ಹರಪನಹಳ್ಳಿ ಪುರಸಭೆ ತುರ್ತು ಸಾಮಾನ್ಯ ಸಭೆಯಲ್ಲಿ ತೀರ್ಮಾನ
ಹರಪನಹಳ್ಳಿ, ಜ.28- ಅಕ್ರಮ ನಲ್ಲಿಗಳನ್ನು ಸಕ್ರಮ ಗೊಳಿಸಲು 3500 ರೂ. ಶುಲ್ಕ ನಿಗದಿಗೆ ಇಲ್ಲಿ ನಡೆದ ಪುರಸಭಾ ತುರ್ತು ಸಾಮಾನ್ಯ ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.
ಪಟ್ಟಣದಲ್ಲಿ 4900 ಅಕ್ರಮ ನಳಗಳಿವೆ, ಸಕ್ರಮಗೊಳಿಸಲು 5 ಸಾವಿರ ರೂ.ಗಳನ್ನು ನಿಗದಿ ಮಾಡಬೇಕು ಎಂದು ಕಂದಾಯ ಅಧಿಕಾರಿ ಹೇಳಿದಾಗ ಹಿರಿಯ ಸದಸ್ಯರಾದ ಡಿ.ಅಬ್ದುಲ್ ರಹಿಮಾನ್, ಎಂ.ವಿ. ಅಂಜಿನಪ್ಪ, ಟಿ.ವೆಂಕಟೇಶ್, ಗೊಂಗಡಿ ನಾಗರಾಜ್ ಅವರುಗಳು ಆಕ್ಷೇಪ ವ್ಯಕ್ತ ಪಡಿಸಿ ಸಾಮಾನ್ಯ ಜನರಿಗೆ ಹೊರೆ ಯಾಗುತ್ತದೆ. ಕಡಿಮೆ ಮಾಡಿ ಎಂದು ಹೇಳಿ ನಂ ತರ ಚರ್ಚೆಯಾಗಿ ಅಂತಿಮವಾಗಿ 3500 ರೂ. ಶುಲ್ಕ ನಿಗದಿಗೆ ನಿರ್ಣಯ ಕೈಗೊಳ್ಳಲಾಯಿತು.
ಪುರಸಭಾ ಕಚೇರಿಯಲ್ಲಿ ಕಂದಾಯ ವಿಭಾಗದಲ್ಲಿ ಬಹಳಷ್ಟು ಸಮಸ್ಯೆಗಳು ಇದ್ದು, ಪೈಲ್ಗಳು ವಿಲೇವಾರಿಯಾಗಲು ಬಹಳಷ್ಟು ತಡವಾಗುತ್ತಲಿದೆ ಎಂದು ಎಂ.ವಿ.ಅಂಜಿನಪ್ಪ ಆರೋಪಿಸಿದರು. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಸಭೆ ನಡೆಸಲು ಬಿಡುವುದಿಲ್ಲ ಎಂದು ಅವರು ಎಚ್ಚರಿಸಿದರು.
ಸದಸ್ಯರು ಕೊಟ್ಟ ಅರ್ಜಿಗಳಿಗೆ ಸ್ಪಂದನೆ ಸಿಗುವುದಿಲ್ಲ ಎಂದು ಸದಸ್ಯ ಜಾಕೀರ್ ಸರ್ಖಾ ವಾಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನಮ್ಮದೇ ಹೀಗಾದರೆ ಸಾರ್ವಜನಿಕರ ಪಾಡೇನು ? ಎಂದು ಅವರು ಪ್ರಶ್ನಿಸಿದರು. ಸದಸ್ಯರನ್ನು ಪುರಸಭಾ ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಗೊಂಗಡಿ ನಾಗರಾಜ್ ಸಹ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರ ಕಾರ್ಯವೈಖರಿ ಖಂಡಿಸಿದರು. ಎಚ್.ಎಂ. ಅಶೋಕ್ ಅವರು ಪುರಸಭಾ ಕಾರ್ಯವೈಖರಿ ಬಗ್ಗೆ ಸಾರ್ವಜನಿಕ ರಿಂದ ದೂರುಗಳು ಬರುತ್ತಿವೆ, ಮುಖ್ಯಾಧಿಕಾ ರಿಗಳು ವಾರ್ಡ್ಗಳ ಭೇಟಿ ಮಾಡಿ ಸಮಸ್ಯೆ ಗಳನ್ನು ಪರಿಶೀಲಿಸಿ ಪರಿಹಾರ ನೀಡಬೇಕು ಎಂದು ಅವರು ತಾಕೀತು ಮಾಡಿದರು.
ಮಹಿಳಾ ಸದಸ್ಯರಾದ ಲಕ್ಕಮ್ಮ, ಯಲ್ಲಮ್ಮ, ತಾರಾ ಅವರುಗಳು ತಮ್ಮ ತಮ್ಮ ವಾರ್ಡ್ಗಳಲ್ಲಿ ಬೀದಿ ದೀಪ, ಚರಂಡಿ, ನೀರಿನ ಸಮಸ್ಯೆ ಕುರಿತು ಗಮನ ಸೆಳೆದು ಕೂಡಲೇ ಸಮಸ್ಯೆ ನೀಗಿಸಿ ಎಂದು ಕೋರಿದರು.
ತೋಪಿನ ವೆಂಕಟೇಶ್ ಅವರು ವಾರ್ಡ್ಗಳಲ್ಲಿ ವಿವಿಧ ಸಮಸ್ಯೆಗಳಿವೆ.ಆದ್ದರಿಂದ ತಿಂಗಳಿಗೊಮ್ಮೆ ಸಭೆ ಕರೆಯಬೇಕು. ಹೀಗೆ ಬಹಳ ದಿನಗಳ ನಂತರ ಸಭೆ ಕರೆದು ಒಮ್ಮೆಲೇ 19 ವಿಷಯಗಳನ್ನು ಚರ್ಚೆಗೆ ತಂದರೆ ಹೇಗೆ ? ಎಂದು ಪ್ರಶ್ನಿಸಿದರು. ಆಗ ಅಧ್ಯಕ್ಷ ಮಂಜುನಾಥ್ ಇಜಂತಕರ್ ಅವರು ಮುಂದೆ ಪ್ರತಿ ತಿಂಗಳು ಸಭೆ ಕರೆಯುತ್ತೇವೆ. ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು.
ಗಣರಾಜ್ಯೋತ್ಸವ ಸಮಾರಂಭದಲ್ಲಿ ಪುರಸಭಾ ಅಧ್ಯಕ್ಷರನ್ನು, ಸದಸ್ಯರುಗಳನ್ನು ನಿರ್ಲಕ್ಷ್ಯ ಮಾಡಲಾಗಿದೆ. 9 ಗಂಟೆಗೆ ಧ್ವಜಾರೋಹಣವಿದ್ದರೆ 10 ಗಂಟೆಗೆ ಆಹ್ವಾನ ಪತ್ರಿಕೆ ತಂದು ಕೊಟ್ಟಿದ್ದಾರೆ ಹಾಗೂ ಶಿಷ್ಟಾಚಾರ ಪಾಲಿಸಿಲ್ಲ ಎಂದು ಎಂ.ವಿ.ಅಂಜಿನಪ್ಪ, ಅಬ್ದುಲ್ ರಹಿಮಾನ್, ರಾಘವೇಂದ್ರಶೆಟ್ಟಿ, ವೆಂಕಟೇಶ್, ಗೊಂಗಡಿ ನಾಗರಾಜ್ ಆರೋಪಿಸಿದರು.
ಅಧ್ಯಕ್ಷ ಮಂಜುನಾಥ ಇಜಂತಕರ್, ಉಪಾ ಧ್ಯಕ್ಷರಾದ ನಿಟ್ಟೂರು ಭೀಮವ್ವ ಸಣ್ಣಹಾಲಪ್ಪ, ಮುಖ್ಯಾಧಿಕಾರಿ ಬಿ.ಆರ್. ನಾಗರಾಜನಾಯ್ಕ ಇದ್ದರು.