ಸೇವಾಭದ್ರತೆ ಒದಗಿಸಲು ಆರೋಗ್ಯ ಸಿಬ್ಬಂದಿಗಳ ಒತ್ತಾಯ

ದಾವಣಗೆರೆ,ಮಾ.29-  ಕೋವಿಡ್ ಸಂದರ್ಭದಲ್ಲಿ ರಾಜ್ಯ ಸರ್ಕಾರ ಗುತ್ತಿಗೆ ಆಧಾರದಲ್ಲಿ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಂಡಿದ್ದ ಎಲ್ಲಾ ಆರೋಗ್ಯ ಇಲಾಖೆಯ ಕೊರೊನಾ ವಾರಿಯರ್ಸ್‍ಗಳನ್ನು ನಾಡಿದ್ದು ದಿನಾಂಕ 31ರ ನಂತರವೂ ಕೆಲಸದಲ್ಲಿ ಮುಂದುವರೆಸಬೇಕೆಂದು ಕರ್ನಾಟಕ ಕೊರೊನಾ ಆರೋಗ್ಯ ಸಿಬ್ಬಂದಿಗಳ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.

ರಾಜ್ಯ ಸರ್ಕಾರದಿಂದ ಕೋವಿಡ್ ಸಂಕಷ್ಟದ ಸಮಯದಲ್ಲಿ ರೋಗಿಗಳಿಗೆ ಯಾವುದೇ ತೊಂದರೆ ಆಗಬಾರದೆನ್ನುವ ಉದ್ದೇಶದಿಂದ ಜಿಲ್ಲೆಯಲ್ಲಿ 180 ಸೇರಿದಂತೆ ರಾಜ್ಯಾದ್ಯಂತ ಒಟ್ಟು 5,800 ಸಿಬ್ಬಂದಿಗಳನ್ನು ಆರು ತಿಂಗಳ ಅವಧಿಗೆ ಸರ್ಕಾರ ನೇಮಕಾತಿ ಮಾಡಿಕೊಂಡಿತ್ತು. ನಂತರದಲ್ಲಿ ಅವಧಿ ವಿಸ್ತರಣೆ ಮಾಡಿ ನಮ್ಮಿಂದ ಸೇವೆ ಪಡೆಯಲಾಯಿತು. ಆದರೆ, ಈಗ ಇದ್ದಕ್ಕಿದ್ದಂತೆ ಇದೇ ಮಾ.31ರ ನಂತರ ನಮ್ಮನ್ನು ಕೆಲಸದಿಂದ ತೆಗೆದುಹಾಕಲಾಗುತ್ತಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಪ್ರಮೋದ್ ಬೇಸರ ವ್ಯಕ್ತಪಡಿಸಿದ್ದಾರೆ.

ಆರೋಗ್ಯ ಇಲಾಖೆಯಲ್ಲಿ ಹಲವು ಹುದ್ದೆಗಳನ್ನು ಖಾಲಿ ಬಿಡಲಾಗಿದೆ. ಇದ ರಿಂದ ರಾಜ್ಯದಲ್ಲಿ ಮತ್ತೆ 4ನೇ ಅಲೆ ಬರುವ ಸಂಭವವಿದ್ದು, ನಂತರದಲ್ಲಿ ರೋ ಗಿಗಳಿಗೆ ತೊಂದರೆ ಆಗುವ ಸಂಭವವೂ ಇರುವುದರಿಂದ ನಮ್ಮನ್ನೇ ಮುಂದುವರೆಸಿ, ನಮಗೆ ಸೇವಾ ಭದ್ರತೆ ಸರ್ಕಾರ ನೀಡಬೇಕು. ಇಲ್ಲವಾದರೆ, ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

error: Content is protected !!