ಸಂಸ್ಥೆಗಳ ಮಧ್ಯೆ ಆರೋಗ್ಯಕರ ಪೈಪೋಟಿ ಇರಬೇಕು

ಜಿಲ್ಲಾ ಕಸಾಪ ನಿಕಟಪೂರ್ವ ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ

ದಾವಣಗೆರೆ, ಮಾ.29- `ದೀಪದಿಂದ ದೀಪವ ಹಚ್ಚಬೇಕು ಮಾನವ’ ಎನ್ನುವ ಕವಿವಾಣಿಯಂತೆ, ದೀಪ ಬೆಳಗಬೇಕಾದರೆ ಎಣ್ಣೆ ಬೇಕು. ಆ ಎಣ್ಣೆ ಬತ್ತದಂತೆ ನೋಡಿಕೊಳ್ಳುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಡಾ. ಎಚ್.ಎಸ್ ಮಂಜುನಾಥ ಕುರ್ಕಿ ನುಡಿದರು.

ಈಗಿನ ಜಗತ್ತು ವ್ಯಾವಹಾರಿಕ, ಸ್ಪರ್ಧಾತ್ಮಕ ಜಗತ್ತು, ರೋಚಕ ಬದಲಾವಣೆಗಳು  ವಿಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಲಿವೆ. ಸಂಸ್ಥೆಗಳ ಮಧ್ಯೆ ಆರೋಗ್ಯಕರ ಪೈಪೋಟಿ ಇದ್ದು, ಗುಣಮಟ್ಟದ ಶಿಕ್ಷಣದ ಜೊತೆಗೆ ಅನುಭವದ ಶಿಕ್ಷಣ- ಅಂದರೆ ಜಗತ್ತಿನ ಹಾಗೂ ಜೀವನದ ಶಿಕ್ಷಣ ನೀಡುವ ಅನಿವಾರ್ಯತೆ ಇದೆ ಎಂದು  ಹೇಳಿದರು.

ನಗರದ  ಆನಂದ್ ಅಕಾಡೆಮಿ ವತಿಯಿಂದ ಹೋಟೆಲ್ ಅಶೋಕದಲ್ಲಿ ನಿನ್ನೆ ಹಮ್ಮಿಕೊಂಡಿದ್ದ   ಪ್ರಾಂಶುಪಾಲರ ವಲಯ ಮಟ್ಟದ ಮೊದಲನೇ ಸಮಾವೇಶದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು.

ಆನಂದ್ ಅಕಾಡೆಮಿಯ ಪರಿಚಯವನ್ನು ಅಕಾಡೆಮಿ ನಿರ್ದೇಶಕ ಕಿರಣ್ ಪೋತಿನ್ ಮಾಡಿದರು. ಅಕಾಡೆಮಿಯ ಶೈಕ್ಷಣಿಕ ಚಟುವಟಿಕೆಗಳ ಪರಿಚಯವನ್ನು ಅಕಾಡೆಮಿಕ್ ಮುಖ್ಯಸ್ಥ ನಾಗಾರ್ಜುನ್ ದುರ್ಬಕುಲ ಅವರು ಮಾಡಿದರು.  

ನ್ಯಾಷನಲ್ ಕಾನ್ವೆಂಟ್ ನಿರ್ದೇಶಕರಾದ ಸಹನಾ ಜಿ.ರವಿ, ಬಿ.ಇ.ಎ ಪೌಢಶಾಲೆ ಮುಖ್ಯೋಪಾಧ್ಯಾಯರಾದ ಶ್ರೀಮತಿ ಗಿರಿಜಮ್ಮ ಡಾ. ಎ.ಜೆ. ನಿತ್ಯಾ ಜಿ.ಪಿ.ಜಿ.ಎಂ ನಿರ್ದೇಶಕರು, ಶಿವಕುಮಾರ್ ಕಾರ್ಯದರ್ಶಿ ಗಳು, ಗೋಲ್ಡನ್ ಪಬ್ಲಿಕ್ ಸ್ಕೂಲ್, ಅವಿನಾಶ್ ಜಿ. ನಾಯ್ ಸ್ಟಡು ಐಕ್ಕೂ ಅಕಾಡೆಮಿ ಅಧ್ಯಕ್ಷರು, ಮೋಕ್ಸ್, ಜೈನ್ ಟ್ರಿನಿಟಿ ಕಾಮರ್ಸ್ ಕಾಲೇಜಿನ ನಿರ್ದೇಶಕರು, ಶ್ರೀಕುಮಾರ್ ಸಾಯಿ ಅಕಾಡೆಮಿ ನಿರ್ದೇಶಕರು ಮಾತನಾಡಿದರು. 

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಆನಂದ್ ಅಕಾಡೆಮಿಯ ಸಂಸ್ಥಾಪಕ ನಿರ್ದೇಶಕ ಆನಂದ್ ಪೋತಿನ್ ಮಾತನಾಡಿ, ತಾವು ಉತ್ತಮ ಸಂಸ್ಕಾರ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ತರುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಲಿರುವುದಾಗಿ ತಿಳಿಸಿದರು. 

ಸಂಸ್ಥೆಯ ಆಡಳಿತಾಧಿಕಾರಿ ಚಂದ್ರ ಶೇಖರ್ ಪಿ, ಹಾಗೂ ಲೋಹಿತ್ ಕುಮಾರ್ ಜಿ.ಬಿ ಇವರು ಕಾರ್ಯಕ್ರಮ ನಿರೂಪಿಸಿದರು.

ಸೃಷ್ಟಿ, ಅನುಷ ಹಾಗೂ ಸೌಜನ್ಯ ಇವರಿಂದ ಪ್ರಾರ್ಥನೆ, ಶ್ರೀಕಾಂತ್ ಕೋನಂ  ಸ್ವಾಗತಿಸಿದರು. ಶ್ರೀಮತಿ ಸರಿತ ನಿರೂಪಿಸಿ ದರು,  ಗಿರಿಬಾಬು ಸಂಬಂಗಿ ವಂದಿಸಿದರು.

error: Content is protected !!