ಹರಪನಹಳ್ಳಿ : ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಲತಾ ಮಲ್ಲಿಕಾರ್ಜುನ್ ಆಶಯ
ಹರಪನಹಳ್ಳಿ, ಮಾ. 17- ಮಹಿಳೆಯರು ಅಡುಗೆ ಮನೆಗೆ ಸೀಮಿತವಾಗದೇ ತಮ್ಮ ಸ್ವಂತ ಸಾಮರ್ಥ್ಯದಿಂದ ಎಲ್ಲಾ ಕ್ಷೇತ್ರಗಳಲ್ಲೂ ಮುಖ್ಯವಾಹಿನಿಗೆ ಬರುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಹೇಳಿದರು.
ಇಲ್ಲಿನ ಕಾಂಗ್ರೆಸ್ ಭವನದಲ್ಲಿ ಎಂ.ಪಿ. ರವೀಂದ್ರ ಪ್ರತಿಷ್ಠಾನದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಹಾಗೂ ವಿಕಲಚೇತನ ಮಹಿಳೆಯರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಇತಿಹಾಸದ ಪುಟವನ್ನು ತಿರುವಿ ನೋಡಿ ದಾಗ ವೀರ ವನಿತೆಯರಾದ ಅಕ್ಕಮಹಾದೇವಿ, ಕಿತ್ತೂರು ರಾಣಿ ಚೆನ್ಮಮ್ಮ, ಮದರ್ ತೆರೆಸಾ, ಲತಾ ಮಂಗೇಶ್ಕರ್, ಗಂಗೂಬಾಯಿ ಹಾನಗಲ್, ಕಲ್ಪನಾ ಚಾವ್ಲಾ, ಇಂದಿರಾಗಾಂಧಿ, ಸಾಲುಮರದ ತಿಮ್ಮಕ್ಕ ಸೇರಿದಂತೆ ಸಾಧನೆ ಮಾಡಿದ ಮಹಿಳೆ ಯರ ದೊಡ್ಡ ಪಟ್ಟಿಯೇ ಸಿಗುತ್ತದೆ. ಮಹಿಳೆ ಸಹನೆ, ತಾಳ್ಮೆಯ ಪ್ರತಿರೂಪ. ಮಹಿಳೆಯರು ಸಹ ಗಟ್ಟಿತನ ರೂಢಿಸಿಕೊಳ್ಳಬೇಕು. ಜಗತ್ತಿನಲ್ಲಿ ಮಹಿ ಳೆಯರಿಗೆ ಅತ್ಯಂತ ಗೌರವವನ್ನು ಭಾರತದಲ್ಲಿ ನೀಡಲಾಗುತ್ತದೆ. ತಾಲ್ಲೂಕಿನಲ್ಲಿ ಸಾವಿರ ವಿಕಲ ಚೇತನ ಮಹಿಳೆಯರು ಇದ್ದು, ಅದರಲ್ಲಿ ಸದ್ಯ ಗ್ರಾಮ ಪಂಚಾಯ್ತಿಗೆ ಇಬ್ಬರಂತೆ ಮಹಿಳೆಯರನ್ನು ಗೌರವಿಸಲಾಗುತ್ತದೆ ಎಂದರು.
ಖೋ-ಖೋ ಕ್ರೀಡೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಪ್ರಸ್ತುತ ರಾಷ್ಟ್ರೀಯ ತಂಡಕ್ಕೆ ಖೋ -ಖೋ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿರುವ ನಂದಿನಿ ಒಡೆಯರ್, ಚಿಗಟೇರಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಭಾಗ್ಯಮ್ಮ, ನಂದಿಬೇವೂರು ಗ್ರಾ.ಪಂ. ಅಧ್ಯಕ್ಷೆ ಸುಜಾತ ಹಾವಿನ, ಉಪಾಧ್ಯಕ್ಷೆ ಲಕ್ಷ್ಮಿ ಚಂದ್ರಶೇಖರ್, ಹಲು ವಾಗಲು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಎನ್.ಟಿ. ರತ್ನಮ್ಮ ಸೋಮಣ್ಣ, ಪುರಸಭಾ ಮಾಜಿ ಸದಸ್ಯೆ ಕವಿತಾ ಸುರೇಶ್, ಗ್ರಾ.ಪಂ. ಸದಸ್ಯೆ ರೇಣುಕಾ ಮಂಜುನಾಥ, ಉಮಾ ಶಂಕರ್, ಯುವ ಕಾಂಗ್ರೆಸ್ ಅಧ್ಯಕ್ಷ ಮತ್ತೂರು ಬಸವರಾಜ, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಹರಿಯಮ್ಮನಹಳ್ಳಿ ಶಿವರಾಜ, ಎನ್.ಎಸ್.ಯು.ಐ. ಅಧ್ಯಕ್ಷ ಶ್ರೀಕಾಂತ ಯಾದವ್, ಮುಖಂ ಡರಾದ ಮೈದೂರು ರಾಮಣ್ಣ, ಕಡಬಗೇರಿ ಮಲ್ಲಿ ಕಾರ್ಜುನ, ಪ್ರಸಾದ್ ಕಾವಡಿ ಉಪಸ್ಥಿತರಿದ್ದರು.