ದಾವಣಗೆರೆ, ಮಾ.10- ಪಂಚರಾಜ್ಯ ಚುನಾವಣೆ ಯಲ್ಲಿ 4 ರಾಜ್ಯಗಳಲ್ಲಿ ಮತ ದಾರರು ಜನಪರ ಕೆಲಸಕ್ಕೆ ಆಶೀರ್ವದಿಸಿದ್ದಾರೆ ಎಂದು ನಗರ ಪಾಲಿಕೆಯ ಮಾಜಿ ಮಹಾ ಪೌರರೂ ಆದ ಹಾಲಿ ಸದಸ್ಯ ಬಿ.ಜಿ. ಅಜಯ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. 2014 ರಿಂದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ದೇಶವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುತ್ತಿದ್ದು, ವಿವಿಧ ಯೋಜನೆಗಳನ್ನು ನೇರವಾಗಿ ಪ್ರಜೆಗಳಿಗೆ ಮುಟ್ಟಿಸು ತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ನಿರ್ವಹಣೆ, ಪ್ರತಿಯೊಬ್ಬ ಪ್ರಜೆಗೆ ಲಸಿಕೆ ಹಾಗೂ ಹಲವಾರು ಅಭಿವೃದ್ಧಿ ಕೆಲಸಗಳಿಗೆ ಈ ಫಲಿತಾಂಶ ಕೈಗನ್ನಡಿಯಾಗಿದೆ. ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
January 6, 2025