ಎಸ್.ವಿ.ರಾಮಚಂದ್ರ ಬಗ್ಗೆ ಸಂಸದ ಸಿದ್ದೇಶ್ವರ ಪ್ರಶಂಸೆ
ಜಗಳೂರು, ಮಾ.11- ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿರುವ ಎಸ್.ವಿ.ರಾಮಚಂದ್ರ ಕ್ಷೇತ್ರದಲ್ಲಿ ತಮ್ಮ ಆಡಳಿತಾವಧಿಯಲ್ಲಿ ಹಿಂದಿನ ಯಾವ ಶಾಸಕರೂ ತರದಂತಹ ಸುಮಾರು 2,500 ಕೋಟಿ ರೂ. ಅನುದಾನವನ್ನು ಪ್ರಥಮ ಬಾರಿಗೆ ತಾಲ್ಲೂಕಿಗೆ ತರುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಜಿ.ಎಂ.ಸಿದ್ದೇಶ್ವರ್ ಪ್ರಶಂಸಿಸಿದರು.
ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ 10 ಕೋಟಿ ರೂ. ವೆಚ್ಚದ ಸಿಸಿ ರಸ್ತೆ ಮತ್ತು 1.40 ಕೋಟಿ ರೂ. ವೆಚ್ಚದ ಸ್ಮಶಾನ ಅಭಿವೃದ್ದಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಸ್ಮಶಾನವಿಲ್ಲದೆ ಅಂತ್ಯಸಂಸ್ಕಾರ ನಡೆಸಲು ಪರದಾಡಬೇಕಿತ್ತು. ಸರ್ಕಾರ ವಿಶೇಷ ವಾಗಿ ಸ್ಮಶಾನ ಅಭಿವೃದ್ದಿಗೆ ಮೊದಲ ಪ್ರಾಶಸ್ತ್ಯ ನೀಡಿ ಮೊದಲ ಹಂತದಲ್ಲಿ ತಾಲ್ಲೂಕಿನ 10 ಗ್ರಾಮಗಳಿಗೆ ಕಾಂಪೌಂಡ್, ಬೋರ್ ವೆಲ್, ಚಿತಾ ಗಾರ ಸೇರಿದಂತೆ ಮೂಲ ಸೌಕರ್ಯ ಗಳುಳ್ಳ ಸ್ಮಶಾನಗಳನ್ನು ನಿರ್ಮಿಸಲಾಗುವುದು ಎಂದರು.
ಪಂಚಾಯತ್ ರಾಜ್ ಇಂಜಿನಿಯ ರಿಂಗ್ ಇಲಾಖೆಯಿಂದ ತುಪ್ಪದಹಳ್ಳಿ ಅಸಗೋಡು ಗ್ರಾಮಗಳಲ್ಲಿ 2.40 ಕೋಟಿ ರೂ., ಪಲ್ಲಾಗಟ್ಟೆ ಗ್ರಾಮ 2 ಕೋಟಿ ರೂ., ಗುರುಸಿದ್ದಾಪುರ 1.50 ಕೋಟಿ ರೂ., ಯರ್ಲಕಟ್ಟೆ 1.80 ಕೋಟಿ ರೂ., ಬಸವನಕೋಟೆ 1.50 ಕೋಟಿ ರೂ., ಅಗಸನಹಳ್ಳಿ 1 ಕೋಟಿ ರೂ. ವೆಚ್ಚ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಿಸಿರಸ್ತೆ ಮತ್ತು ಡಾಂಬರೀಕರಣ ರಸ್ತೆಗಳಿಗೆ ಅಭಿವೃದ್ದಿ ಕಾಮಗಾರಿಗಳಿಗೆ ಇಂದು ಚಾಲನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎಸ್.ವಿ.ರಾಮಚಂದ್ರ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ಎಚ್.ಸಿ ಮಹೇಶ್, ಜಿ.ಪಂ ಎಇಇ ಬಿ.ಪುಟ್ಟಸ್ವಾಮಿ, ಎಇ ಶಿವಕುಮಾರ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಿ. ಮಹೇಶ್ವರಪ್ಪ, ಲೊಕೋಪಯೋಗಿ ಇಲಾಖೆ ಎಇಇ ರುದ್ರಪ್ಪ, ಸಹಾಯಕ ಇಂಜಿನಿಯರ್ ಗಳಾದ ನಾಗರಾಜ್, ಪ್ರಭುದೇವ್ , ಗ್ರಾ.ಪಂ ಅಧ್ಯಕ್ಷೆ ವೀರಮ್ಮ ಮುಂತಾದದವರು ಇದ್ದರು.