ನಗರದ ವಿವಿಧ ದೇಗುಲಗಳಲ್ಲಿ ಗಂಗಾಜಲ ಪ್ರೋಕ್ಷಣೆ

ದಾವಣಗೆರೆ, ಮಾ.2- ಹರಪನಹಳ್ಳಿ ತಾಲ್ಲೂಕಿನ ಕಂಚಿಕೆರೆ ಶ್ರೀ ಕ್ಷೇತ್ರ ಬಿದ್ದ ಹನುಮಪ್ಪನ ಮಟ್ಟಿ ಶ್ರೀ ವೀರಾಂಜನೇಯ ಮಹಾಸ್ವಾಮಿ ಟ್ರಸ್ಟ್ ನ ಶ್ರೀ ಬಸವರಾಜ ಗುರೂಜಿ ಅವರು ಮಹಾಮಾರಿ ಕೊರೊನಾ ತೊಲಗಲೆಂದು ಮತ್ತು ಲೋಕ ಕಲ್ಯಾಣಾರ್ಥವಾಗಿ ಹಿಮಾಲಯದಲ್ಲಿ 108 ದಿನಗಳ ಕಾಲ ತಪೋನುಷ್ಠಾನಗೈದು 9 ನದಿಗಳ ಜಲವನ್ನು ತಂದು ಶಿವರಾತ್ರಿ ದಿನದಂದು ನಗರದ ವಿವಿಧ ದೇವಾಲಯಗಳಿಗೆ ವಿತರಣೆ ಮಾಡಿದ್ದಾರೆ.

ದ್ವಾದಶ ಜ್ಯೋತಿರ್ಲಿಂಗಗಳಿಗೆ ಮತ್ತು ನವ ದೇವತೆಗಳಿಗೆ ಶ್ರೀ ಬಸವರಾಜ ಗುರೂಜಿಯವರು ಪವಿತ್ರ ಗಂಗಾಜಲ ಪ್ರೋಕ್ಷಣೆಯೊಂದಿಗೆ ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಶಿವರಾತ್ರಿ ದಿನದಂದು ಬೆಳಿಗ್ಗೆ ಶಾಮನೂರು ಕರಿಯಮ್ಮ, ವಿದ್ಯಾನಗರದ ಪಾರ್ವತಿ ದೇವಿ, ಜೆ.ಹೆಚ್. ಪಟೇಲ್ ಬಡಾವಣೆಯ ಹೇಮರೆಡ್ಡಿ ಮಲ್ಲಮ್ಮ, ಕುಂದುವಾಡದ ಕೆೇೆರೆ ಚೌಡೇಶ್ವರಿ, ದೇವರಾಜ ಅರಸು ಬಡಾವಣೆಯ ಅನ್ನಪೂರ್ಣೆ ಶ್ವರಿ, ರಿಂಗ್ ರಸ್ತೆಯ ಅನ್ನಪೂರ್ಣೇಶ್ವರಿ, ಯರಗುಂಟೆ ರಸ್ತೆಯ ಬನ್ನಿಮಹಾಂಕಾಳಿ, ವಿಜಯನಗರ ಬಡಾವಣೆಯ ಚೌಡೇಶ್ವರಿ ದೇವಿ, ರುದ್ರಭೂಮಿ ಚೌಡಮ್ಮ, ದುರ್ಗಾಂಬಿಕಾ ದೇವಿ, ನಿಟುವಳ್ಳಿ ಬನಶಂಕರಿ ದೇವಿ, ಕಾಳಿಕಾದೇವಿ, ಬೇತೂರು ರಸ್ತೆಯ ಮಾರಿ ಮುತ್ತು ದೇವಿ, ಭಾರತ ಕಾಲೋನಿಯ ದೊಡ್ಡಮ್ಮದೇವಿ, ನಿಟುವಳ್ಳಿ ದುರ್ಗಾಂಬಿಕ ದೇವಿ, ಭಗೀರಥ ಸರ್ಕಲ್ ಕರಿಯಮ್ಮ ದೇವಿ, ರಾಜೇಂದ್ರ ಬಡಾವಣೆಯ ಬನಶಂಕರಿ ದೇವಿ ದೇವಿ ದೇವಸ್ಥಾನಗಳಿಗೆ ತೆರಳಿ ಗಂಗಾಜಲ ಪ್ರೋಕ್ಷಣೆ ಮಾಡಲಾಯಿತು.

ರಾತ್ರಿ ನಗರದ ಈಶ್ವರ, ವರಾಹ ಭೀಮ ಶಂಕರಲಿಂಗ, ವಿದ್ಯಾನಗರದ ಈಶ್ವರ, ಪಾರ್ವತಿ ಗಣಪತಿ, ಶಾಮನೂರು ಲಿಂಗೇಶ್ವರ, ಪಾತಾಳಲಿಂ ಗೇಶ್ವರ, ಮೌನೇಶ್ವರ, ಮಲ್ಲಿಕಾರ್ಜುನ ಮತ್ತಿತರ ದೇವಸ್ಥಾನಗಳಲ್ಲಿ ಗಂಗಾಜಲ ವಿತರಣೆ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. 

error: Content is protected !!