ತರಳಬಾಳು ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಆದರ್ಶ ಗೋಖಲೆ
ದಾವಣಗೆೆರೆ, ಏ. 1- ಜೀವನದ ಗುರಿ ಬೃಹತ್ತಾಗಿರಲಿ, ಸಾಧನೆಗೆ ಅಸಾಧ್ಯವಾದುದು ಗೊತ್ತಿಲ್ಲ ಎನ್ನಿರಿ. ದೊಡ್ಡ ಕನಸು ಕಾಣಿರಿ. ಅದನ್ನು ನನಸಾಗಿಸಲು ಶ್ರಮಿಸಬೇಕು. ಸಾಧನೆ ತಪಸ್ಸಿನ ಫಲ. ನಾವುಗಳು ನಮ್ಮ ಜೀವನದಲ್ಲಿ ಶ್ರದ್ಧೆಯಿಂದ ಕಾರ್ಯೋನ್ಮುಖ ರಾಗಿ ಸಾಧನೆಯನ್ನು ಮಾಡಬೇಕು ಎಂದು ಆದರ್ಶ ಗೋಖಲೆ ತಿಳಿಸಿದರು.
ಅವರು ನಗರದ ತರಳಬಾಳು ಪಿಯು ಕಾಲೇಜಿನಲ್ಲಿ ಜೆ.ಇ.ಇ. ಮತ್ತು ನೀಟ್ ಬಗ್ಗೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಸ್ಪೂರ್ತಿದಾಯಕ ಉಪನ್ಯಾಸ ನೀಡಿದರು.
ಮುಂದುವರೆದು ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯು ಜೀವನದಲ್ಲಿ ಕನಸು ಕಾಣುವುದಷ್ಟೆಯಲ್ಲ ಆ ಕನಸುಗಳನ್ನು ನನಸು ಮಾಡಲು ಜಾಗೃತರಾಗಿ ರುವುದು ಅತಿ ಅವಶ್ಯಕವಾಗಿದೆ.
ವಿದ್ಯಾರ್ಥಿ ಜೀವನದ ಮಹತ್ವಪೂರ್ಣ ಘಟ್ಟ ಪದವಿ ಪೂರ್ವ ಶಿಕ್ಷಣದ ಹಂತವಾಗಿರುತ್ತದೆ. ಆದ ಕಾರಣ ವಿದ್ಯಾರ್ಥಿಗಳು ಈ ಹಂತದಲ್ಲಿ ಬಾಹ್ಯ ಆಕ ರ್ಷಣೆಗಳಿಗೆ ಒಳಗಾಗದೆ ವಿದ್ಯಾರ್ಜನೆಯಲ್ಲಿ ತೊಡಗಿಸಿಕೊಂಡು ಗುರಿಯನ್ನು ತಲುಪಿ ಯಶ ಸ್ಸನ್ನು ಗಳಿಸಲು ಪ್ರಯತ್ನಿಸಬೇಕು ಎಂದರು.
ಯೋಗ ಹಾಗೂ ಪ್ರಾಣಾಯಾಮದ ಮಹತ್ವ ತಿಳಿಸಿ ಶ್ರೀ ತರಳಬಾಳು ಜಗದ್ಗುರು ಗುರು ಪರಂಪರೆಯನ್ನು ಸ್ಮರಿಸುತ್ತಾ ಆದರ್ಶ ಗೋಖಲೆ ಮಹತ್ವಪೂರ್ಣ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಡಾ. ಎಸ್. ಷಣ್ಮುಖಪ್ಪ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಹೆಚ್.ಎನ್. ಪ್ರದೀಪ್ ಪುನ್ನಯ್ಯ ಚೌಧರಿ, ಉಪನ್ಯಾಸಕ ವರ್ಗ ಸಿಬ್ಬಂದಿ ವರ್ಗದವರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಬಿ. ಆನಂದ್ ಕಾರ್ಯಕ್ರಮ ನಿರೂಪಿಸಿದರು.