ಬಜೆಟ್‍ನಲ್ಲಿ ಉದ್ಯೋಗ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಲಿ

ಬಜೆಟ್‍ನಲ್ಲಿ ಉದ್ಯೋಗ ಮತ್ತು ಕೃಷಿಗೆ ಹೆಚ್ಚಿನ ಒತ್ತು ನೀಡಲಿ - Janathavaniಹರಪನಹಳ್ಳಿ, ಮಾ.2- ಪ್ರಸಕ್ತ ಸಾಲಿನ 2022-23ನೇ ಆರ್ಥಿಕ ಬಜೆಟ್‍ನಲ್ಲಿ ರಾಜ್ಯ ಸರ್ಕಾರ ಪ್ರತ್ಯೇಕ ಉದ್ಯೋಗ ಮತ್ತು ಕೃಷಿ ಬಜೆಟ್ ಮಂಡಿಸಬೇಕೆಂದು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯ ಶಶಿಧರ್ ಪೂಜಾರ್ ಅವರು ಒತ್ತಾಯಿಸಿದ್ದಾರೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಜ್ಯ ಸರ್ಕಾರ ಮಂಡಿಸಲಿರುವ ಆರ್ಥಿಕ ಬಜೆಟ್‍ನಲ್ಲಿ ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯಿಂದಾಗಿ ಉದ್ಯೋಗ ಕಳೆದುಕೊಂಡು ಕಂಗಾಲಾಗಿರುವ ಯುವ ಜನಾಂಗದ ಭವಿಷ್ಯ ರೂಪಿಸುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಉದ್ಯೋಗ ಬಜೆಟ್ ಮಂಡಿಸಬೇಕು ಮತ್ತು ಪ್ರಕೃತಿ ವಿಕೋಪದಿಂದಾಗಿ ಬೆಳೆಹಾನಿ, ಆಸ್ತಿ – ಪಾಸ್ತಿ ಕಳೆದುಕೊಂಡ ರೈತಾಪಿ ವರ್ಗಕ್ಕೆ ನೆರವಾಗುವ ನಿಟ್ಟಿನಲ್ಲಿ ಪ್ರತ್ಯೇಕವಾಗಿ ಕೃಷಿ ಬಜೆಟ್ ಮಂಡಿಸಬೇಕು. 

ಅಲ್ಲದೇ ಪಕ್ಕದ ರಾಜ್ಯ ಆಂಧ್ರದ ಮಾದರಿಯ ರೀತಿಯಲ್ಲಿ ರಾಜ್ಯದಲ್ಲಿಯೂ ಸಹ ಸರ್ಕಾರ ನಿರುದ್ಯೋಗ ಸಮಸ್ಯೆ ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಉದ್ಯೋಗಗಳನ್ನು ಸೃಷ್ಠಿ ಮಾಡುವ ಹಾಗೆ ಬಜೆಟ್ ಮಂಡಿಸಬೇಕು ಎಂದೂ ಸಹ ಶಶಿಧರ್ ಆಗ್ರಹಿಸಿದ್ದಾರೆ.

error: Content is protected !!