ದಾವಣಗೆರೆ,ಮಾ.1- ನಗರದ ಹೊರವಲಯದ ತೋಳಹುಣಸೆ ಶಿವಗಂಗೋತ್ರಿಯ ಬಾಪೂಜಿ ಶಿಕ್ಷಣ ಸಂಸ್ಥೆಯ ಶ್ರೀಮತಿ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮತ್ತು ಕಾಲೇಜ್ನ 25 ನೇ ವರ್ಷದ ವಾರ್ಷಿಕೋತ್ಸವ, ನವಲಿ ಹಿರೇಮಠ ಉಘಾಮಠ ಹಂಪಸಾಗರ ಹಗರಿಬೊಮ್ಮನಹಳ್ಳಿಯ ಶ್ರೀ ಅಭಿನವ ಶಿವಲಿಂಗ ರುದ್ರಮುನಿ ಶಿವಾಚಾರ್ಯ ಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗಿತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ಕಾರ್ಯಕರ್ತೆ, ಭಾರತೀಯ ಮಂಗಳ ಮುಖಿಯರ ಕ್ಷೇಮಾಭಿವೃದ್ಧಿ ಕಾರ್ಯಕರ್ತೆ ಡಾ. ಅಕೈ ಪದ್ಮಶಾಲಿ ಅವರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಿ ಮಾತನಾಡಿ, ವಿದ್ಯಾರ್ಥಿಗಳು ಸರಿಯಾಗಿ ಅಧ್ಯಯನ ಮಾಡಿ, ಸಮಾಜದ ಪ್ರಗತಿಗೆ ಸಮಾನತೆಯಿಂದ, ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ವರ್ಗ, ಲಿಂಗ, ಜಾತಿಯಲ್ಲಿ ತಾರತಮ್ಯವಿರ ಬಾರದು ಎಂದು ಶರಣರ ವಚನಗಳನ್ನು ಉದಾಹರಿಸುತ್ತಾ, ಎಲ್ಲೇ ಅಸಮಾನತೆಯಿರಲಿ ಧೈರ್ಯವಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿ ಎಂದು ಅವರು ನುಡಿದರು.
ಈ ಕಾರ್ಯಕ್ರಮಕ್ಕೆ ಮುಖ್ಯ ಆಕರ್ಷಣೆಯಾಗಿ ಆಗಮಿಸಿದ್ದ ಬಾಲಿವುಡ್ ರಿಯಾಲಿಟಿ ನೃತ್ಯ ಕಲಾವಿದ ಫೈಜಾನ್ ಮಲಿಕ್ ಫೈಜಾನ್ ಮಲಿಕ್. ಅವರ ನೃತ್ಯ ಪ್ರೇಕ್ಷಕರ ಮನತಣಿಸಿತು. ಶಾಲೆಯ ನೃತ್ಯ ಶಿಕ್ಷಕ ಫೈಜಾನ್ ರೂಪಕ ಸಂಯೋಜನೆ ಮಾಡಿದ್ದರು.
ನಿರ್ದೇಶಕ ಮಂಜುನಾಥ ರಂಗರಾಜು, ಸಿ.ಬಿ.ಎಸ್.ಇ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಕಮಲ್ ಬಿ.ಎನ್, ಕನ್ನಡ ಉಪನ್ಯಾಸಕ ಶಂಕರ್.ಭ.ನೆಶ್ವಿ, ಪಿ.ಯು ಕಾಲೇಜು ಪ್ರಾಂಶುಪಾಲ ರಾಜೇಶ್ ಪ್ರಸಾದ್, ಕೇಂಬ್ರಿಜ್ ವಿಭಾಗದ ಪ್ರಾಂಶುಪಾಲ ಅರುಣ್ ಪ್ರಸಾದ್, ಸಿ.ಬಿ.ಎಸ್.ಇ ಶಾಲೆಯ ಉಪ ಪ್ರಾಂಶುಪಾಲ ಉಮಾಪತಿ. ಎಚ್.ಜಿ., ವಿದಾರ್ಥಿಗಳಾದ ಮಾನ್ಯ, ಶ್ರೇಯಾ, ಯಕ್ಷಿತ್ ಮತ್ತು ಸಿದ್ದಾರ್ಥ ಅವರು ಕಾರ್ಯಕ್ರಮದ ವಿವಿಧ ಸ್ಥರಗಳಲ್ಲಿ ಕಾರ್ಯ ನಿರ್ವಹಿಸಿದರು.