ರಾಣೇಬೆನ್ನೂರಿನಲ್ಲಿ ಪುನೀತ್ ಹುಟ್ಟುಹಬ್ಬ : ರಕ್ತದಾನ, ನೇತ್ರದಾನ

 ರಾಣೇಬೆನ್ನೂರು, ಮಾ.17- ರೈಲು ನಿಲ್ದಾಣದ ಬಳಿಯ ಡಾ. ರಾಜಕುಮಾರ್ ಆಟೋ ಚಾಲಕ ಹಾಗೂ ಮಾಲೀಕರ ಸಂಘದಿಂದ ದಿ. ಪುನೀತ್ ರಾಜಕುಮಾರ್  ಹುಟ್ಟು ಹಬ್ಬದ ಪ್ರಯುಕ್ತ ರಕ್ತದಾನ, ನೇತ್ರದಾನ  ಮತ್ತು ಅನ್ನ ಸಂತರ್ಪಣೆ ಏರ್ಪಾಡು ಮಾಡಲಾಗಿತ್ತು.

ಸಂಘದ ಆಟೋ ಚಾಲಕ, ಮಾಲೀಕರು ಪುನೀತ್ ಭಾವಚಿತ್ರದೊಂದಿಗೆ ಶೃಂಗರಿಸಿದ  ತಮ್ಮ ಆಟೋಗಳೊಂದಿಗೆ ನಗರಾದ್ಯಂತ ಮೆರವಣಿಗೆ ನಡೆಸಿದರು. ಸಂಘದ ಸದಸ್ಯರು ಹಾಗೂ ಕೆಲ ಅಭಿಮಾನಿಗಳು ರಕ್ತದಾನ ಮಾಡಿದರು. ನಂತರ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ  ಏರ್ಪಡಿಸಲಾಗಿತ್ತು.

error: Content is protected !!