ಶಾಲೆ ಆರಂಭ: ಜಾಗ್ರತೆ ವಹಿಸಲು ಎಸ್ಸೆಸ್ ಕರೆ

ದಾವಣಗೆರೆ, ಜ.1- ಕೊರೊನಾ ಹಿನ್ನೆಲೆ ಕಳೆದ 9 ತಿಂಗಳ ಬಳಿಕ ಶಾಲಾ-ಕಾಲೇಜು ಆರಂಭಕ್ಕೆ ಸರ್ಕಾರ ಮಾರ್ಗ ಸೂಚಿ ನೀಡಿರುವುದು ಸ್ವಾಗತಾರ್ಹ ವಾಗಿದ್ದು ಮಕ್ಕಳು, ಶಿಕ್ಷಕರು ಜಾಗ್ರತೆ ಯಿಂದ ಇರಬೇಕು. ಇದಕ್ಕೆ ಪೋಷಕರೂ ಸಹ ಸಹಕಾರ ನೀಡಬೇಕಿದೆ ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ತಿಳಿಸಿದರು.

ಇಂದು ನಗರದ ನಗರ ದೇವತೆ ದುರ್ಗಾಂಬಿಕಾ ದೇವಿ ದೇವಸ್ಥಾನ ಟ್ರಸ್ಟ್ ವತಿಯಿಂದ ನಡೆಯುತ್ತಿರುವ  ದುರ್ಗಾಂಬಿಕಾ ಶಾಲೆಯ ಆವರಣದಲ್ಲಿ ಸಮಿತಿಯ ಗೌರವಾಧ್ಯಕ್ಷರು ಆದ ಎಸ್ಸೆಸ್, ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಶಾಲಾ-ಕಾಲೇಜು ಆರಂಭವನ್ನು ಸ್ವಾಗತಿಸಿದರು. ಅಲ್ಲದೇ, ಹೊಸ ವರುಷ ಎಲ್ಲರ ಬಾಳನ್ನು ಬೆಳೆಗಿ ಸುವಂತಾಗಲಿ ಎಂದು ಆಶಿಸಿದರು.

ನಂತರ ಮಾತನಾಡಿದ ಅವರು, ಶಾಲಾ-ಕಾಲೇಜು ಆರಂಭವಾಗದೇ ಇರುವುದು ಮಕ್ಕಳ ಮುಂದಿನ ಭವಿಷ್ಯಕ್ಕೆ ಧಕ್ಕೆ ಆಗುತ್ತಿತ್ತು. ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಶಾಲಾ-ಕಾಲೇ ಜುಗಳನ್ನು ಜಾಗ್ರತೆಯಿಂದ ನಡೆಸುವಂತೆ ಶಿಕ್ಷಕರಿಗೆ ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿ ಎಲ್ಲಾ ಶಾಲಾ-ಕಾಲೇಜುಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಆರಂಭಿಸಲು ಸೂಚಿಸಲಾಗಿದೆ. ನೂತನ ವರುಷ ಮಕ್ಕಳ ಭವಿಷ್ಯವನ್ನು ಉಜ್ವಲವಾಗಲಿಸಲಿ ಎಂದು ಹಾರೈಸಿದರು.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ ಅವರು ಶಾಲಾ ಮಕ್ಕಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ನಗರ ಪಾಲಿಕೆ ಸದಸ್ಯ ವಿನಾಯಕ ಪೈಲ್ವಾನ್, ಮಾಜಿ ಸದಸ್ಯ ಶಿವನಳ್ಳಿ ರಮೇಶ್, ಶ್ರೀ ದುರ್ಗಾಂಬಿಕಾದೇವಿ ದೇವಸ್ಥಾನ ಟ್ರಸ್ಟ್ ಧರ್ಮದರ್ಶಿಗಳಾದ ಯಜಮಾನ್ ಮೋತಿ ವೀರಣ್ಣ, ಗೌಡ್ರು ಚನ್ನಬಸಪ್ಪ, ಜೆ.ಕೆ.ಕೊಟ್ರಬಸಪ್ಪ, ಸೊಪ್ಪಿನವರ ಗುರುರಾಜ್, ಹುಮಂತರಾವ್ ಜಾಧವ್, ರಾಮಕೃಷ್ಣ, ಮುಖಂಡರುಗಳು, ಮುಖ್ಯೋಪಾಧ್ಯಾಯರು, ಶಿಕ್ಷಕರು, ಶಾಲೆಯ ಸಿಬ್ಬಂದಿ ವರ್ಗದವರು ಇದ್ದರು.

error: Content is protected !!