ಮೀಸಲಾತಿ ಹೆಚ್ಚಿಸುವಂತೆ ಎಸ್ಸಿ – ಎಸ್ಟಿ ಸಮಾಜಗಳಿಂದ ಒತ್ತಾಯ

ವಾಲ್ಮೀಕಿ ಪೀಠದ ಜಗದ್ಗುರುಗಳ ಧರಣಿ ಸತ್ಯಾಗ್ರಹ ಬೆಂಬಲಿಸಿ ಹರಿಹರದಲ್ಲಿ ಬೃಹತ್ ಪ್ರತಿಭಟನೆ

ಹರಿಹರ, ಮಾ. 8- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮೀಸಲಾತಿ ಹೆಚ್ಚಿಸುವಂತೆ ಹಾಗೂ ಸಮುದಾಯದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಎಸ್ಸಿ-ಎಸ್ಟಿ ಸಮಾಜಗಳ  ವತಿಯಿಂದ ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. 

ನೀರಾವರಿ ಇಲಾಖೆಯ ಶ್ರೀ ಗಣೇಶ ದೇವಸ್ಥಾನ ದಿಂದ ಆರಂಭವಾದ ಮೆರವಣಿಗೆಯು  ಮಹಾತ್ಮ ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ, ಸರ್ಕಾರದ ವಿರುದ್ಧ ಘೋಷಣೆ  ಹಾಕಲಾಯಿತು. ರಸ್ತೆಯ ಮಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಪ್ರತಿಕೃತಿ ದಹನ ಮಾಡುವುದಕ್ಕೆ ಮುಂದಾದಾಗ ಪೊಲೀಸ್ ಸಿಬ್ಬಂದಿಗಳು ತಡೆದು ಶಾಂತಿಯುತ ಪ್ರತಿಭಟನೆ ಮಾಡುವಂತೆ ತಿಳಿಸಿದರು. ನಂತರದಲ್ಲಿ ತಹಶೀಲ್ದಾರ್ ಶಶಿಧರ್ ಅವರಿಗೆ ಮನವಿ ಸಲ್ಲಿಸಲಾಯಿತು.

ವಾಲ್ಮೀಕಿ ಗುರು ಪೀಠದ ಜಗದ್ಗುರು ಶ್ರೀ ಪ್ರಸನ್ನಾನಂದ ಪುರಿ ಮಹಾಸ್ವಾಮೀಜಿ ಬೆಂಗಳೂರಿನಲ್ಲಿ ಕಳೆದ 27 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರ  ಇದುವರೆಗೂ ಸ್ಪಂದಿಸಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಪ್ರಗತಿಪರ ಚಿಂತಕ  ಪ್ರೊ. ಎ .ಬಿ. ರಾಮಚಂದ್ರಪ್ಪ ಅವರು, ಶೋಷಿತ ಸಮಾಜದ ಬೆಳವಣಿಗೆಗೆ ಸರ್ಕಾರ ಸರಿಯಾಗಿ ಸ್ಪಂದನೆ ನೀಡದೇ ಇದ್ದಾಗ ಹೋರಾಟದ ಮೂಲಕ ನಮ್ಮ ಹಕ್ಕುಗಳನ್ನು ಪಡೆಯಬೇಕಾಗುತ್ತದೆ ಎಂದರು.

ವಾಲ್ಮೀಕಿ ಸಮಾಜದ ಹರಿಹರ ಘಟಕದ ಅಧ್ಯಕ್ಷ ಕೆ.ಬಿ. ಮಂಜುನಾಥ್ ಮಾತನಾಡಿದರು. ಡಿಎಸ್‌ಎಸ್ ಜಿಲ್ಲಾಧ್ಯಕ್ಷ ಹೆಗ್ಗೆರೆ ರಂಗಪ್ಪ, ತಾ ಸಂಚಾಲಕ ಪಿ.ಜೆ. ಮಹಾಂತೇಶ್, ಬಿಎಸ್ಪಿಯ ಹನುಮಂತಪ್ಪ, ಕುರುಬ ಸಮಾಜದ ಮುಖಂಡ ಸಿ.ಎನ್. ಹುಲುಗೇಶ್, ಡಿಸಿಸಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಜಿಗಳಿ ಆನಂದಪ್ಪ, ಕುಂಬಳೂರು ವಾಸು, ಭೋವಿ ಕುಮಾರ್, ಯಲವಟ್ಟಿ ಕೊಟ್ರೇಶ್ ನಾಯ್ಕ್, ಪಾರ್ವತಿ  ಮಾತನಾಡಿದರು.

ವಾಲ್ಮೀಕಿ ನಾಯಕ ಸಮಾಜದ ಹರಿಹರ ತಾ. ಗ್ರಾ. ಅಧ್ಯಕ್ಷ ಜಿಗಳಿಯ ಕೆ.ಆರ್. ರಂಗಪ್ಪ ಮತ್ತು ಡಿಎಸ್‌ಎಸ್ ಮುಖಂಡ ಸಂತೋಷ್ ನೋಟಗಾರ್ ಅವರು ಮನವಿ ಓದಿ, ತಹಶೀಲ್ದಾರ್ ಅವರಿಗೆ ಅರ್ಪಿಸಿದರು. 

ರಾಜನಹಳ್ಳಿ ಮಠದ ಆಡಳಿತಾಧಿಕಾರಿ ಟಿ. ಓಬಳಪ್ಪ, ತಾ.ಪಂ. ಮಾಜಿ ಅಧ್ಯಕ್ಷ ಆದಾಪುರ ವೀರಭದ್ರಪ್ಪ, ನಗರಸಭೆ ಸದಸ್ಯ ದಿನೇಶ್ ಬಾಬು, ಮಾರುತಿ ಬೇಡರ್, ಪುರಸಭೆ ಸದಸ್ಯ ಭೋವಿ ಶಿವು, ಪತ್ರಕರ್ತ ಜಿಗಳಿ ಪ್ರಕಾಶ್, ಆಟೋ ರಾಜು, ಮಕರಿ ಪಾಲಾಕ್ಷಪ್ಪ, ಬಸವರಾಜ್, ಹನುಮಂತಪ್ಪ, ರಮೇಶ್ ನಾಯ್ಕ್, ವೆಂಕಟೇಶ್, ಧನರಾಜ್, ಬಾವಿಕಟ್ಟಿ ಕರಿಬಸಪ್ಪ, ಜಿಗಳಿಯ ಬೆಣ್ಣೇರ ನಂದ್ಯಪ್ಪ, ಕೆ.ಜಿ. ಬಸವರಾಜ್, ರಾಜೇಂದ್ರ, ಕರಿಬಸಪ್ಪ, ಲೋಕೇಶ್, ಟಿ.ಎಂ. ಗದಿಗೆಪ್ಪ ನಾಯ್ಕ್, ರಾಜನಹಳ್ಳಿ ಭೀಮಣ್ಣ, ಸಿದ್ದೇಶ್ ನಾಯಕ, ಬೇವಿನಹಳ್ಳಿ ಆಟೋ ಬಸವರಾಜ್, ಕೊಕ್ಕನೂರಿನ ಹೆಚ್. ನಾಗರಾಜ್, ಮಾರುತಿ ದಾಸರ್, ವಿಶ್ವ, ನಿಟ್ಟೂರಿನ  ಅಜೇಯ್, ಕೆ.ಬೇವಿನಹಳ್ಳಿ ನಾಗೇಂದ್ರಪ್ಪ ಮತ್ತಿತರರು ಹಾಜರಿದ್ದರು.

ಸಿಪಿಐ ಸತೀಶ್ ಕುಮಾರ್ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದರು.

error: Content is protected !!