ಮಲೇಬೆನ್ನೂರು, ಮಾ.8- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಇಂದು ಬೆಳಿಗ್ಗೆ ಬೆಳ್ಳಿ ರಥೋತ್ಸವ, ರಾತ್ರಿ ಪಾಲಿಕೋತ್ಸವ ಸಂಭ್ರಮದಿಂದ ಜರುಗಿದವು. ನಂದಿಗುಡಿ ಬೃಹನ್ಮಠದ ಶ್ರೀ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಉತ್ಸವದಲ್ಲಿ ಭಾಗವಹಿಸಿದ್ದರು. ಪಾಲಿಕೋತ್ಸವದ ವೇಳೆ ಪಟಾಕಿ ಸಿಡಿತ ಬಾನಂಗಳದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸಿ ಎಲ್ಲರ ಗಮನ ಸೆಳೆದವು.
ಬುಧವಾರ ಬೆಳಿಗ್ಗೆ ಪೂಜೆಯ ನಂತರ ಭಕ್ತರಿಗೆ ಅಜ್ಜಯ್ಯನ ಫಳಾರ ಹಂಚುವ ಮೂಲಕ ಜಾತ್ರೆಗೆ ತೆರೆ ಬೀಳಲಿದೆ.