ಮಲೇಬೆನ್ನೂರು, ಮಾ.28- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯಲ್ಲಿ ಸೋಮವಾರ ಆರಂಭವಾದ 10 ನೇ ತರಗತಿ ಪರೀಕ್ಷೆಗೆ 7 ಪ್ರೌಢಶಾಲೆಗಳ 286 ವಿದ್ಯಾರ್ಥಿಗಳು ಹಾಜರಾಗಿದ್ದರು.
ಇಬ್ಬರು ವಿದ್ಯಾರ್ಥಿಗಳು ಗೈರು ಆಗಿದ್ದು, ಪರೀಕ್ಷೆ ಸಂಪೂರ್ಣ ಶಾಂತಿಯುತ ವಾಗಿತ್ತು.
ಉಪವಿಭಾಗಾಧಿಕಾರಿ ಶ್ರೀಮತಿ ಮಮತಾ ಹೊಸ ಗೌಡರ್ ಅವರು ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವುದನ್ನು ವೀಕ್ಷಣೆ ಮಾಡಿದರು ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಸಿ.ಜಯಣ್ಣ ತಿಳಿಸಿದರು.