ದಾವಣಗೆರೆ,ಮಾ.11- ನಗರದ ಖೋ-ಖೋ ಫ್ರೆಂಡ್ಸ್ ಗ್ರೂಪ್ ವತಿಯಿಂದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಪುರುಷರ ಖೋ-ಖೋ ಪ್ರೀಮಿಯರ್ ಲೀಗ್ ಪಂದ್ಯಾವಳಿಯನ್ನು ಪ್ರಪ್ರಥಮ ಬಾರಿಗೆ ಮ್ಯಾಟ್ ಮೇಲೆ ಯಶಸ್ವಿಯಾಗಿ ನಡೆಸಲಾಯಿತು.
ಪ್ರಥಮ ಸ್ಥಾನವನ್ನು ಬಿ.ಎನ್. ರವಿಕುಮಾರ್ ಮಾಲೀಕತ್ವದ ನಂದಿಗ್ರೂಪ್, ದ್ವಿತೀಯ ಸ್ಥಾನವನ್ನು ಸೈಯದ್ ಬಾಷಾ ಮಾಲೀಕತ್ವದ ಮಾಸ್ಟರ್ಸ್, ತೃತೀಯ ಸ್ಥಾನವನ್ನು ಮರುಳಸಿದ್ದಪ್ಪ ಮಾಲೀಕತ್ವದ ಅಟ್ಯಾಕರ್ಸ್ ಮತ್ತು ನಾಲ್ಕನೇ ಸ್ಥಾನವನ್ನು ಡಾ.ವೀರೇಂದ್ರ ಮಾಲೀಕತ್ವದ ಡೈಮಂಡ್ಸ್ ತಂಡಗಳು ಪಡೆದವು.
ಪಂದ್ಯಾವಳಿಯ ಉತ್ತಮ ಓಟಗಾರ ವೀರೇಶ್, ಉತ್ತಮ ಹಿಡಿತಗಾರ ವೇಣುಗೋಪಾಲ್ ಎಸ್, ಸರ್ವತೋಮುಖ ಆಟಗಾರ ಬಾಹುಬಲಿ ಎಸ್. ಬಿ. ಹಾಗೂ ಉದಯೋನ್ಮುಖ ಆಟಗಾರರಾಗಿ ನಿಖಿಲ್ ಆಯ್ಕೆಯಾದರು.
ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಮಲ್ಲಾಪುರ ಪಂದ್ಯಾವಳಿ ಉದ್ಘಾಟಿಸಿ, ಮ್ಯಾಟ್ ಮೇಲೆ ಖೋ-ಖೋ ಆಡುವುದರಿಂದ ಕೈ ಕಾಲುಗಳು ತರಚುವುದಿಲ್ಲ ರಾಜ್ಯ ಮತ್ತು ರಾಷ್ರ ಮಟ್ಟದಲ್ಲಿ ಆಡುವ ಅನುಭವ ಇಲ್ಲೇ ಸಿಗುವಂತಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಸುಚೇತಾ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಎಕ್ಸಿಕ್ಯೂಟಿವ್ ಇಂಜನಿಯರ್ ಸತೀಶ್ ಎಂ, ಜನರಲ್ ಮ್ಯಾನೇಜರ್ ಎಸ್.ಕೆ. ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಸ್ಮಾಟ್ ಸಿಟಿ ಭರತ್ರಾಜ್, ಅರ್ಥರ್ ತ್ರಿಲೋಕ್ಸಿಂಗ್, ಸಿದ್ದಗಂಗಾ ಶಾಲೆ ಹೇಮಂತ್ ಡಿ, ಜಿಲ್ಲಾ ಖೋ-ಖೋ ಸಂಸ್ಥೆ ಅಧ್ಯಕ್ಷ ಜಿ.ಎಸ್.ಡಿ. ಮೂರ್ತಿ, ಹನುಮಂತಪ್ಪ, ಶ್ರೀಶೈಲ ಎಸ್. ಭಾಗವಹಿಸಿದ್ದರು.
ಅರುಣ್ ಠಾಕೂರ್, ಶ್ರೀನಿವಾಸ್, ಪ್ರದೀಪ್ ಕುಮಾರ್, ನ್ಯಾಯವಾದಿ ಉಮೇಶ್ ಗೌಡ ಪಾಟೀಲ್, ಜಿ.ಎಸ್.ಡಿ. ಮೂರ್ತಿ, ರಾಜ್ಯ ಯುವ ಪ್ರಶಸ್ತಿ ವಿಜೇತ ಎನ್.ಕೆ.ಕೊಟ್ರೇಶ್ ಮುಂತಾದವರು ಬಹುಮಾನ ವಿತರಣೆ ಮಾಡಿದರು. ಡಾ.ಚಂದ್ರಶೇಖರ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಜೆ.ರಾಮಲಿಂಗಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ಪರಶುರಾಮ್ ಪ್ರಾರ್ಥಿಸಿದರು. ಹೆಚ್.ಎಂ. ರಘು ಸ್ವಾಗತಿಸಿದರು. ಕೆ.ರವಿ ವಂದಿಸಿದರು.