ದಾವಣಗೆರೆ, ಮಾ. 6- ನಗ ರದ 31ನೇ ವಾರ್ಡಿನ ಎಸ್.ಓ.ಜಿ. ಕಾಲೋನಿಯಲ್ಲಿ ಇದೇ ದಿನಾಂಕ 13ರ ಭಾನುವಾರದಿಂದ 16ರ ಬುಧವಾರದವರೆಗೆ ನಡೆಯಲಿರುವ ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿಯ 5ನೇ ಬಾರಿಯ ಜಾತ್ರಾ ಮಹೋತ್ಸವದ ಹಂದರ ಕಂಬ ಪೂಜೆ ನೆರವೇರಿಸಲಾಯಿತು.
ದೇವಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆ ಗಳನ್ನು ನೆರವೇರಿಸಲಾ ಯಿತು. ಹಂದರ ಪೂಜೆಯ ನಂತರ ಕಂಬ ನಿಲ್ಲಿಸುವ ಗುಣಿಯಲ್ಲಿ ಹಾಲು-ತುಪ್ಪ, ಮುತ್ತು-ಹವಳ, ಪಂಚಲೋಹ ಮತ್ತು ದಕ್ಷಿಣೆ ಹಾಕಿದ ಬಳಿಕ ಹಂದರ ಕಂಬವನ್ನು ನಿಲ್ಲಿಸಲಾಯಿತು.
13ರ ಭಾನುವಾರ ಬೆಳಿಗ್ಗೆ ದೇವಿಗೆ ಪಂಚಾಮೃತ ಅಭಿಷೇಕ, ಕಂಕಣಧಾರಣೆ ಮಾಡಲಾಗುವುದು. ಅಲ್ಲದೇ ಸಾರು ಹಾಕಲಾಗುವುದು. 15ರ ಮಂಗಳವಾರ ದೇವಿಗೆ ವಿಶೇಷ ಪೂಜೆ ನಡೆಯಲಿದೆ. 16ರ ಬುಧವಾರ ಶ್ರೀ ದುರ್ಗಾಂಬಿಕಾ ದೇವಿಯ ಮಹಾಪೂಜೆ ನೆರವೇರಿಸಲಾಗುವುದು. ಅಂದು ರಾತ್ರಿ ಭದ್ರಾವತಿ ತೃಪ್ತಿ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. 17 ರ ಗುರುವಾರ ಸಂಜೆ 6.30ಕ್ಕೆ ಕಿಶೋರ್ ಜಾದೂಗಾರ್ ತುಮಕೂರು ಇವರ ತಂಡದಿಂದ ಮ್ಯಾಜಿಕ್ ಶೋ ಕಾರ್ಯಕ್ರಮ. 18 ರ ಶುಕ್ರವಾರ ನ್ಯೂ ರಂಜಿತಾ ಡ್ಯಾನ್ಸ್ ಗ್ರೂಪ್ ಇವರಿಂದ ನೃತ್ಯ ಕಾರ್ಯಕ್ರಮ, 19 ರ ಶನಿವಾರ ಭುವನೇಶ್ವರಿ ಕಲಾ ತಂಡ ದಾವಣಗೆರೆ ಇವರಿಂದ `ಕಿವುಡ ಮಾಡಿದ ಕಿತಾಪತಿ’ ಹಾಸ್ಯ ಭರಿತ ನಾಟಕ ಪ್ರದರ್ಶನ, 20 ರ ಭಾನು ವಾರ ಜಾತ್ರಾ ಮಹೋತ್ಸವದ ಸಮಾರೋಪ ಸಮಾರಂಭ ಹಾಗೂ ಶಿಲ್ಪ ಮೇಲೋಡೀಸ್, ತುಮಕೂರು ಇವರಿಂದ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಟಿ. ಬಸವರಾಜ್, ಹೆಚ್. ತಿಮ್ಮಣ್ಣ, ಕೆ.ವಿ. ಚಂದ್ರಶೇಖರ್, ಕಲ್ಲೇಶಪ್ಪ, ದುರುಗೋಜಪ್ಪ, ಅಂಜಿನಪ್ಪ ಮಾಳಗಿ, ಬಾತಿ ಶಿವಕುಮಾರ್, ಆರ್. ಅಂಜಿನಿ, ಶಿವು, ಮಾರುತಿ, ಪುಟ್ಟಪ್ಪ, ಜಯಪ್ಪ, ನಾಗರಾಜ್, ತರಗಾರ್ ಜಯಣ್ಣ, ಪೂಜಾರ್ ಮಹಾಂತೇಶ್, ಸಂತೋಷ್ ಆಚಾರ್ ಸಿ ಬ್ಲಾಕ್, ಪ್ರಕಾಶ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.