ಹಿಂದೂ ಕಾರ್ಯಕರ್ತ ಹರ್ಷ ಹತ್ಯೆಗೆ ಹಿಂಜಾವೇ ಖಂಡನೆ

ದಾವಣಗೆರೆ, ಫೆ.23- ಶಿವಮೊಗ್ಗದ ಹಿಂದೂ ಸಂಘಟನೆಯ ಕಾರ್ಯಕರ್ತ ಹರ್ಷನ ಹತ್ಯೆ ಖಂಡಿಸಿ ಹಿಂದೂ ಜಾಗರಣ ವೇದಿಕೆಯಿಂದ ನಗರದಲ್ಲಿಂದು ಪ್ರತಿಭಟಿಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತವಾಯಿತು.

ಜಯದೇವ ವೃತ್ತದಲ್ಲಿ ವೇದಿಕೆ ಮುಖಂಡ ಸತೀಶ್ ಪೂಜಾರಿ ನೇತೃತ್ವದಲ್ಲಿ ಜಮಾಯಿಸಿದ್ದ ಸಂಘಟನೆಯ ಕಾರ್ಯಕರ್ತರು, ಹರ್ಷನ ಹತ್ಯೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಲಾಯಿತು. ನಂತರ ಪ್ರತಿಭಟನಾ ಮೆರವಣಿಗೆ ಮುಖೇನ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ, ಉಪವಿಭಾಗಾಧಿಕಾರಿ ಮುಖಾಂತರ ಮನವಿ ಸಲ್ಲಿಸಲಾಯಿತು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತ ಹರ್ಷನನ್ನು ಮತೀಯ ಶಕ್ತಿಗಳು ಕೊಲೆ ಮಾಡಿವೆ. ಈ ಪ್ರಕರಣದ ಜೊತೆಗೆ ಈ ಹಿಂದೆ ನಡೆದ ಎಲ್ಲಾ ಹಿಂದೂ ಕಾರ್ಯಕರ್ತರ ಕೊಲೆಗಳನ್ನು ಎನ್‍ಐಎ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಾಲಿಬಾನ್, ಐಸಿಸ್‌ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಹೇಡಿತನದ ಹೇಯ ಕೃತ್ಯಕ್ಕೆ ಹರ್ಷ ಬಲಿಯಾಗಿದ್ದಾರೆ. ಮತಾಂಧ ಕೊಲೆಗಾರರನ್ನು ಮುಸ್ಲಿಂ ಸಮುದಾಯದವರು ಜಾರಿಯಾಗಲಿ ಎಂದು ಬಯಸುವ ಶರಿಯಾ ಕಾನೂನಿನಂತೆ ಶಿಕ್ಷೆಗೆ ಒಳಪಡಿಸುವಂತೆ ಪಾಲಿಕೆ ಮಹಾಪೌರ ಎಸ್.ಟಿ. ವೀರೇಶ್ ಸರ್ಕಾರವನ್ನು ಒತ್ತಾಯಿಸಿದರು.

ಈ ಕೊಲೆಯಲ್ಲಿ ಪಿಎಫ್‍ಐ ಮತ್ತು ಎಸ್‍ಡಿಪಿಐ ನೇರ ಭಾಗಿಯಾಗಿವೆ ಎಂಬ ಬಲವಾದ ಸಂದೇಹ ಇದ್ದು, ಈ ಸಂಘಟನೆಗಳನ್ನು ನಿಷೇಧ ಮಾಡಬೇಕು. ಹರ್ಷನ ಕುಟುಂಬಕ್ಕೆ ತಕ್ಷಣ 50 ಲಕ್ಷ ರೂ. ಪರಿಹಾರ ನೀಡಬೇಕು. ಕೋಮು ಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿರುವ ಮತಾಂಧ ಶಕ್ತಿಗಳ ಸಂಚನ್ನು ಬಯಲಿಗೆಳೆಯಬೇಕು. ಮತೀಯ ಶಕ್ತಿಯಾದ ಎಸ್‍ಡಿಪಿಐ ಸಂಘಟನೆಯನ್ನು ಸರ್ಕಾರ ಬ್ಯಾನ್ ಮಾಡಬೇಕು. ಇಡೀ ದೇಶವನ್ನು ಇಸ್ಲಾಮೀಕರಣ ಮಾಡುವ ಸಂಚು ನಡೆದಿದೆ. ವಿದೇಶಿ ಶಕ್ತಿಗಳು ಸಹ ಕೈ ಜೋಡಿಸಿದ್ದು, ಇದನ್ನು ಬುಡ ಸಮೇತ ಕಿತ್ತು ಹಾಕಬೇಕು ಎಂದು ಆಗ್ರಹಿಸಿದರು.

ಹಿಂಜಾವೇ ಮುಖಂಡ ಸತೀಶ್ ಪೂಜಾರಿ ಮಾತನಾಡಿ,  ದೇಶದಲ್ಲಿ ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚಿ, ಅವರೇ ಹೆಚ್ಚಿನ ಸಂಖ್ಯೆಯಲ್ಲಿ ಜನಪ್ರತಿನಿಧಿಗಳಾದರೆ ಮುಂದೆ ಹಿಂದೂ ಜನಪ್ರತಿನಿಧಿಗಳ ಹತ್ಯೆಯೂ ನಡೆಯಬಹುದು. ಇದನ್ನು ಇನ್ನಾದರೂ ಮನಗಂಡು, ಅಲ್ಪಸಂಖ್ಯಾತರನ್ನು ಓಲೈಕೆ ಮಾಡುವುದನ್ನು ಬಿಡಬೇಕು. ಹರ್ಷನನ್ನು ಕೊಲೆ ಮಾಡಿದ ವ್ಯಕ್ತಿಗಳಿಗೆ ಎನ್ ಕೌಂಟರ್ ಮಾಡಬೇಕು. ಈ ಸರ್ಕಾರ ಹಿಂದೂಗಳ ಹತ್ಯೆಗಳನ್ನು ಮಾಡಿದವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹಿಂಜಾವೇ ಮುಖಂಡರಾದ ರಾಜು, ಹರೀಶ್ ಪವಾರ್, ಭೀಮಾ, ಗುರು, ಹೇಮಂತ ಮಹೇಂದ್ರಕರ್, ವಿಕಾಸ್, ವೀರೇಶ್, ಸಿದ್ದು, ಮಂಜುನಾಥ, ಗಿರೀಶ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!