ಸ್ಮಾರ್ಟ್ ಸಿಟಿಗೊಂದು ಸ್ಮಾರ್ಟ್ ದ್ವಿಚಕ್ರ ವಾಹನ

ದಾವಣಗೆರೆ, ಮಾ.21- ನಗರದ ಶ್ರೀ ಶಂಕರ ವಿಹಾರ ಬಡಾವಣೆಯ ಶ್ರೀ ಮಲ್ಲಿಕಾರ್ಜುನ ಮೋಟಾರ್ ಅಂಡ್ ಸ್ಕೂಟರ್ ಮಾರ್ಟ್‍ನಲ್ಲಿ ಸೋಮವಾರ ನೂತನ ಕೈನೆಟಿಕ್ ಗ್ರೀನ್ ಎಲೆಕ್ಟ್ರಿಕ್ ಸ್ಕೂಟರ್ ಷೋರೂಂ ಉದ್ಘಾಟಿಸಲಾಯಿತು.

ಅತಿಥಿ ಗಣ್ಯರು ದೀಪ ಬೆಳಗಿಸುವ ಮೂಲಕ ನೂತನ ಷೋ ರೂಂ ಉದ್ಘಾಟಿಸಿದರಲ್ಲದೇ, 18 ಗ್ರಾಹಕರಿಗೆ ಕೈನೆಟಿಕ್ ಗ್ರೀನ್ ದ್ವಿಚಕ್ರ ವಾಹನಗಳನ್ನು ವಿತರಿಸಿದರು.

ಎಸ್‍ಬಿಐ ಆರ್‍ಬಿಓ 3 ರೀಜನಲ್ ಮ್ಯಾನೇಜರ್ ರತನ್ ಕುಮಾರ್ ರತ್ನ ಮಾತನಾಡಿ, ಇಂಧನ ಬೆಲೆ ದುಬಾರಿಯಾಗಿರುವ ಪ್ರಸ್ತುತ ದಿನಮಾನಗಳಲ್ಲಿ ನಾಗರಿಕರಿಗೆ ಪರಿಸರಕ್ಕೆ ಪೂರಕವಾದ ಎಲೆಕ್ಟ್ರಿಕ್ ಸ್ಕೂಟರ್ ಅತ್ಯವಶ್ಯಕವಾಗಿದ್ದು, ಇದು ಹಣದ ಉಳಿತಾಯದ ಜೊತೆಗೆ ಸಮಾಜಕ್ಕೆ ಉಪಯೋಗಕಾರಿಯಾಗಿದೆ ಎಂದು ತಿಳಿಸಿದರು.

ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯ ನಿರ್ದೇಶಕ ಡಾ.ಜಯಂತ್ ಮಾತನಾಡಿ, ಹಿಂದಿನ ದಿನಗಳಲ್ಲಿ ಕೈನೆಟಿಕ್ ಲೂನ ಮಹಿಳೆಯರ ಒಂದು ಪ್ರೆಸ್ಟೀಜ್ ಆಗಿತ್ತು. ಇದೀಗ ನೈಸರ್ಗಿಕ ಸಂಪನ್ಮೂಲಗಳ ಕೊರತೆಯನ್ನು ಮನಗಂಡು ಕೈನೆಟಿಕ್ ಕಂಪನಿಯು ಎಲೆಕ್ಟ್ರಿಕ್ ಸ್ಕೂಟರ್‍ ಆವಿಷ್ಕರಿಸಿದ್ದು, ಕೆಲವೇ ವರ್ಷಗಳಲ್ಲಿ ಎಲ್ಲ ಕಡೆಗಳಲ್ಲಿ ಇವುಗಳ ಸಂಚಾರ ಕಾಣಬಹುದಾಗಿದೆ. ಪರಿಸರ ಪೂರಕವಾದ ಈ ವಾಹನಗಳು ಸ್ಮಾರ್ಟ್‍ಸಿಟಿಗೆ ಉಪಯುಕ್ತವಾಗಿವೆ ಎಂದರು.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜಯಂತ್ ಪೂಜಾರ್ ಮಾತನಾಡಿದರು.                                                                         

ಮಲ್ಲಿಕಾರ್ಜುನ ಸಮೂಹ ಸಂಸ್ಥೆಗಳ ಅಧ್ಯಕ್ಷ ಎನ್.ಜೆ.ಗುರುಸಿದ್ದಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರದಲ್ಲಿ ಸುಮಾರು 40 ವರ್ಷಗಳಿಂದ ಕೈನೆಟಿಕ್ ಕಂಪನಿಯನ್ನು ನಂಬಿ ವಾಹನಗಳ ಷೋ ರೂಂ ನಡೆಸಿಕೊಂಡು ಬಂದಿದ್ದೇನೆ. ಕೈನೆಟಿಕ್ ಕಂಪನಿಯು ನೂತನ ಗ್ರೀನ್ ಎಲೆಕ್ಟ್ರಿಕ್ ವಾಹನಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಗ್ರಾಹಕರ ಅಭಿರುಚಿಗೆ ತಕ್ಕಂತೆ ಹೊಸ ಹೊಸ ಮಾಡೆಲ್‍ಗಳನ್ನು ಗ್ರಾಹಕರಿಗೆ ಪರಿಚಯಿಸಲಾಗುವುದು ಎಂದು ತಿಳಿಸಿದರು.

error: Content is protected !!