ, ಹೆಚ್.ಸಿ. ಲಿಂಗರಾಜ ವಾಲಿ ಖಜಾಂಚಿಯಾಗಿ ಚುನಾಯಿತರಾಗಿದ್ದಾರೆ.

ಬೆಳ್ಳೂಡಿ ಸದಾನಂದ, ಹೆಚ್.ವಿ. ರುದ್ರೇಶ್, ಬಿ.ಜೆ. ಅಭಿಷೇಕ್ ಬೇತೂರು,  ಮಲ್ಲಿಕಾರ್ಜುನ ಬಾದಾಮಿ, ಎಸ್.ಕೆ. ತಿಮ್ಮರಾಜ ಗುಪ್ತಾ ಹಾಗೂ ಎಸ್.ಕೆ. ಪ್ರಶಾಂತ್ ಗುಪ್ತಾ ನಿರ್ದೇಶಕರುಗಳಾಗಿದ್ದಾರೆ.

ವಿಜೇತರು ಪಡೆದ ಮತಗಳು : ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಬೆಳ್ಳೂಡಿ ಸದಾನಂದ ಅತ್ಯಧಿಕ 270 ಮತಗಳನ್ನು ಪಡೆಯುವುದರ ಮೂಲಕ ಮತ ಗಳಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ರವಿಶಂಕರ್ ಪಲ್ಲಾಗಟ್ಟೆ 247 ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, ಹೆಚ್.ಸಿ. ಲಿಂಗರಾಜ ವಾಲಿ 243 ಮತಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನಗಳನ್ನು ಮತ್ತಿಹಳ್ಳಿ ವೀರಣ್ಣ (237), ಹೆಚ್.ವಿ. ರುದ್ರೇಶ್ (230), ಬಿ.ಜಿ. ಅಭಿಷೇಕ್ (222), ಎಸ್.ಜಿ. ಉಳವಯ್ಯ (219), ಎ.ಬಿ. ಚಂದ್ರಶೇಖರ್ (217), ಮಲ್ಲಿಕಾರ್ಜುನ ಬಾದಾಮಿ (209), ಎಸ್.ಕೆ. ತಿಮ್ಮರಾಜ ಗುಪ್ತಾ (199), ಎಸ್.ಕೆ. ಪ್ರಶಾಂತ್ ಗುಪ್ತಾ (198) ಪಡೆದಿದ್ದಾರೆ.

ಎಸ್.ಕೆ. ಪ್ರಶಾಂತ್ ಗುಪ್ತಾ ಮತ್ತು ಬಿ.ಪಿ. ಪಟೇಲ್ ಇಬ್ಬರೂ 198 ಮತಗಳನ್ನು ಪಡೆದು ಸಮವಾಗಿದ್ದರು. ಈ ಸಂದರ್ಭದಲ್ಲಿ ನಡೆಸಿದ ಲಾಟರಿಯಲ್ಲಿ ಎಸ್.ಕೆ. ಪ್ರಶಾಂತ್ ಗುಪ್ತಾ ಅವರ ಪರ ಅದೃಷ್ಟ ಒಲಿಯಿತು.

ಪರಾಭವಗೊಂಡವರು : ಯು.ಜಿ. ಶಿವಕುಮಾರ್ (194), ಪುಟ್ಟಪ್ಪ ಕಾಶಿಪುರ (180), ಐ.ವಿ. ವೀರಣ್ಣ (195), ಎ. ಜಯಪ್ಪ (11), ಕೆ.ಬಿ.ನಾಗರಾಜ್ (206), ಎಂ.ಕೆ. ರಾಜಶೇಖರ್ (183), ಎ.ಎನ್. ಕೊಟ್ರೇಶ್ (155), ಎನ್.ಜೆ. ಚನ್ನಬಸವನಗೌಡ (33), ಜಯರಾಜ್ ಎಸ್. ಕಶೆಟ್ಟರ್ (121), ಬಿ.ಜೆ. ನಾಗರಾಜ್ (190), ಪ್ರಕಾಶ್ ವಿ. ರಾಯ್ಕರ್ (38), ಬಿ.ಪಿ.ಪಟೇಲ್ (198), ಆರ್.ಜಿ.ಶ್ರೀನಿವಾಸಮೂರ್ತಿ (172), ಬಿ.ವಿ. ಶಿವಯೋಗಿ ಬೂಸ್ನೂರು (156), ಎನ್. ಸೋಮಶೇಖರ್ (16) ಯು.ಜಿ. ಶಿವಕುಮಾರ್ ಅವರ ಗುಂಪಿನಿಂದ ಸ್ಪರ್ಧಿಸಿದವರಲ್ಲಿ ರವಿಶಂಕರ್ ಪಲ್ಲಾಗಟ್ಟೆ, ಬೆಳ್ಳೂಡಿ ಸದಾನಂದ, ಬಿ.ಜೆ. ಅಭಿಷೇಕ್ (ಬೇತೂರು), ಮಲ್ಲಿಕಾರ್ಜುನ ಬಾದಾಮಿ ಮತ್ತು ಎಸ್.ಕೆ. ತಿಮ್ಮರಾಜ ಗುಪ್ತಾ ಅವರುಗಳು ಆಯ್ಕೆಯಾಗಿದ್ದಾರೆ.

ವಿವರ : ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರಲ್ಲಿ ಮತ್ತಿಹಳ್ಳಿ ವೀರಣ್ಣ 43 ಮತಗಳ ಅಂತರದಿಂದ ಜಯ ಗಳಿಸಿದರು. ವೀರಣ್ಣ 237 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿಯಾಗಿದ್ದ ಯು.ಜಿ. ಶಿವಕುಮಾರ್ 194 ಮತಗಳನ್ನು ಪಡೆದು ಪರಾಭವಗೊಂಡರು.

ಉಪಾಧ್ಯಕ್ಷತೆಯ ಒಂದು ಸ್ಥಾನಕ್ಕೆ ಸ್ಪರ್ಧಿಸಿದ್ದ ಮೂವರಲ್ಲಿ ಎ.ಬಿ. ಚಂದ್ರಶೇಖರ್ 22 ಮತಗಳ ಅಂತರ ದಿಂದ ಆಯ್ಕೆಯಾದರು. ಅವರು 217 ಮತಗಳನ್ನು ಗಳಿಸಿದರೆ, ಐ.ವಿ. ವೀರಣ್ಣ (ಐನಳ್ಳಿ) 195, ಎ. ಜಯಪ್ಪ 11 ಮತಗಳನ್ನು ಪಡೆದು ಪರಾಭವಗೊಂಡರು.

ಗೌರವ ಕಾರ್ಯದರ್ಶಿಯ ಒಂದು ಸ್ಥಾನಕ್ಕೆ ಸ್ಪರ್ಧೆ ಮಾಡಿದ್ದ ಇಬ್ಬರಲ್ಲಿ ರವಿಶಂಕರ್ ಪಲ್ಲಾಗಟ್ಟೆ 64 ಮತಗಳ ಅಂತರದಿಂದ ಜಯ ಗಳಿಸಿದರು. ಅವರು 247 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಎಂ.ಕೆ. ರಾಜಶೇಖರ್ 183 ಮತಗಳನ್ನು ಪಡೆದು ಪರಾಭವಗೊಂಡರು.

ಗೌರವ ಸಹ ಕಾರ್ಯದರ್ಶಿಯ ಒಂದು ಸ್ಥಾನಕ್ಕೆ ಇಬ್ಬರು ಸ್ಪರ್ಧಿಸಿದ್ದರು. ಎಸ್.ಜಿ. ಉಳವಯ್ಯ 13 ಮತ ಗಳ ಅಂತರದಿಂದ ಆಯ್ಕೆಯಾದರು. ಅವರು 219 ಮತ ಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಕೆ.ಬಿ. ನಾಗರಾಜ್ 206 ಮತಗಳನ್ನು ಪಡೆದು ಪರಾಭವಗೊಂಡರು.

ಖಜಾಂಚಿಯ ಒಂದು ಸ್ಥಾನಕ್ಕೆ ಸ್ಪರ್ಧಿಸಿದ್ದ ಇಬ್ಬರಲ್ಲಿ ಹೆಚ್.ಸಿ. ಲಿಂಗರಾಜ ವಾಲಿ 63 ಮತಗಳ ಅಂತರದಿಂದ ಜಯ ಗಳಿಸಿದರು. ಅವರು 243 ಮತಗಳನ್ನು ಗಳಿಸಿದರೆ ಅವರ ಪ್ರತಿಸ್ಪರ್ಧಿ ಪುಟ್ಟಪ್ಪ ಕಾಶಿಪುರ 180 ಮತಗಳನ್ನು ಪಡೆದು ಪರಾಭವಗೊಂಡರು.

ನಿರ್ದೇಶಕ ಸ್ಥಾನಗಳ ಸಂಖ್ಯೆ 6 ಇದ್ದು, 15 ಜನರು ಸ್ಪರ್ಧಿಸಿದ್ದರು. ಈ ಪೈಕಿ ಬೆಳ್ಳೂಡಿ ಸದಾನಂದ (270), ಹೆಚ್.ವಿ. ರುದ್ರೇಶ್ (230), ಬಿ.ಜೆ. ಅಭಿಷೇಕ್ ಬೇತೂರು (222),  ಮಲ್ಲಿಕಾರ್ಜುನ ಬಾದಾಮಿ (209), ಎಸ್.ಕೆ. ತಿಮ್ಮರಾಜ ಗುಪ್ತಾ (199) ಹಾಗೂ ಎಸ್.ಕೆ. ಪ್ರಶಾಂತ್ ಗುಪ್ತಾ (198) ನಿರ್ದೇಶಕರುಗಳಾಗಿದ್ದಾರೆ.

ಉಳಿದಂತೆ ನಿರ್ದೇಶಕ ಸ್ಥಾನಗಳಿಗೆ ಸ್ಪರ್ಧಿಸಿದ್ದ ಬಿ.ಪಿ.ಪಟೇಲ್ (198), ಬಿ.ಜೆ. ನಾಗರಾಜ್ (190), ಆರ್.ಜಿ.ಶ್ರೀನಿವಾಸಮೂರ್ತಿ (172), ಬಿ.ವಿ. ಶಿವಯೋಗಿ ಬೂಸ್ನೂರು (156), ಎ.ಎನ್. ಕೊಟ್ರೇಶ್ (155), ಜಯರಾಜ್ ಎಸ್. ಕಶೆಟ್ಟರ್ (121),  ಪ್ರಕಾಶ್ ವಿ. ರಾಯ್ಕರ್ (38), ಎನ್.ಜೆ. ಚನ್ನಬಸವನಗೌಡ (33),  ಎನ್. ಸೋಮಶೇಖರ್ (16) ಪರಾಭವಗೊಂಡಿದ್ದಾರೆ.

ವಿಜೇತರ ಮತ ಗಳಿಕೆ ವಿವರ : ಚುನಾವಣೆಯಲ್ಲಿ ಆಯ್ಕೆಯಾದವರಲ್ಲಿ ಬೆಳ್ಳೂಡಿ ಸದಾನಂದ ಅತ್ಯಧಿಕ 270 ಮತಗಳನ್ನು ಪಡೆಯುವುದರ ಮೂಲಕ ಮತ ಗಳಿಕೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ರವಿಶಂಕರ್ ಪಲ್ಲಾಗಟ್ಟೆ 247 ಮತಗಳನ್ನು ಪಡೆದು ದ್ವಿತೀಯ ಸ್ಥಾನದಲ್ಲಿದ್ದರೆ, ಹೆಚ್.ಸಿ. ಲಿಂಗರಾಜ ವಾಲಿ 243 ಮತಗಳನ್ನು ಗಳಿಸಿ ತೃತೀಯ ಸ್ಥಾನದಲ್ಲಿದ್ದಾರೆ.

ನಂತರದ ಸ್ಥಾನಗಳನ್ನು ಮತ್ತಿಹಳ್ಳಿ ವೀರಣ್ಣ (237), ಹೆಚ್.ವಿ. ರುದ್ರೇಶ್ (230), ಬಿ.ಜಿ. ಅಭಿಷೇಕ್ (222), ಎಸ್.ಜಿ. ಉಳವಯ್ಯ (219), ಎ.ಬಿ. ಚಂದ್ರಶೇಖರ್ (217), ಮಲ್ಲಿಕಾರ್ಜುನ ಬಾದಾಮಿ (209), ಎಸ್.ಕೆ. ತಿಮ್ಮರಾಜ ಗುಪ್ತಾ (199), ಎಸ್.ಕೆ. ಪ್ರಶಾಂತ್ ಗುಪ್ತಾ (198) ಪಡೆದಿದ್ದಾರೆ.

ಎಸ್.ಕೆ. ಪ್ರಶಾಂತ್ ಗುಪ್ತಾ ಮತ್ತು ಬಿ.ಪಿ. ಪಟೇಲ್ ಇಬ್ಬರೂ 198 ಮತಗಳನ್ನು ಪಡೆದು ಸಮವಾಗಿದ್ದರು. ಈ ಸಂದರ್ಭದಲ್ಲಿ ನಡೆಸಿದ ಲಾಟರಿಯಲ್ಲಿ ಎಸ್.ಕೆ. ಪ್ರಶಾಂತ್ ಗುಪ್ತಾ ಅವರ ಪರ ಅದೃಷ್ಟ ಒಲಿಯಿತು.

ಪುನರಾಯ್ಕೆ : ದಾವಣಗೆರೆ ಕ್ಲಬ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮತ್ತಿಹಳ್ಳಿ ವೀರಣ್ಣ ಅವರು ಈ ಹಿಂದೆ ಹತ್ತು ವರ್ಷಗಳ ಕಾಲ ಕ್ಲಬ್ಬಿನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಕಳೆದ ಅವಧಿಯಲ್ಲಿ ಪದಾಧಿಕಾರಿಗಳಾಗಿದ್ದ ಹೆಚ್.ಸಿ. ಲಿಂಗರಾಜ್ ವಾಲಿ, ಎಸ್.ಕೆ. ಪ್ರಶಾಂತ ಗುಪ್ತಾ, ಎ.ಬಿ. ಚಂದ್ರಶೇಖರ್, ಎಸ್.ಜಿ. ಉಳುವಯ್ಯ ಅವರುಗಳು ಮತ್ತೊಂದು ಅವಧಿಗೆ ಪುನರಾಯ್ಕೆಯಾಗಿದ್ದಾರೆ.

ಎಸ್.ಎಂ. ವೀರಪ್ಪ ಚುನಾವಣಾಧಿಕಾರಿಯಾಗಿದ್ದರು.

error: Content is protected !!