ಅರೆಮಲ್ಲಾಪುರದಲ್ಲಿ ರಾಮರಾಜ್ಯ ತರಲು ಹೋರಾಟ

ಅರೆಮಲ್ಲಾಪುರದಲ್ಲಿ ರಾಮರಾಜ್ಯ ತರಲು ಹೋರಾಟ - Janathavaniರಾಣೇಬೆನ್ನೂರು, ಫೆ.28- ನಡುರಾತ್ರಿಯಲ್ಲಿ ಮಹಿಳೆ ಒಬ್ಬಂಟಿಯಾಗಿ ರಸ್ತೆಯಲ್ಲಿ ಸಂಚರಿಸ ಬೇಕು. ಭ್ರಷ್ಟಾಚಾರ ರಹಿತ ರಾಮರಾಜ್ಯದ ಮೂಲಕ ಹಳ್ಳಿಗಳ ಉದ್ಧಾರ ಆಗಬೇಕು ಎಂದು ಮಹಾತ್ಮ ಗಾಂಧಿ ಕಂಡಿದ್ದ ಕನಸಿನಂತೆ ಅರೆಮಲ್ಲಾ ಪುರ ಗ್ರಾಮವನ್ನು ಮಾರ್ಪಾಡು ಮಾಡಲು  ಹೋ ರಾಟ ನಡೆಸಿದ್ದೇನೆ ಎಂದು ಗ್ರಾಪಂ ಸದಸ್ಯರಾದ ಶ್ರೀ ಪ್ರಣವಾನಂದರಾಮ ಸ್ವಾಮೀಜಿ ಹೇಳಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಅರೆಮಲ್ಲಾಪುರ ಗ್ರಾಮದಲ್ಲಿ ನಡೆ ಯುತ್ತಿರುವ ಆಡಳಿತ ವೈಖರಿ ಬಗ್ಗೆ ವಿವರಿಸಿದರು.

ಗ್ರಾಮ ಹಾಗೂ ಸುತ್ತಲಿನ ಪ್ರದೇಶದ ಅಂತರ್ಜಲ ಹೆಚ್ಚಿಸಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆ ನೀಗಿಸಲು ಇಲ್ಲಿನ ಹೊಸಕೆರೆ  ಅಭಿವೃದ್ಧಿಗಾಗಿ 77ಲಕ್ಷದ ಕಾಮಗಾರಿ ಕೈಗೊಳ್ಳಲಾಗಿತ್ತು. ಕೆರೆಗೆ ತಿಳಿ ಮಣ್ಣು ಹಾಕುವ, ಹೂಳು ತೆಗೆಯುವ  ಯಾವೊಂದು ಕೆಲಸವನ್ನು ಮಾಡದೇ ಸುಮಾರು 60 ಲಕ್ಷದಷ್ಟು ಹಣ ಖರ್ಚು ಹಾಕಲಾಗಿದೆ.

ಕೊಲೆಬೆದರಿಕೆ ವಿಲೇಕ್ಕೆ…

ಭ್ರಷ್ಟಾಚಾರದ ವಿರುದ್ದ ಹೋರಾಟ ನಡೆಸಿರುವ ನನ್ನನ್ನು ಎಂಟು ದಿನಗಳೊಳಗೆ ಕೊಲೆ ಮಾಡುತ್ತೇನೆ ಎಂದು ಗ್ರಾಪಂ ಸದಸ್ಯ ರಾಜು ಮರಿಯಪ್ಪ ಹಲವಾಗಲ ಅವರು ಗ್ರಾಮ ಸಭೆಯಲ್ಲಿಯೇ ಬೆದರಿಕೆ ಹಾಕಿದರೂ ಸಹ ಸಭೆಯಲ್ಲಿದ್ದ  ಅಧ್ಯಕ್ಷರಾಗಲೀ, ಪಿಡಿಒ ಆಗಲೀ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈ ಮೂವರ ಮೇಲು ಕಾನೂನು ಕ್ರಮ ಜರುಗಿ ಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಮಾಡಿದ್ದರು. ರಾಜು ಹಲವಾಗಲ ಅವರು ಖುದ್ದು ಹಾಜರಾಗಿ ಸ್ವಾಮೀಜಿ ದೂರು ಸತ್ಯವಲ್ಲ, ಇನ್ನು ಮುಂದೆ ನಾನು ಅವರ   ತಂಟೆಗೆ ಹೋಗುವುದಿಲ್ಲ  ಎಂಬ ಹೇಳಿಕೆ ಆಧರಿಸಿ ನಿಮ್ಮ ಅರ್ಜಿವಿಲೇಕ್ಕೆ ಹಾಕಲಾಗಿದೆ ಎನ್ನುವ ಪೊಲೀಸರ ಹಿಂಬರಹದ ಪ್ರತಿ, ಕೆರೆ ಫೋಟೋ, ಇನ್ನಿತರೆ ಮಾಹಿತಿಗಳ ದಾಖಲೆ ಗಳನ್ನು ಸ್ವಾಮೀಜಿ ಪತ್ರಕರ್ತರಿಗೆ ನೀಡಿದರು.

ಸುಮಾರು  ನರೇಗಾ ಯೋಜನೆಯನ್ವಯ  40 ಲಕ್ಷ ಹಣ ಬಂದಿದ್ದರೂ ಸಹ, ಇದುವರೆಗೂ ಯಾವ ಕಾಮಗಾರಿಯನ್ನೂ  ಪ್ರಾರಂಭಿ ಸಿರುವುದಿಲ್ಲ ಎಂದು ಆರೋಪಿ ಸಿರುವ ಪ್ರಣವಾನಂದರಾಮ ಶ್ರೀ ಅವರು, ಸರ್ಕಾರದ  ಹಣ ಜನತೆಯ ಹಣ, ನನಗೆ ಎಂತ ಹದೇ ಕಂಟಕ ಎದುರಾದರೂ  ಹಣ ದುರುಪಯೋ ಗವಾಗಲು ಅವಕಾಶ ಕೊಡುವುದಿಲ್ಲ. ಇದರಲ್ಲಿ ಪ್ರಭಾವಿತರು ಇದ್ದಾರೆ, ಅವರೆಲ್ಲರನ್ನೂ ಕೋರ್ಟಿಗೆ ತರುತ್ತೇನೆ ಎಂದು ಸ್ವಾಮೀಜಿ ಖಡಕ್ಕಾಗಿ ಹೇಳಿದರು.

ಇಲ್ಲಿ ನಡೆಯುತ್ತಿರುವ ಆಡಳಿತ ವೈಖರಿಯ ಬಗ್ಗೆ ದಾಖಲೆ ಸಮೇತ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಗಮನಕ್ಕೆ ತಂದು, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವವರೆಗೂ ಹೋರಾಟ ಮಾಡುತ್ತೇನೆ ಎಂದು ಹೇಳಿದ ಸ್ವಾಮೀಜಿ ಜೊತೆ ಹೋರಾಟ ಸಮಿತಿಯ ಅಧ್ಯಕ್ಷ ಸುರ್ವೆ ಹಾಗೂ ಗ್ರಾಪಂ ಉಪಾಧ್ಯಕ್ಷರ ಪತಿ ವಗ್ಗನವರ  ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

error: Content is protected !!