ಮಲೇಬೆನ್ನೂರು, ಮಾ.11- ಪಟ್ಟಣದಲ್ಲಿ ಇತ್ತೀಚೆಗೆ ಹಿಜಾಬ್ ವಿವಾದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಚಿತ್ರ ಹಾಕಿದ್ದ ಎನ್ನಲಾದ ಕಾರಣಕ್ಕೆ ಹಲ್ಲೆಗೊಳಗಾಗಿದ್ದ ದಿಲೀಪ್ ಮನೆಗೆ ಶನಿವಾರ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ ನೀಡಿ, ತಂದೆ-ತಾಯಿಗೆ ಆತ್ಮಸ್ಥೈರ್ಯ ಹೇಳಿದರು.
ಸಿಜಿ ಆಸ್ಪತ್ರೆಯಲ್ಲಿರುವ ದಿಲೀಪ್‌ನನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಭಾನುವಾರ ಅಥವಾ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾನೆ.
ಘಟನೆಯಿಂದ ಯಾರು ಹೆದರಬೇಡಿ, ನಿಮ್ಮ ರಕ್ಷಣೆಗೆ ನಾವಿದ್ದೇನೆ. ತಪ್ಪು ಮಾಡಿದ್ದರೆ ಶಿಕ್ಷೆ ನೀಡಲು ಕಾನೂನು ಇದೆ. ಆದರೆ, ಇನ್ನೊಂದು ಗುಂಪಿನವರು ಏಕಾಏಕಿ ದಿಲೀಪ್ ಮೇಲೆ ಹಲ್ಲೆ ಮಾಡಿ, ಎದೆಗೆ ತೀವಿದಿರುವುದನ್ನು ಮುತಾಲಿಕ್ ಖಂಡಿಸಿ, ತಪ್ಪಿಸ್ಥರನ್ನು ಕೂಡಲೇ ಬಂಧಿಸುವಂತೆ ಸ್ಥಳದಲ್ಲಿದ್ದ ಪಿಎಸ್ಐ ರವಿಕುಮಾರ್ ಅವರನ್ನು ಒತ್ತಾಯಿಸಿದರು.
ತಾ. ಬಿಜೆಪಿಯಿಂದ ಹಿಂದುಳಿದ ವಿಭಾಗದ ಅಧ್ಯಕ್ಷ ಕೆಂಚನಹಳ್ಳಿ ಮಹೇಶ್, ಪ್ರಕಾಶಾಚಾರ್, ಪುರಸಭೆ ನಾಮಿನಿ ಸದಸ್ಯರಾದ ಪಿ.ಆರ್.ರಾಜು, ಎ.ಕೆ.ಲೋಕೇಶ್ ದೊರೆ, ಕಜ್ಜರಿ ಹರೀಶ್, ಜಿ.ರಂಗನಾಥ್, ದಿಲೀಪ್ ತಂದೆ ಮಾಳಗಿಮನೆ ಮಂಜಣ್ಣ ಈ ವೇಳೆ ಹಾಜರಿದ್ದರು.