ನಗರದಲ್ಲಿ ವಿಮಾನ ನಿಲ್ದಾಣ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಬೇಕು

ಸರ್ಕಾರಕ್ಕೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಮನವಿ

ದಾವಣಗೆರೆ, ಫೆ.25- ವಿಮಾನ ನಿಲ್ದಾಣ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ, ಐಟಿ-ಬಿಟಿ ಹಬ್ ನಿರ್ಮಾಣ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಟ್ರಕ್ ಟರ್ಮಿನಲ್ ನಿರ್ಮಾಣ ಸೇರಿದಂತೆ ಇತರೆ ಅಗತ್ಯ ಸೇವಾ ಸೌಲಭ್ಯಗಳನ್ನು ಮಂಜೂರು ಮಾಡಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊ ಳ್ಳುವಂತೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ ಅಧ್ಯಕ್ಷ ಯಜಮಾನ್ ಮೋತಿ ವೀರಣ್ಣ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿದ್ದಾರೆ.

ಸರಕು ಸಂಗ್ರಹಣೆಗಾಗಿ ಶೀತಲೀಕರಣದ ಗೋದಾಮುಗಳ ನಿರ್ಮಾಣ, ಜಿಎಸ್‌ಟಿ ಗೆ ಸಂಬಂಧಿಸಿದಂತೆ ಅವಶ್ಯ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವುದು, ಅರುಣ ಚಿತ್ರಮಂದಿರದ ಹತ್ತಿರ ಪಿ.ಬಿ. ರಸ್ತೆಯ ವೃತ್ತದಿಂದ ಹೊಂಡದ ವೃತ್ತದವರೆಗೆ ಕೆಳ ಸೇತುವೆ, ರಸ್ತೆ ನಿರ್ಮಾಣ, ವಾಸೋಪಯೋಗಿ, ವಾಣಿಜ್ಯ, ಕೈಗಾರಿಕೆ ಹಾಗೂ ಖಾಲಿ ನಿವೇಶನಗಳಿಗೆ ಪ್ರತ್ಯೇಕ ತೆರಿಗೆ ದರ ಆಕರಣೆ ನಿಗದಿಪಡಿಸ ಬೇಕೆಂದು ವಿನಂತಿಸಿಕೊಂಡಿದ್ದಾರೆ. ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿರುವ ಕಟ್ಟಡಗಳಿಗೆ ನಗರಸಭೆ, ಪಾಲಿಕೆಯಿಂದ ಆಸ್ತಿ ತೆರಿಗೆಯನ್ನು ವಿಧಿಸುತ್ತಿದ್ದು, ಇದು ಸರಿಯಲ್ಲ, ಎಲ್ಲಾ ನಿರ್ವಹಣಾ ವ್ಯವಸ್ಥೆಯನ್ನು ಮಾರುಕಟ್ಟೆ ಸಮಿತಿ ನಿರ್ವಹಿಸುತ್ತಿದ್ದು, ಇಂತಹ ಸಮಯದಲ್ಲಿ ಯಾವುದೇ ಸೇವೆ ನೀಡದೇ ಆಸ್ತಿ ತೆರಿಗೆಯನ್ನು ವಿಧಿಸುತ್ತಿರುವುದು ಸರಿಯಲ್ಲ. ನಗರಸಭೆ, ಪಾಲಿಕೆಯಿಂದ ಆಸ್ತಿ ತೆರಿಗೆಯನ್ನು ಆಕರಿಸದಂತೆ ಆದೇಶ ನೀಡುವಂತೆ ಕೋರಿದ್ದಾರೆ.

error: Content is protected !!