ದಾವಣಗೆರೆ, ಮಾ.22 – ನಗರದ ಈಶ್ವರಮ್ಮ ಶಾಲಾವರಣದ ರಂಗಮಂಟಪ ದಲ್ಲಿ ಶ್ರೀ ಶಾರದಾ ಸಂಗೀತ ಮತ್ತು ನೃತ್ಯ ಕಲಾಶಾಲೆ ವತಿಯಿಂದ ಪ್ರಸಿದ್ಧ ಕಲಾವಿದೆ ರುಕ್ಮಿಣೀದೇವಿ ಅರುಂಡೇಲ್ ಸಂಸ್ಮರಣಾರ್ಥ `ನೃತ್ಯ ಸಮರ್ಪಣೆ 2022′ ಕಾರ್ಯಕ್ರಮವು ನಡೆಯಿತು.
ವೈವಿಧ್ಯಮಯವಾದ ಹದಿನಾಲ್ಕು ನೃತ್ಯಗಳನ್ನು ಕಲಾಶಾಲೆಯ ನಂದನ, ನಯನ, ಸುನಿಧಿ, ಸಹನ, ವಿಶ್ವಂಭರ ಮುಂತಾದ ಹಿರಿ-ಕಿರಿಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದರು. ಗುರುಗಳಾದ ವಿದ್ವಾನ್ ರಾಜಗೋಪಾಲ ಭಾಗವತ್, ವಿದುಷಿ ಪೂರ್ಣಿಮಾ ಭಾಗ ವತ್ರಿಗೆ `ಗುರುವಂದನೆ’ ಸಲ್ಲಿಸಲಾ ಯಿತು. ಮುಖ್ಯಅತಿಥಿಗಳಾಗಿ ಈಶ್ವರಮ್ಮ ಶಾಲಾ ಅಧ್ಯಕ್ಷರಾದ ಶ್ರೀಮತಿ ಕೆ.ಆರ್.ಸುಜಾತ ಕೃಷ್ಣ, ಈಶ್ವರಮ್ಮ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎ.ಆರ್. ಉಶಾ ರಂಗನಾಥ್ ಆಗಮಿಸಿದ್ದರು. ಹಿರಿಯ ಪತ್ರಕರ್ತ ಎಚ್.ಬಿ.ಮಂಜುನಾಥ ಉಪಸ್ಥಿತರಿದ್ದರು. ಶ್ರೀಕಾಂತ್ ಭಟ್ ಕಾರ್ಯಕ್ರಮ ನಿರೂಪಿಸಿದರು.