ಮಲೇಬೆನ್ನೂರು, ಮಾ.6- ಸುಕ್ಷೇತ್ರ ಉಕ್ಕಡಗಾತ್ರಿಯಲ್ಲಿ ಪವಾಡ ಪುರುಷ ಶ್ರೀ ಗುರು ಕರಿಬಸವೇಶ್ವರ ಅಜ್ಜಯ್ಯನ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಬಯಲು ಜಂಗೀ ಕುಸ್ತಿಗಳು ಗಮನ ಸೆಳೆದವು.
ಶನಿವಾರ ಮತ್ತು ಭಾನುವಾರ ನಡೆದ ಕುಸ್ತಿಯಲ್ಲಿ ಭಾಗವಹಿಸಿದ್ದ ಬೆಳಗಾವಿ, ವಿಜಾಪುರ, ಶಿವಮೊಗ್ಗ ಮತ್ತು ದಾವಣಗೆರೆ, ಹಾವೇರಿ ಜಿಲ್ಲೆಗಳ 150 ಕ್ಕೂ ಹೆಚ್ಚು ಪೈಲ್ವಾನರು ಗೆಲುವಿಗಾಗಿ ನಡೆಸಿದ ಸೆಣಸಾಟದಲ್ಲಿ ಅಂತಿಮವಾಗಿ ಭದ್ರಾವತಿಯ ಕಿರಣ್ ಪ್ರಥಮ ಬಹುಮಾನಕ್ಕೆ ಭಾಜನರಾದರು. ಹರಿಹರದ ರಾಜು ದ್ವಿತೀಯ ಬಹುಮಾನ ಪಡೆದರು. ಶಾಸಕ ಎಸ್.ರಾಮಪ್ಪ ಅವರ ಪುತ್ರ ಯತಿರಾಜ್ ಪೈಲ್ವಾನ್ ಕೂಡಾ ಕುಸ್ತಿಯಲ್ಲಿ ಭಾಗವಹಿಸಿ, ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರು. ಗದ್ದುಗೆ ಟ್ರಸ್ಟ್ ಕಮಿಟಿ ಕಾರ್ಯದರ್ಶಿ ಸುರೇಶ್ ಅವರು ವಿಜೇತರಿಗೆ ನಗದು ಬಹುಮಾನ ನೀಡಿ, ಸನ್ಮಾನಿಸಿ, ಅಭಿನಂದಿಸಿದರು.