ಭತ್ತದ ಬೇಸಾಯ ತರಬೇತಿ ಕಾರ್ಯಕ್ರಮದಲ್ಲಿ ಪ್ರಗತಿಪರ ರೈತ ನಿಂಗಪ್ಪ
ಹರಿಹರ, ಫೆ.24- ತಾಲ್ಲೂಕಿನ ದೀಟೂರು ಗ್ರಾಮದಲ್ಲಿ ಕೃಷಿ ಇಲಾಖೆ ಮತ್ತು ಜಿಲ್ಲಾ ಕೃಷಿ ತರಬೇತಿ ಕೇಂದ್ರ, ಕಾಡಜ್ಜಿ ಇವರಿಂದ ಡ್ರಮ್ ಸೀಡರ್ ಭತ್ತದ ಬೇಸಾಯ ಕುರಿತು ತರಬೇತಿ ಕಾರ್ಯಕ್ರಮ ಆಯೋಜಿ ಸಲಾಗಿತ್ತು,
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾ ಲಯದ ಕೀಟಶಾಸ್ತ್ರ ತಜ್ಞ ದಾನಪ್ಪ ಕೋನರೆಡ್ಡಿ, ಭತ್ತ ದಲ್ಲಿ ಕೀಟ ಮತ್ತು ರೋಗ ಬರುವುದು ಸಹಜ, ಅದನ್ನು ನಿರ್ಲಕ್ಷಿಸಿದರೆ ಇಳುವರಿ ಕುಂಠಿತವಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎ.ನಾರನಗೌಡ ಮಾತನಾಡಿ, ತಾಲ್ಲೂಕಿನಲ್ಲಿ ಹೆಚ್ಚು ಭತ್ತ ಬೆಳೆಯುವ ಪ್ರದೇಶವಿದ್ದು, ಕೂಲಿ ಕಾರ್ಮಿಕರು ಸರಿಯಾದ ಸಮಯಕ್ಕೆ ಸಿಗದೆ ರೈತರಿಗೆ ಇಳುವರಿ ಕುಠಿತವಾಗಿದೆ. ಈ ಸಮಸ್ಯೆಯಿಂದ ಹೊರಬರಲು ಡ್ರಮ್-ಸೀಡರ್ ಪದ್ದತಿ ಒಂದು ಮಾದರಿಯಾಗಿದೆ. ಈ ತರಬೇತಿಯನ್ನು ಸದುಪ ಯೋಗ ಪಡೆದುಕೊಳ್ಳಬೇಕೆಂದು ರೈತರಿಗೆ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಪ್ರಗತಿ ಪರ ರೈತ ನಿಂಗಪ್ಪ ಮಾತನಾಡಿ, ಪ್ರಗತಿಪರ ರೈತ ನಿಂಗಪ್ಪ ಮಾತನಾಡಿ, ಡ್ರಮ್ ಸೀಡರ್ ಬಳಕೆಯಿಂದ ಈ ಬೇಸಿಗೆಯಲ್ಲಿ 8 ಎಕರೆಯಲ್ಲಿ ಭತ್ತ ಬಿತ್ತನೆ ಕೈಗೊಂಡಿದ್ದು, ಇದರಿಂದ ನಾನು ಸಮಯಕ್ಕೆ ಸರಿಯಾಗಿ ನಾಟಿ ಮಾಡಲು ಸಾಧ್ಯವಾಯಿತು. ಈಗ ಈ ಬೆಳೆಯು 45 ದಿನದಲ್ಲಿ ಇದ್ದು, ಇತರೆ ಪದ್ದತಿಯಂತೆ ಉತ್ತಮ ವಾಗಿದೆ ಎಂದರು. ಕೃಷಿ ಅಧಿಕಾರಿ ಮಲ್ಲಿಕಾರ್ಜುನ ಕೆ. ಸ್ವಾಗತಿಸಿದರು, ಸಹಾಯಕ ಕೃಷಿ ನಿರ್ದೇಶಕ ಮೊಹಮದ್ ರಫೀಕ್ ಕಾರ್ಯಕ್ರಮ ನಿರೂಪಿಸಿದರು.
ಪ್ರಗತಿಪರ ರೈತರಾದ ಮಹೇಶ್ವರಪ್ಪ, ಪ್ರಸಾದ್ ರೆಡ್ಡಿ, ದೀಟೂರು ಗ್ರಾಮಸ್ಥರು, ಆತ್ಮ ಯೋಜನೆಯ ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕ ಯೋಗೇಶ್ ಗೌಡರು ಉಪಸ್ಥಿತರಿದ್ದರು.