ಹರಪನಹಳ್ಳಿ ಪುರಸಭೆ ರೂ. 80,40,569 ಉಳಿತಾಯ ಬಜೆಟ್ ಮಂಡನೆ

ಹರಪನಹಳ್ಳಿ, ಮಾ. 2- ಸ್ಥಳೀಯ ಪುರಸಭೆಯ 2022-23ನೇ ಸಾಲಿನ ಆಯ-ವ್ಯಯ ಆರಂಭಿಕ ನಗದು ಮತ್ತು ಬ್ಯಾಂಕ್ ಶಿಲ್ಕು 73,09,414 ಲಕ್ಷ ರೂ., ನಿರೀಕ್ಷಿತ ಆದಾಯ 77,47,91,014 ಸೇರಿದಂತೆ ಒಟ್ಟು ಜಮಾ 78,21,00,428 ಕೋಟಿ ರೂ., ಅದರಲ್ಲಿ ನಿರೀಕ್ಷಿತ ಖರ್ಚು 77,40, 59,859 ಕೋಟಿ ರೂ. ಗಳಾಗಿದ್ದು, ಒಟ್ಟು 80,40,569 ಲಕ್ಷ ರೂ. ಗಳ ಉಳಿತಾಯ ಬಜೆಟ್‍ಗೆ ಸಭೆ ಅನುಮೋದನೆ ನೀಡಿತು.

ನಿರೀಕ್ಷಿತ ಆದಾಯಗಳು : ವೇತನ ಅನುದಾನ (ಎಸ್‍ಎಫ್‍ಸಿ)-5 ಕೋಟಿ, ಎಸ್‍ಎಫ್‍ಸಿ ಮುಕ್ತ ನಿಧಿ 1ಕೋಟಿ ರೂ., ಎಸ್.ಎಫ್.ಸಿ. ವಿದ್ಯುತ್ ಅನುದಾನ  3.10 ಕೋಟಿ ರೂ., ಎಸ್‍ಎಫ್‌ಸಿ ವಿಶೇಷ ಅನುದಾನ 3 ಕೋಟಿ ರೂ., ನಗರೋತ್ಥಾನ ಅನುದಾನ 10 ಕೋಟಿ ರೂ., ಕೇಂದ್ರ ಸರ್ಕಾರದ (ಡೇ-ನಲ್ಮ್ ಯೋಜನೆ) ಅನುದಾನ 15 ಲಕ್ಷ ರೂ., ಕೇಂದ್ರ ಸರ್ಕಾರದ ಅನುದಾನ (15ನೇ ಹಣಕಾಸು ಯೋಜನೆ) 2.35 ಕೋಟಿ ರೂ., ಸಂಸತ್ ಸದಸ್ಯರ ಅನುದಾನ (ಎಂ.ಪಿ. ಗ್ರಾಂಟ್) 1 ಕೋಟಿ ರೂ., ವಿಧಾನಸಭಾ ಸದಸ್ಯರ ಅನುದಾನ 1 ಕೋಟಿ ರೂ., ಹೈದ್ರಾಬಾದ್ ಕರ್ನಾಟಕದ ವಿಶೇಷ ಅನುದಾನ 2 ಕೋಟಿ ರೂ., ಕೇಂದ್ರ ಮತ್ತು ರಾಜ್ಯ ಸರ್ಕಾರದ ಸ್ವಚ್ಚ ಭಾರತ ಅಭಿಯಾನ ಯೋಜನೆ – 3.50 ಕೋಟಿ ರೂ., ಎಸ್‍ಎಫ್‍ಸಿ ಯೋಜನೆಯಡಿ ಯಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಿ ಸಲು ಬಿಡುಗಡೆಯಾಗಬಹುದಾದ ಅನುದಾನ – 75 ಲಕ್ಷ ರೂ., ಮನೆ ಕಂದಾಯ ತೆರಿಗೆ-1.30 ಕೋಟಿ ರೂ., ಎಸ್‍ಎಫ್‍ಸಿ ಮುಕ್ತನಿಧಿ ಮತ್ತು ಪುರಸಭೆ ಸಾಮಾನ್ಯ ನಿಧಿಯ ಶೇ. 24.10 ರ ಪ.ಜಾ/ಪ.ಪಂ ಕಲ್ಯಾಣ ಕಾರ್ಯಕ್ರ ಮಗಳಿಗಾಗಿ 32.53 ಲಕ್ಷ ರೂ., ಇತರೆ ಹಿಂದುಳಿದ ವರ್ಗಗಳ ಕಲ್ಯಾಣ ಕಾರ್ಯಕ್ರಮಗಳಿಗಾಗಿ 32.53 ಲಕ್ಷ ರೂ., ಗುತ್ತಿಗೆದಾರ, ಸರಬರಾಜು ತೆರಿಗೆಗಳು, ಆದಾಯ, ವಾಣಿಜ್ಯ ತೆರಿಗೆ, ರಾಜಧನ, ಕಾರ್ಮಿಕ ಕಲ್ಯಾಣ ನಿಧಿ ಸೇರಿದಂತೆ ಇತರೆ ಮೂಲಗಳಿಂದ ಒಟ್ಟು 77,47,91,014 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. 

ನಿರೀಕ್ಷಿತ ಖರ್ಚು : ಸಿಬ್ಬಂದಿ ವೇತನ ವೆಚ್ಚ- 5 ಕೋಟಿ ರೂ., ವಿದ್ಯುತ್ ಅನುದಾನ ವೆಚ್ಚ 3.10 ಕೋಟಿ ರೂ., ಶೇ.24.10 ಯೋಜನೆಯ ವೆಚ್ಚಕ್ಕಾಗಿ 32.53 ಲಕ್ಷ ರೂ., ಗುತ್ತಿಗೆದಾರರ ಠೇವಣಿ ಶುಲ್ಕ 5 ಲಕ್ಷ ರೂ., ಮುಖ್ಯಮಂತ್ರಿಗಳ ನಗರೋತ್ಥಾನ ಅನುದಾನ 10 ಕೋಟಿ ರೂ., ಎಸ್‍ಎಫ್‍ಸಿ ವಿಶೇಷ ಅನುದಾನ 3 ಕೋಟಿ, ಶಾಸಕರ ಅನುದಾನ ವೆಚ್ಚ 1 ಕೋಟಿ ರೂ., ಸಂಸದರ ಅನುದಾನ ವೆಚ್ಚ 1 ಕೋಟಿ ರೂ., ಎಂಎಲ್‍ಸಿ ಅನುದಾನ ವೆಚ್ಚ 1 ಕೋಟಿ ರೂ., ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆ ಅನುದಾನ 15 ಲಕ್ಷ ರೂ., ಕೇಂದ್ರ ಸರ್ಕಾರದ 15ನೇ ಹಣಕಾಸು 2.35 ಕೋಟಿ ರೂ., ಹೈದ್ರಾಬಾದ್ ಕರ್ನಾಟಕ ಅನುದಾನ ವೆಚ್ಚ 2 ಕೋಟಿ ರೂ.,  ಕಾನೂನು ವೆಚ್ಚ 8 ಲಕ್ಷ, ರಾಷ್ಟ್ರೀಯ ಹಬ್ಬಗಳಿಗೆ 3.50 ಲಕ್ಷ ರೂ., ಅತಿವೃಷ್ಟಿಯಿಂದ ಹಾನಿಗೊಳಗಾದವರಿಗೆ ಸಹಾಯ ಧನ 10 ಲಕ್ಷ ರೂ., ನೀರು ಸರಬರಾಜು, ರಾಸಾಯನಿಕ ಖರೀದಿಗಾಗಿ ರಸ್ತೆ ಚರಂಡಿ ಸೇತುವೆ ಅಭಿವೃ ದ್ಧಿಗಾಗಿ 10.20 ಕೋಟಿ ರೂ., ಕುಡಿಯುವ ನೀರಿನ ಪೈಪ್‍ಲೈನ್ ಮತ್ತು ಟ್ಯಾಂಕರ್ ನಿರ್ಮಾಣಕ್ಕಾಗಿ 2.25 ಕೋಟಿ, ಗುತ್ತಿಗೆದಾರ, ಸರಬರಾಜು ತೆರಿಗೆಗಳು, ಆದಾಯ, ವಾಣಿಜ್ಯ ತೆರಿಗೆ, ರಾಜಧನ, ಕಾರ್ಮಿಕ ಕಲ್ಯಾಣ ನಿಧಿ, ರಸ್ತೆ-ಚರಂಡಿ ಸೇತುವೆ ಕಾಮಗಾರಿ-ಘನ ತಾಜ್ಯ ವಸ್ತು ವಿಲೇವಾರಿ ಘಟಕ ಕಾಮಗಾರಿಗಳಿ ಗಾಗಿ, ಇತರೆ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಧಿ (ಶೇ.7.25), ವಿಕಲಚೇತನರ ಅಭಿವೃದ್ಧಿ ನಿಧಿ (ಶೇ.5),  ಕೊಳಚೆ ಪ್ರದೇಶ ಅಭಿವೃದ್ಧಿ ಗಾಗಿ ಸೇರಿ,  ಒಟ್ಟು  77,40,59,859 ಕೋಟಿ ರೂ. ಖರ್ಚು ಅಂದಾಜಿಸಲಾಗಿದೆ. 

ಸದಸ್ಯ ಎಂ.ವಿ. ಅಂಜಿನಪ್ಪ, ಸದಸ್ಯ ಡಿ. ಅಬ್ದುಲ್‍ ರಹಿಮಾನ್‍ಸಾಬ್, ಸದಸ್ಯ ಹರಾಳು ಹೆಚ್.ಎಂ. ಅಶೋಕ್,  ಸದಸ್ಯ ಟಿ. ವೆಂಕಟೇಶ್ ಮತ್ತು ಇತರರು ಅಭಿವೃದ್ಧಿ ವಿಚಾರಗಳ ಕುರಿತಂತೆ ಮಾತನಾಡಿದರು.  

ಸಭೆಯಲ್ಲಿ ಉಪಾಧ್ಯಕ್ಷರಾದ ನಿಟ್ಟೂರು ಭೀಮವ್ವ ಸಣ್ಣ ಹಾಲಪ್ಪ, ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ಸದಸ್ಯರುಗಳಾದ ಗೊಂಗಡಿ ನಾಗರಾಜ್, ದ್ಯಾಮಜ್ಜಿ ರೊಕ್ಕಪ್ಪ, ಚಿಕ್ಕೇರಿ ಹನುಮಕ್ಕ ಬಸಪ್ಪ, ಜಾಕೀರ್ ಹುಸೇನ್ ಸರ್ಖಾವಸ್, ಎಂ.ಕೆ.ಜಾವೀದ್, ಜೋಗಿನರ ಭರತೇಶ್, ಉದ್ಧಾರ ಗಣೇಶ್, ಕೆಂಗಳ್ಳಿ ಪ್ರಕಾಶ್, ರಾಘವೆಂದ್ರ ಶೆಟ್ಟಿ, ರುದ್ರಪ್ಪ, ಯಲ್ಲಮ್ಮ, ಲಾಟಿ ದಾದಾಪೀರ್, ಹಿರಿಯ ಆರೋಗ್ಯ ನಿರೀಕ್ಷಕ ಮಂಜುನಾಥ ಇನ್ನಿತರರು ಉಪಸ್ಥಿತರಿದ್ದರು.

error: Content is protected !!