ಶಾಲೆಗಳನ್ನು ಸುಂದರಗೊಳಿಸಿದ ಹರಪನಹಳ್ಳಿ ಕನ್ನಡ ಪ್ರತಿಷ್ಠಾನ

ಹರಪನಹಳ್ಳಿ, ಫೆ.27- ಕನ್ನಡ ಮನಸುಗಳು ಪ್ರತಿಷ್ಠಾನ ಎಂಬ ಕನ್ನಡಪರ ಸಂಸ್ಥೆಯು ರಾಜ್ಯದ ವಿವಿಧ ಭಾಗಗಳಲ್ಲಿ ಸ್ವಯಂಸೇವಕರನ್ನು ಹೊಂದಿದ್ದು, ಕನ್ನಡಪರ ಹೋರಾಟಗಳಲ್ಲೂ ಸಹ ತೊಡಗಿಸಿಕೊಂಡಿರುವ ಈ ತಂಡವು ತಾಲ್ಲೂಕಿನ ಇ.ಬೇವಿನಹಳ್ಳಿ ಮತ್ತು ಕೆ.ಕಲ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆಗಳನ್ನು ಆಯ್ಕೆ ಮಾಡಿಕೊಂಡು, ಶನಿವಾರ ಮತ್ತು ಭಾನುವಾರ ಎರಡು ದಿನಗಳ ಕಾಲ ಶಾಲೆಗಳಿಗೆ ಬಣ್ಣ ಬಳಿದು ಸೌಂದರ್ಯೀಕರಣಗೊಳಿಸಿದ್ದಾರೆ.

 ತಂಡವು ಸುಮಾರು 3 ವರ್ಷಗಳಿಂದ `ಸರ್ಕಾರಿ ಶಾಲೆ ಉಳಿಸಿ’ ಎಂಬ ಅಭಿಯಾನ ಆರಂಭಿಸಿದ್ದು, ಅಳಿವಿನಂಚಿನಲ್ಲಿರುವ ಮತ್ತು ಕನ್ನಡ ಮಕ್ಕಳಿಗೆ ಅಗತ್ಯವಿರುವ ಶಾಲೆಗಳನ್ನು ಗುರುತಿಸಿ, ದಾನಿಗಳು ಮತ್ತು ಇತರೆ ಸಂಘ-ಸಂಸ್ಥೆಗಳ ನೆರವಿನಿಂದ ತಂಡದ ಸ್ವಯಂ ಸೇವಕರ ಮೂಲಕ ಶಾಲೆಗೆ ಹೋಗಿ ಬಣ್ಣ ಬಳಿದು ಸೌಂದರ್ಯೀಕರಣ ಗೊಳಿಸುವುದು ಮತ್ತು ಸಾಧ್ಯವಾದಷ್ಟು ಮೂಲಭೂತ ಅಗತ್ಯತೆಗಳನ್ನು ಪೂರೈ ಸುವುದು ಈ ಅಭಿಯಾನದ ಮುಖ್ಯ ಉದ್ದೇಶವಾಗಿ ರುತ್ತದೆ ಎಂದು ತಂಡದ ಮುಖ್ಯಸ್ಥ ಪವನ್ ತಿಳಿಸಿದರು.

ಶಾಲೆಗಳಿಗೆ ಬಣ್ಣ ಬಳಿದ ನಂತರ ಇ.ಬೇವಿನಹಳ್ಳಿ ಮತ್ತು ಕೆ.ಕಲ್ಲಹಳ್ಳಿಯ ಶಾಲೆಯ ಶಿಕ್ಷಕರು ಮತ್ತು ಎಸ್‍ಡಿಎಮ್‍ಸಿ ಹಾಗೂ ಗ್ರಾಮ ಪಂಚಾಯ್ತಿ ಸದಸ್ಯರು ಕನ್ನಡ ಮನಸುಗಳ ತಂಡವರಿಗೆ ಭಾನುವಾರ ಸನ್ಮಾನ ಕಾರ್ಯಕ್ರಮ ಏರ್ಪಡಿಸಿದ್ದರು.

ಕಾರ್ಯಕ್ರಮದಲ್ಲಿ ಗ್ರಾ.ಪಂ.ಸದಸ್ಯರಾದ ಕಮ್ಮತ್ ನೀಲಮ್ಮ, ಡಂಬಳ್ ಬಸವರಾಜ್, ಎಸ್‍ಡಿಎಮ್‍ಸಿ ಅಧ್ಯಕ್ಷ ಗುತ್ತೂರು ಹಾಲೇಶ್, ಮೌನೇಶ್ ಕೆ.ಕಲ್ಲಹಳ್ಳಿ ಶಾಲೆ ಹಳೆ ವಿದ್ಯಾರ್ಥಿಗಳಾದ ಪುಟ್ಟನಗೌಡ ಪಾಟೀಲ್, ಗೋಣೆಪ್ಪ, ನಂದೀಶ್ ಆಚಾರ್, ಮಂಜುನಾಥ್, ಮತ್ತು ಇ.ಬೇವಿನಹಳ್ಳಿ ಗ್ರಾಮದ ಬೇಲೂರು ಗುರುಸಿದ್ದಪ್ಪ, ಪಾಟೀಲ್ ಸುರೇಶ್, ಹಳೆ ವಿದ್ಯಾರ್ಥಿಗಳಾದ ಮನು, ಬಸವರಾಜ್, ಅಂಗಡಿ ಮಲ್ಲಿಕಾರ್ಜುನ, ಕಮ್ಮತ್ ಮಲ್ಲಿಕಾರ್ಜುನ, ಬೇಲೂರು ಸಿದ್ದನಗೌಡ, ಹೊಳಲು ಮಂಜುನಾಥ್, ಡಂಬಳ್ ಸುರೇಶ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!