ಮಲೇಬೆನ್ನೂರು, ಮಾ.4- ವಾಲ್ಮೀಕಿ ಶ್ರೀಗಳ ಧರಣಿ ಸತ್ಯಾಗ್ರಹ ಬೆಂಬಲಿಸಿ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ (ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ) ಅನುಷ್ಠಾನಕ್ಕೆ ಒತ್ತಾಯಿಸಿ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಬೆಂಗಳೂರಿನಲ್ಲಿ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಬೆಂಬಲಿಸಿ ಹರಿಹರದಲ್ಲಿ ಇದೇ ದಿನಾಂಕ 8ರ ಮಂಗಳವಾರ ಬೆಳಗ್ಗೆ 11 ಗಂಟೆಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ತಾ. ಗ್ರಾ. ನಾಯಕ ಸಮಾಜದ ಅಧ್ಯಕ್ಷ ಜಿಗಳಿಯ ಕೆ.ಆರ್ ರಂಗಪ್ಪ ತಿಳಿಸಿದ್ದಾರೆ.
ಶ್ರೀಗಳು ಕಳೆದ 22 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದರೂ ಸರ್ಕಾರದಿಂದ ಯಾವುದೇ ಸ್ಪಂದನೆ ಸಿಗದ ಕಾರಣ, ವಾಲ್ಮೀಕಿ ಗುರುಪೀಠದಲ್ಲಿ ಬುಧವಾರ ಕರೆದಿದ್ದ ಸಮಾಜದ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧರಿಸಲಾಯಿತು.
ಎಸ್ಸಿ-ಎಸ್ಟಿ ಜನ ಸೇರಿ ಹರಿಹರ ನಗರದಲ್ಲಿ ಮಾರ್ಚ್ 8 ರಂದು ಪ್ರತಿಭಟನೆ ನಡೆಸಿ, ನಂತರ ಒಂದು ದಿನ ಬೆಂಗಳೂರಿಗೆ ತೆರಳಿ ಶ್ರೀಗಳಿಗೆ ಬೆಂಬಲ ನೀಡಲು ಸಭೆ ತೀರ್ಮಾನಿಸಿದೆ ಎಂದು ಸಮಾಜದ ಹರಿಹರ ನಗರ ಘಟಕದ ಅಧ್ಯಕ್ಷ ಕೆ. ಬಿ. ಮಂಜುನಾಥ್ ಹೇಳಿದರು.
ಸಮಾಜದ ಮುಖಂಡರಾದ ಜಿಗಳಿಯ ಜಿ. ಆನಂದಪ್ಪ, ಹೆಚ್.ಟಿ.ರಂಗನಾಥ್, ಶಿಕ್ಷಕ ಜಿ.ಆರ್. ನಾಗರಾಜ್, ದೇವರಬೆಳಕೆರೆ ಮಹೇಶ್ವರಪ್ಪ, ಕೊಕ್ಕನೂರು ಸೋಮಶೇಖರ್, ಹರಿಹರದ ಹಂಚಿನಮನೆ ದೇವೇಂದ್ರಪ್ಪ, ಮಕರಿ ಪಾಲಾಕ್ಷಪ್ಪ, ಪಾರ್ವತಿ, ಬಾವಿಕಟ್ಟಿ ಕರಿಬಸಪ್ಪ, ರಾಜು, ಮೆಣಸಿನಹಾಳ್ ಗಂಗಾಧರ್, ಭೀಮಣ್ಣ, ಕೆ. ಬೇವಿನಹಳ್ಳಿಯ ನಾಗೇಂದ್ರಪ್ಪ, ರಾಜನಹಳ್ಳಿಯ ಭೀಮಣ್ಣ, ಶಿಕ್ಷಕ ವಾಸನದ ಮಹಾಂತೇಶ್, ಶಿಕ್ಷಕ ಭಾನುವಳ್ಳಿ ಮಾರುತಿ, ಭಾನುವಳ್ಳಿಯ ಟಿ.ಆರ್.ಮಹೇಶ್ವರಪ್ಪ, ಧೂಳೆಹೊಳೆ ಅಣ್ಣಪ್ಪ, ರಾಮತೀರ್ಥ ನಾಗರಾಜ್, ಕೆ.ಎನ್. ಹಳ್ಳಿ ಲೋಕೇಶ್, ಪರಶುರಾಮ್, ಜಿಗಳಿಯ ಬೆಣ್ಣೇರ ನಂದ್ಯಪ್ಪ, ಪತ್ರಕರ್ತ ಪ್ರಕಾಶ್ ಸೇರಿದಂತೆ ಇನ್ನೂ ಅನೇಕರು ಸಭೆಯಲ್ಲಿದ್ದರು.