ಹಾವನೂರು ವರದಿಗೆ ಮಾತೃ ಸ್ಥಾನವಿದೆ

ಹರಪನಹಳ್ಳಿಯ ಹಾವನೂರು ಜಯಂತಿಯಲ್ಲಿ ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ

ಹರಪನಹಳ್ಳಿ, ಮಾ.25-  ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗದವರನ್ನು  ಶೋಷಣೆಯಿಂದ ಮುಕ್ತಗೊಳಿಸಿ, ಅವರನ್ನು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ  ಅಭಿವೃದ್ದಿ ಪಥದತ್ತ  ಕೊಂಡೊಯ್ಯುವ ನಿಟ್ಟಿನಲ್ಲಿ  ಸಮರ್ಥ ರೀತಿಯಲ್ಲಿ ಶ್ರಮಿಸಿದ ಧೀಮಂತ ನಾಯಕ ಎಲ್.ಜಿ. ಹಾವನೂರ್‌ರವರು ಎಂದು ವಾಲ್ಮೀಕಿ ನಾಯಕ ಸಮಾಜದ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಹೇಳಿದರು.

ಪಟ್ಟಣದ ವಾಲ್ಮೀಕಿ ಸಮುದಾಯ ಭವನದಲ್ಲಿ ಹಾವನೂರು ಜಯಂತಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಅವರಿಗೆ ಸನ್ಮಾನ ಸಮಾರಂಭ ಏರ್ಪಡಿಸಲಾಗಿತ್ತು. 

ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ರಾಜ್ಯದಲ್ಲಿಯೇ ಮೊದಲ ಬಾರಿಗೆ ಹಿಂದುಳಿದ ವರ್ಗಗಳನ್ನು ಗುರುತಿಸಿ ಅವರನ್ನು ಮುಖ್ಯವಾಹಿನಿಗೆ ತರಲು ಸಾಕಷ್ಟು ಶ್ರಮಿಸಿದ್ದಾರೆ. ಹಾವನೂರು ವರದಿ ಹಿಂದು ಳಿದ ವರ್ಗಗಳ ಆಯೋಗಗಳ ವರದಿಗಳಲ್ಲಿ ಮಾತೃಸ್ಥಾನ ಪಡೆದಿದ್ದು, ದೇವರಾಜ ಅರಸು ಅವರಿಗೆ ಸಿಕ್ಕಷ್ಟೇ ಮನ್ನಣೆ ಕಾನೂನು ಪಂಡಿತ ಎಲ್.ಜಿ. ಹಾವನೂರು ಅವರಿಗೂ ಸಿಗುವಂತಾಗಲಿ ಎಂದರು.

ಏಕಲವ್ಯ ಸಂಘರ್ಷ ಸಮಿತಿ ಅಧ್ಯಕ್ಷ ರಾಯದುರ್ಗದ ಪ್ರಕಾಶ್ ಮಾತನಾಡಿ, ಹಾವನೂರರವರು ರಾಣೇಬೆನ್ನೂರು ತಾಲ್ಲೂಕು ಅಗಡಿ ಗ್ರಾಮದಲ್ಲಿ 1925 ರಲ್ಲಿ ಜನಿಸಿ, ರಾಣೇಬೆನ್ನೂರು  ಪುರಸಭೆ ಅಧ್ಯಕ್ಷ ರಾಗಿ, ವಕೀಲರಾಗಿ,  8 ವರ್ಷಗಳ ಕಾಲ ಬೆಂಗಳೂರಿನ ಸರ್ಕಾರಿ ಕಾನೂನು ಕಾಲೇಜಿ ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ   ಕಾನೂನು, ಸಮಾಜ ಕಲ್ಯಾಣ ಸಚಿವರಾಗಿ, ದ.ಆಫ್ರಿಕಾ ದೇಶದ ಸಂವಿಧಾನ ರಚನಾ ಸಮಿತಿಯ ಪರಿಣಿತ  ಸದಸ್ಯರಾಗಿ ಎಲ್ಲರ ಜನಮಾನಸದಲ್ಲಿ ಜೀವಂತರಾಗಿದ್ದಾರೆ ಎಂದರು. 

ಯುವ ಮುಖಂಡ ಹರಿಯಮ್ಮನಹಳ್ಳಿ ಶಿವರಾಜ್, ಏಕಲವ್ಯ ಸಂಘರ್ಷ ಸಮಿತಿಯ ಉಪಾಧ್ಯಕ್ಷ  ಆಲಮರಸಿಕೇರಿ ಮಂಜುನಾಥ, ಮೈದೂರು ಪರುಶುರಾಮ,  ಕಾರ್ಯದರ್ಶಿ ಟಿ ಶಿವರಾಜ, ಖಜಾಂಚಿ ಹರೀಶ,  ಪದಾಧಿಕಾರಿಗಳಾದ ಬಿ. ಅಂಜಿನಪ್ಪ ಮಂಜುನಾಥ, ಅರ್ಜುನ, ಮಾರುತಿ, ಕುಮಾರ್, ಗೋವಿಂದ, ಅಭಿಷೇಕ, ಪ್ರಶಾಂತ, ಸೇರಿದಂತೆ ಇತರರು ಇದ್ದರು.

error: Content is protected !!