ದಾವಣಗೆರೆ, ಮಾ.13- ದಾವಣಗೆರೆ – ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 101.50 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಲೋಕಸಭಾ ಸದಸ್ಯ ಜಿ.ಎಂ.ಸಿದ್ದೇಶ್ವರ, ಶಾಸಕ ಎಸ್.ಎ.ರವೀಂದ್ರನಾಥ್, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್ ಅವರು ಇಂದು ಚಾಲನೆ ನೀಡಿದರು. ಜೆ.ಎಚ್. ಬಡಾವಣೆ ಮುಖ್ಯ ರಸ್ತೆ ವಿಭಜಕದಲ್ಲಿ 9 ಅಡಿ ಎತ್ತರದ ಅಕ್ಟೋಗನಲ್ ಕಂಬಗಳನ್ನು ಅಳವಡಿಸಿ, ಬೆಳಕಿನ ವ್ಯವಸ್ಥೆ ಕಲ್ಪಿಸುವುದು, ಪಟೇಲ್ ಬಡಾವಣೆ, ನಿಜಲಿಂಗಪ್ಪ ಬಡಾವಣೆ, ದೇವರಾಜ ಅರಸು ಬಡಾವಣೆಯ ನಾಮ ಫಲಕದ ಕಮಾನು ಗಳನ್ನು ಉದ್ಘಾಟಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್, ಸ್ಥಳೀಯ ಪಾಲಿಕೆ ಸದಸ್ಯೆ ರೇಖಾ ಸುರೇಶ್ ಗಂಡಗಳೆ, ಪ್ರಾಧಿಕಾರದ ಸದಸ್ಯರಾದ ಗೌರಮ್ಮ ಪಾಟೀಲ್, ಬಾತಿ ಚಂದ್ರಶೇಖರ್, ಆರ್. ಲಕ್ಷ್ಮಣ್, ಮಾರುತಿರಾವ್ ಘಾಟ್ಗೆ,
ಆಯುಕ್ತ ಬಿ.ಟಿ. ಕುಮಾರಸ್ವಾಮಿ, ಕಾರ್ಯಪಾಲಕ ಅಭಿಯಂತರ ಕೆ.ಎಚ್. ಶ್ರೀಕರ್, ಕಿರಿಯ ಅಭಿಯಂತರಾದ ಅಕ್ಷತಾ ಕೆ.ಟಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.