ಹರಪನಹಳ್ಳಿ : ಕಾನೂನು ಅರಿವು ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಹಿತನುಡಿ
ಹರಪನಹಳ್ಳಿ, ಮಾ. 17- ಪ್ರತಿಯೊಬ್ಬರೂ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಶುದ್ಧವಾದ ಆಹಾರ ಸೇವಿಸಬೇಕು. ಸಮಾಜದಲ್ಲಿ ಇರುವಷ್ಟು ದಿನ ಏನಾದರೂ ಒಂದು ಸಾಧನೆ ಮಾಡಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ. ಭಾರತಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿರುವ ವಕೀಲರ ಸಂಘದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಹೃದಯ ಸಂಬಂಧಿತ ರೋಗ ಲಕ್ಷಣಗಳು ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆರೋಗ್ಯಕ್ಕಾಗಿ ಧ್ಯಾನ ಮಾಡುತ್ತಾ ಭಗವಂತನನ್ನು ಆರಾಧಿಸಿಕೊಂಡಾಗ ಮಾತ್ರ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದರು.
ವಕೀಲರ ಸಂಘದ ಅಧ್ಯಕ್ಷ ಕೆ. ಜಗದಪ್ಪ ಮಾತನಾಡಿ, ಸದೃಢವಾದ ದೇಹಕ್ಕೆ ಸದೃಢವಾದ ಆಹಾರ ಸೇವಿಯಬೇಕು. ನಮ್ಮ ಮನಸ್ಸನ್ನು ಶುದ್ಧವಾಗಿ ನಿಯಂತ್ರಿಸಲು ನೆಮ್ಮದಿ ಬಹಳ ಮುಖ್ಯ. ಆದ್ದರಿಂದ ನಾವುಗಳು ಆರೋಗ್ಯದ ಹಿತ ದೃಷ್ಟಿಯಿಂದ ಆರೋಗ್ಯಕ್ಕಾಗಿ ಒಳ್ಳೆಯ ಸ್ನೇಹಿತರನ್ನು ಆಯ್ಕೆ ಮಾಡಿಕೊಂಡು ನಮ್ಮ ಆರೋಗ್ಯದ ಹಿತ ಕಾಪಾಡಿಕೊಳ್ಳಬೇಕೆಂದರು.
ವಕೀಲರಾದ ಬಿ. ಕೃಷ್ಣಮೂರ್ತಿ, ಡಾ|| ಮಹಮ್ಮದ್ ಸಮೀರ್ ಹೆಚ್. ಹೃದಯ ಕಾಯಿಲೆಗೆ ಸಂಬಂಧಿಸಿದಂತೆ ಮಾತನಾಡಿದರು.
ಈ ಸಂದರ್ಭದಲ್ಲಿ ಕಿರಿಯ ಸಿವಿಲ್ ನ್ಯಾಯಧೀಶರಾದ ಫಕ್ಕೀರವ್ವ ಕೆಳಗೇರಿ, ಸರ್ಕಾರಿ ಅಭಿಯೋಜಕರಾದ ಎನ್. ಮೀನಾಕ್ಷಿ, ನಿರ್ಮಲ, ಅಪರ ಸರ್ಕಾರಿ ವಕೀಲ ವಿ.ಜಿ. ಪ್ರಕಾಶ್‌ಗೌಡ, ವಕೀಲರ ಸಂಘದ ಉಪಾಧ್ಯಕ್ಷ ಡಿ.ಬಿ.ವಾಸುದೇವ, ಜಂಟಿ ಕಾರ್ಯದರ್ಶಿ ಎಂ. ನಾಗೇಂದ್ರಪ್ಪ, ಖಜಾಂಚಿ ಹುಲಿಯಪ್ಪ, ವಕೀಲರಾದ ಕೆ. ಚಂದ್ರಗೌಡ, ಜಿ. ಗಂಗಾಧರ ಗುರುಮಠ್, ಬಿ. ರೇವನಗೌಡ, ಆರ್. ರಾಮನ ಗೌಡ, ಕೆ.ಎಂ. ಚಂದ್ರಮೌಳಿ, ಎಂ. ಅಜ್ಜಪ್ಪ,
ಕೆ.ಬಸವರಾಜ್, ಬಿ. ಹಾಲೇಶ್, ಎಂ. ಮೃತ್ಯುಂಜಯ ಸೇರಿದಂತೆ ಇತರರು ಇದ್ದರು.