ಶಿವರಾತ್ರಿ : ಜಿಗಳಿ ಕ್ಯಾಂಪ್‌ನಲ್ಲಿ ಅನ್ನ ಸಂತರ್ಪಣೆ

ಮಲೇಬೆನ್ನೂರು, ಮಾ. 1 – ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮಹಾಶಿವರಾತ್ರಿ ಹಬ್ಬವನ್ನು ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು. 

ಪಟ್ಟಣದ ಶ್ರೀ ಕಲ್ಲೇಶ್ವರ ದೇವಸ್ಥಾನ, ಶ್ರೀ ಬಸವೇಶ್ವರ ದೇವಸ್ಥಾನ, ಶ್ರೀ ಬೀರಲಿಂಗೇಶ್ವರ ದೇವಸ್ಥಾನ ಮತ್ತು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ  ವಿಶೇಷ ಪೂಜೆ, ಅಭಿಷೇಕದ ನಂತರ ಪ್ರಸಾದ ವಿತರಣೆ ಮಾಡಲಾಯಿತು.

ಕಲ್ಲೇಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗಿತ್ತು ಜನರು ಶಿವಲಿಂಗದ ದರ್ಶನ ಪಡೆದರು.

ಕೊಮಾರನಹಳ್ಳಿಯ ಹೆಳವನಕಟ್ಟೆ ಶ್ರೀ ಲಕ್ಷ್ಮಿರಂಗನಾಥ ಸ್ವಾಮಿ ದೇವಸ್ಥಾನದಲ್ಲೂ ವಿಶೇಷ ಪೂಜೆ, ಅಭಿಷೇಕದ ನಂತರ ಭಕ್ತರಿಗೆ ಪ್ರಸಾದ ನೀಡಲಾಯಿತು.

ವಿನಾಯಕ ನಗರ ಕ್ಯಾಂಪ್‌ನಲ್ಲಿ (ಜಿಗಳಿ ಕ್ಯಾಂಪ್) ರುವ ಶ್ರೀ ಗುಂಡಪ್ಪನ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ವಿಶೇಷ ಪೂಜೆ, ಅಭಿಷೇಕ ಮತ್ತು ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

 ಕ್ಯಾಂಪಿನ ಸಿ.ಹೆಚ್‌. ಪ್ರಸಾದ್‌ ಮತ್ತು ಕುಂದುವಾಡ ಕ್ಯಾಂಪಿನ ಡಾ.ಮುರುಳಿಕೃಷ್ಣ ಹಾಗೂ ರಾಜು ಕುಟುಂಬದವರು ದಾಸೋಹ ದಾನಿಗಳಾಗಿದ್ದರು.

ಎಂ. ನಾಗೇಶ್ವರರಾವ್‌, ಎನ್‌. ಪ್ರಸಾದ್‌ರಾವ್, ಕೊತ್ತಪಲ್ಲಿ ಶ್ರೀನಿವಾಸ್‌ ಭಾಸ್ಕರ್‌, ಗ್ರಾ.ಪಂ. ಸದಸ್ಯ ಬಿ. ಶ್ರೀನಿವಾಸ್‌ ಮಕ್ಕಳ ತಜ್ಞ ಡಾ. ಶ್ರೀನಿವಾಸ್‌, ಎಂ. ನಾನಿ, ಪತಾಗಣಿ ಹನುಮಂತಪ್ಪ, ಜಿಗಳಿಯ ಜಿ. ಆನಂದಪ್ಪ, ಬಿ.ಎಂ.ದೇವೇಂದ್ರಪ್ಪ, ಕುಂಬ ಳೂರಿನ ಪರಶುರಾಮಪ್ಪ, ಎಂ. ವಾಸು ದೇವಮೂರ್ತಿ, ಕೆ. ಗಿರೀಶ್, ಕಣ್ಣಾಳ್‌ ಬಸಪ್ಪ ಸೇರಿದಂತೆ ವಿನಾಯಕನಗರ ಕ್ಯಾಂಪ್‌, ಜಿಗಳಿ, ಕುಂಬಳೂರು, ಭಾನುವಳ್ಳಿ, ನಂದಿ ತಾವರೆ ಗ್ರಾಮಗಳ ಭಕ್ತರು ಭಾಗವಹಿಸಿದ್ದರು.

error: Content is protected !!