ಮಲೇಬೆನ್ನೂರು,ಮಾ.28- ಇಲ್ಲಿನ ಪುರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ 2022-23ನೇ ಸಾಲಿನ ಆಯವ್ಯಯ ಮಂಡನೆ ಸಭೆಯಲ್ಲಿ ಪುರಸಭೆ ಆಡಳಿತಾಧಿಕಾರಿಗಳೂ ಆಗಿರುವ ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸಗೌಡರ್ ಅವರು ನಿರೀಕ್ಷಿತ ಮತ್ತು ವೆಚ್ಚ ಗಳ ಯೋಜನೆ ರೂಪಿಸಿ 38,77, 313 ಲಕ್ಷ ರೂ.ಗಳ ಉಳಿತಾಯ ಬಜೆಟ್ ಮಂಡಿಸಿದರು.
ಆದಾಯ ನಿರೀಕ್ಷೆ : 2022-23ನೇ ಸಾಲಿಗೆ ಪುರಸಭೆಗೆ ಮನೆ ಕಂದಾಯ 50 ಲಕ್ಷ ರೂ. ನೀರಿನ ತೆರಿಗೆ 10 ಲಕ್ಷ ರೂ,ಟ್ರೇಡ್ ಲೈಸೆನ್ಸ್ ಫೀ 5 ಲಕ್ಷ ರೂ, ಜಾಹೀರಾತು ಶುಲ್ಕ 2 ಲಕ್ಷ ರೂ, ಪುರಸಭೆ ಮಳಿಗೆ ಹರಾಜಿನಿಂದ 9 ಲಕ್ಷ ರೂ, ಕಟ್ಟಡ ಪರವಾನಿಗೆ ಶುಲ್ಕ 10.50 ಲಕ್ಷ ರೂ, ಸಂತೆ ಹರಾಜು ಮೊತ್ತ 9 ಲಕ್ಷ ರೂ, ನೆಲಬಾಡಿಗೆ 5 ಲಕ್ಷ ರೂ, ಇತರೆ ಆದಾಯ 25 ಲಕ್ಷ ರೂ ಮತ್ತು ಅಸಾಮಾನ್ಯ ಆದಾಯ 2.15 ಕೋಟಿ ರೂ ಸೇರಿ ಒಟ್ಟು 3 ಕೋಟಿ 40 ಲಕ್ಷದ 50 ಸಾವಿರ ರೂ ಆದಾಯವನ್ನು ನಿರೀಕ್ಷೆ ಮಾಡಲಾಗಿದೆ ಎಂದು ಮಮತಾ ಹೊಸಗೌಡರ್ ಸಭೆಗೆ ತಿಳಿಸಿದರು.
ಸರ್ಕಾರದಿಂದ ಎಸ್ಎಫ್ಸಿ ಮುಕ್ತ ನಿಧಿ 60 ಲಕ್ಷ ರೂ, ಸಿಆರ್ಎಫ್ನಿಂದ 10 ಲಕ್ಷ ರೂ, ಸಂಸದರ ಮತ್ತು ಶಾಸಕರ ನಿಧಿಯಿಂದ 50 ಲಕ್ಷ ರೂ, ಸಿಆರ್ಎಫ್ನಿಂದ 25 ಲಕ್ಷ ರೂ, ಎಸ್ಎಫ್ಸಿ ಕುಡಿಯುವ ನೀರಿನ ಅನುದಾನ 25 ಲಕ್ಷ ರೂ, ಡೇ-ನಲ್ಮ ಯೋಜನೆಯಿಂದ 5 ಲಕ್ಷ ರೂ ಸೇರಿ ಒಟ್ಟು 6 ಕೋಟಿ 35 ಲಕ್ಷ ರೂಗಳ ಅನುದಾನ ನಿರೀಕ್ಷಿಸಲಾಗಿರುತ್ತದೆ. ಒಟ್ಟಾರೆಯಾಗಿ ಪುರಸಭೆಗೆ ಸ್ವಂತ ಆದಾಯ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಬರುವ ನಿರೀಕ್ಷಿತ ಅನುದಾನ ಸೇರಿ ಒಟ್ಟು9 ಕೋಟಿ 75 ಲಕ್ಷದ 50 ಸಾವಿರ ರೂ. ಆಗಿರುತ್ತದೆ.
ಈ ಎಲ್ಲಾ ಆದಾಯದ ಮೇಲೆ ಈ ಸಾಲಿನ ಬಜೆಟ್ ತಯಾರಿಸಿದ್ದು, ಸರ್ಕಾರದ ವಿವಿಧ ಅನುದಾನಗಳಿಂದ ಬರುವ ಅನುದಾನಕ್ಕೆ ಅನುಗುಣವಾಗಿ ಪಟ್ಟಣದ ಜನತೆಗೆ ಅತ್ಯಾವ ಶ್ಯಕವಾಗಿರುವ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ, ಬೀದಿ ದೀಪ ಮತ್ತು ಸ್ವಚ್ಛತೆ ನಿರ್ವಹ ಣೆಗೆ ಮೊದಲ ಆದ್ಯತೆಯಾಗಿ ಈ ವರ್ಷದ ಬಜೆಟ್ನಲ್ಲಿ ಯೋಜನೆಗಳನ್ನು ರೂಪಿಸ ಲಾಗಿದೆ ಎಂದು ಮಮತಾ ವಿವರಿಸಿದರು.
ಪುರಸಭೆ ಸದಸ್ಯ ಕೆ. ಜಿ. ಲೋಕೇಶ್ ಮಾತನಾಡಿ, ಲಂಚ ಕೊಟ್ಟರೆ ಮಾತ್ರ ಇ-ಸ್ವತ್ತು ದಾಖಲೆಗಳನ್ನು ಬೇಗ ಕೊಡುತ್ತಾರೆ, ಇಲ್ಲದಿದ್ದರೆ ತಿಂಗಳುಗಟ್ಟಲೆ ಸತಾಯಿಸುತ್ತಾರೆಂದು ದೂರಿದರು.
ಮುಖ್ಯಾಧಿಕಾರಿ ಶ್ರೀಮತಿ ರುಕ್ಮಿಣಿ ಸ್ವಾಗತಿ ಸಿದರು. ಪುರಸಭೆ ಸದಸ್ಯರಾದ ಸಿ ಅಬ್ದಲ್ ಮಜೀದ್, ಗೌಡ್ರ ಮಂಜಣ್ಣ, ಬಿ ಮಂಜು ನಾಥ್, ನಯಾಜ್, ಸಾಬೀರ್ಅಲಿ, ಬೆಣ್ಣೆಹಳ್ಳಿ ಸಿದ್ದೇಶ್, ಶಬ್ಬೀರ್ಖಾನ್, ದಾದಾಪೀರ್, ಖಲೀಲ್, ಶ್ರೀಮತಿ ಸುಲೋಚನಮ್ಮ ಕುಮಾರ್, ಶ್ರೀಮತಿ ಮೀನಾಕ್ಷಮ್ಮ ಹಾಲೇಶಪ್ಪ, ಶ್ರೀಮತಿ ಸುಧಾರಾಜು, ನಾಮಿನಿ ಸದಸ್ಯರಾದ ಪಿ. ಆರ್. ರಾಜು, ಟಿ ವಾಸಣ್ಣ, ಎ. ಕೆ. ಲೋಕೇಶ್ ಮತ್ತು ಬಿ ಸುರೇಶ್, ಕೆ. ಪಿ. ಗಂಗಾಧರ್, ಭೋವಿಕುಮಾರ್, ಎಂ. ಬಿ ರುಸ್ತುಂ, ಚಮನ್ಷಾ, ಓ. ಜಿ. ಕುಮಾರ್, ಅಧಿಕಾರಿಗಳಾದ ದಿನಕರ್, ಗಣೇಶ್, ಉಮೇಶ್, ಹಾಲೇಶಪ್ಪ ಸಭೆಯಲ್ಲಿದ್ದರು.