ನೃತ್ಯಪಟು ಮಾಧವಿ ಅವರ ಪರಿಕಲ್ಪನೆ ಅದ್ಭುತ

ದಾವಣಗೆರೆ, ಮಾ. 8- ಭರತ ನಾಟ್ಯ ಕಲೆಯನ್ನು ಸಾಮಾನ್ಯರಿಗೆ ಎಟುಕುವ  ಕಲೆಯನ್ನಾಗಿ ಕಲಿಸುತ್ತಿರುವ ಮಾಧವಿ ಡಿ.ಕೆ. ಅವರ ಪರಿಕಲ್ಪನೆ ಅದ್ಭುತವಾದದ್ದು. 

ಈ ಕಲೆ ದಾವಣಗೆರೆಯ ಕಲಾಸಕ್ತರಿಗೆ ಲಭಿಸುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ದಿನೇಶ್ ಕೆ. ಶೆಟ್ಟಿ ತಿಳಿಸಿದರು.

ನಗರದ ರಿಂಗ್ ರಸ್ತೆಯ ಶ್ರೀ ಶಾರದಾ ಮಂದಿರದಲ್ಲಿ ನಡೆದ ನಮನ ಅಕಾಡೆಮಿಯ ಶಿವಸ್ಮರಣೆ ನೃತ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ.ಟಿ. ಅಚ್ಯುತ್, ಹಿರಿಯ ವೈದ್ಯ ಡಾ. ಎ.ಎಂ. ಶಿವಕುಮಾರ್ ಮಾತನಾಡಿದರು.

ಮಾಧವಿ ಅವರ ಶಿವಾಷ್ಟಕಮ್ ನೃತ್ಯ ಪ್ರದರ್ಶನದ ವೇಳೆಗೆ ತರಳಬಾಳು ಬಡಾವಣೆ ಸ್ವಸ್ತಿ ಆರ್ಟ್ ಗ್ಯಾಲರಿ ಪ್ರೊಪ್ರೈಟರ್ ರವಿ ಹುದ್ದಾರ್ ರಚಿಸಿದ ಶಿವನ ಚಿತ್ರ ಎಲ್ಲರ ಮೆಚ್ಚುಗೆ ಗಳಿಸಿತು.

ನೃತ್ಯ ಜಾಗರಣೆ ಕಾರ್ಯಕ್ರಮ ಲಿಂಗೇಶ್ವರ ದೇವ ಸ್ಥಾನ, ಶ್ರೀ ಕೂಡಲಿ ಶಂಕರ ಮಠ, ವಿದ್ಯಾನಗರದ ಈಶ್ವರ ಪಾರ್ವತಿ ದೇವಸ್ಥಾನಗಳಲ್ಲಿ ಜರುಗಿತು. ಅಕಾಡೆಮಿಯ ಗುರು ಹಾಗೂ 8 ಜನ ಶಿಷ್ಯರು ಸುಮಾರು 40 ನಿಮಿಷ ಗಳವರೆಗೆ ಪ್ರದರ್ಶನ ನೀಡಿದರು. ನಮನ ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಅಕಾಡೆಮಿಯ ನಿರ್ದೇಶಕ ಪಿ.ಸಿ. ರಾಮನಾಥ್, ಅನಿಲ್ ಬಾರೆಂಗಳ್ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!