ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪಿ. ಠಾಕೂರ್
ಜಗಳೂರು, ಮಾ.17- ವಿದ್ಯಾರ್ಥಿಗಳಿಗೆ ಮತ್ತು ಯುವಕರಿಗೆ ಸೇವಾದಳ ಶಿಕ್ಷಣ ಅಗತ್ಯವಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಎ.ಪಿ ಠಾಕೂರ್ ತಿಳಿಸಿದರು.
ಜಗಳೂರು ಪಟ್ಟಣದ ಎನ್.ಎಂ.ಕೆ. ಪ್ರೌಢ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಸೇವಾದಳ ಶಿಕ್ಷಕರ ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲಾ ದೈಹಿಕ ಶಿಕ್ಷಕರ ಒಂದು ದಿನದ ಕೊರೊನಾ ಜಾಗೃತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತ ಸೇವಾದಳವು ಸ್ವಾತಂತ್ರ್ಯದ ಪೂರ್ವದಿಂದಲೂ ಯುವಕರಿಗೆ ದೇಶಭಕ್ತಿ, ಭಾವೈಕ್ಯತೆ, ಶಿಸ್ತು, ಸೇವಾ ಮನೋಭಾವನೆ ಯನ್ನು ಮೂಡಿಸುವ ಕಾರ್ಯವನ್ನು ಮಾಡು ತ್ತಿದೆ. ಸ್ವಾತಂತ್ರ್ಯದ ನಂತರ ವಿದ್ಯಾರ್ಥಿಗಳಿಗೆ ಶಾರೀರಿಕ, ಯೋಗ, ನೈತಿಕ ಶಿಕ್ಷಣವನ್ನು ನೀಡುತ್ತಿದ್ದು, ಕೊರೊನಾ ಸಂದರ್ಭದಲ್ಲೂ ಕೂಡ ಸೇವಾದಳ ಉತ್ತಮ ಸೇವೆಯನ್ನು ಸಲ್ಲಿಸಿದೆ. ಜಿಲ್ಲೆಯಲ್ಲಿನ ಎಲ್ಲ ದೈಹಿಕ ಶಿಕ್ಷಕರಿಗೆ ಭಾರತ ಸೇವಾದಳವು ಮಾಸ್ಕ್, ಸ್ಯಾನಿಟೈಸರ್ ಉಚಿತವಾಗಿ ನೀಡಿದೆ. ಶಿಕ್ಷಕರು ಮಕ್ಕಳಿಗೆ ಸೇವಾದಳ ಶಿಕ್ಷಣವನ್ನು ಶಾಲೆಯಲ್ಲಿ ಕಲಿಸಬೇಕು ಎಂದು ತಿಳಿಸಿದರು.
ವಲಯ ಸಂಘಟಕ ಎಂ. ಅಣ್ಣಯ್ಯ ಮಾತನಾಡಿ, ಕಳೆದ 2 ವರ್ಷಗಳಿಂದ ಕೊರೊನಾದಿಂದಾಗಿ ಶಿಕ್ಷಕರಿಗೆ ಮತ್ತು ವಿದ್ಯಾ ರ್ಥಿಗಳಿಗೆ ತರಬೇತಿ ಶಿಬಿರ ಗಳನ್ನು ನಡೆಸಲು ಸಾಧ್ಯವಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು. ಕಾರ್ಯಕ್ರಮ ದಲ್ಲಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು, ಬಿ.ಎಸ್. ಶಿವಕುಮಾರ್, ದೈಹಿಕ ಶಿಕ್ಷಣ ಅಧಿಕಾರಿ ಸುರೇಶ್ ರೆಡ್ಡಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕರಿಬಸಪ್ಪ ಸ್ವಾಗತಿಸಿ ದರು, ಸಿ.ಪಿ.ಎಸ್ ಶಿವಪ್ಪ ನಿರೂಪಿಸಿದರು, ಮುಖ್ಯಶಿಕ್ಷಕಿ ಗೀತಾ ವಂದಿಸಿದರು.