10.78 ಕೋಟಿ ರೂ. ಪರಿಹಾರ
ದಾವಣಗೆರೆ, ಮಾ.13- ಜಿಲ್ಲೆಯ ವಿವಿಧ ನ್ಯಾಯಾಲ ಯಗಳಲ್ಲಿ ಶನಿವಾರ ಕಾನೂನು ಸೇವಾ ಪ್ರಾಧಿಕಾರದ ಆಶ್ರಯದಲ್ಲಿ ನಡೆದ ಬೃಹತ್ ಲೋಕ ಅದಾಲತ್ನಲ್ಲಿ ಕೈಗೆತ್ತಿಕೊಳ್ಳಲಾಗಿದ್ದ 15,918 ಪ್ರಕರಣಗಳ ಪೈಕಿ 7,362 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 10.78 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ರಾಜಿಯಾಗಬಲ್ಲ 331 ಅಪರಾಧ ಪ್ರಕರಣ ಗಳ ಪೈಕಿ 30 ಪ್ರಕರಣಗಳನ್ನು ಇತ್ಯರ್ಥ ಗೊಳಸಲಾಗಿದ್ದು, 83,920 ರೂ. ಪರಿಹಾರ ಕೊಡಿಸಲಾಗಿದೆ.
ಸೆಕ್ಷನ್ 138ರಡಿಯಲ್ಲಿ ಬರುವ ಎನ್ಐ ಆಕ್ಟ್ಗೆ ಸಂಬಂಧಿಸಿದಂತೆ 1092 ಪ್ರಕರಣಗಳ ಪೈಕಿ 62 ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದ್ದು, 1.29 ಕೋಟಿ ರೂ. ಪರಿಹಾರ ಕೊಡಿಸಲಾಗಿದೆ.
ಬ್ಯಾಂಕ್ಗೆ ಸಂಬಂಧಿಸಿದ 118 ಪ್ರಕರಣಗಳ ಪೈಕಿ 16 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 19,334 ಲಕ್ಷ ರೂ.ಪರಿಹಾರ ಕಲ್ಪಿಸಲಾಯಿತು.
ಹಣ ಮರುಪಾವತಿ ಪ್ರಕರಣಗಳಿಗೆ ಸಂಬಂಧಿಸಿದಂತೆ 174 ಪ್ರಕರಣಗಳ ಪೈಕಿ 14 ಪ್ರಕರಣಗಳು ಇತ್ಯರ್ಥವಾಗಿದ್ದು 52 ಲಕ್ಷ ರೂ.,
ಮೋಟರ್ ವಾಹನ ಅಪಘಾತ ಕಾಯ್ದೆಯಡಿ ಬಂದಿದ್ದ ಒಟ್ಟು 701 ಪ್ರಕರಣಗಳ ಪೈಕಿ 71 ಪ್ರಕರಣಗಳನ್ನು ಬಗೆಹರಿಸಿ, 3.36 ಕೋಟಿ ರೂ. ಪರಿಹಾರ ಕೊಡಿಸಲಾಯಿತು. ಮರಳು ನೀತಿಗೆ ಸಂಬಂಧಿಸಿದಂತೆ ಕೈಗೆತ್ತಿಕೊಂಡ 196 ಪ್ರಕರಣಗಳ ಪೈಕಿ 36 ಇತ್ಯರ್ಥಗೊಂಡಿದ್ದು 54.53 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ.ಕಾರ್ಮಿಕರಿಗೆ ಪರಿಹಾರ ಕೊಡಿಸುವ ಸಂಬಂಧ ಬಂದಿದ್ದ 17 ಪ್ರಕರಣಗಳ ಪೈಕಿ 5 ಪ್ರಕರಣಗಳು ಇತ್ಯರ್ಥವಾಗಿದ್ದು, 2.49 ಲಕ್ಷ ರೂ. ಪರಿಹಾರ ಕೊಡಿಸಲಾಗಿದೆ. ಕಾರ್ಮಿಕ ವಿವಾದ ಪ್ರಕರಣಗಳಿಗೆ ಸಂಬಂಧಿಸಿದಂತೆ 20ರ ಪೈಕಿ 7 ಪ್ರಕರಣಗಳನ್ನು ಇತ್ಯರ್ಥಗೊಳಿಸಿ 1.80 ಲಕ್ಷ ಪರಿಹಾರ., ವಿದ್ಯುತ್ ಕಾಯ್ದೆಗೆ ಸಂಬಂಧ ಪಟ್ಟಂತೆ ಕೈಗೆತ್ತಿಕೊಂಡ ಎಲ್ಲಾ 181 ಪ್ರಕರಣಗಳನ್ನೂ ಇತ್ಯರ್ಥಪಡಿಸಿ 14.77 ಲಕ್ಷ ರೂ. ಪರಿಹಾರ ಕೊಡಿಸಲಾಯಿತು.
5426 ಪೆಟ್ಟಿ ಕೇಸ್ಗಳು ರಾಜೀಯಲ್ಲಿ ಮುಗಿದಿದ್ದು, 20.25 ಲಕ್ಷ ರೂ. ಹಾಗೂ 15 ಇತರೆ ಅಪರಾಧ ಪ್ರಕರಣಗಳ ಸಂಬಂಧ 20.49 ಲಕ್ಷ ರೂ. ಪರಿಹಾರ ಕೊಡಿಸಲಾಯಿತು.
ನ್ಯಾಯಾಲಯದಲ್ಲಿ ದಾವೆ ಹೂಡುವ ಪೂರ್ವದಲ್ಲಿ ಸಲ್ಲಿಸಲ್ಪಟ್ಟ ಮನವಿಗಳ 1418 ಪ್ರಕರಣಗಳಿಗೆ ಸಂಬಂಧಪಟ್ಟಂತೆ 121 ಪ್ರಕರಣಗಳನ್ನು ಇತ್ಯರ್ಥಪಡಿಸಿ, 1.60 ಕೋಟಿ ರೂ. ಪರಿಹಾರ ಕೊಡಿಸುವುದೂ ಸೇರಿದಂತೆ ಒಟ್ಟಾರೆ 7362 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ಅವರ ನೇತೃತ್ವದಲ್ಲಿ ನಡೆದ ಅದಾಲತ್ನಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರವೀಣ್ ನಾಯಕ್ ಸೇರಿದಂತೆ ಇತರೆ ನ್ಯಾಯಾಧೀಶರು ಉಪಸ್ಥಿತರಿದ್ದರು.