ದಾವಣಗೆರೆ, ಫೆ.23- ಪಂಜುರ್ಲಿ ಗ್ರೂಪ್‌ನ ` ಶ್ರೀ ಪಂಜುರ್ಲಿ ಪ್ಯಾಲೇಸ್ ಹೋಟೆಲ್ ಹಾಗೂ ಲೀಲಾವತಿ ಕಲ್ಯಾಣ ಮಂಟಪವನ್ನು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂಥದೊಂದು ವಿನೂತನ ಹೋಟೆಲ್ ನಗರಕ್ಕೆ ಬೇಕಾಗಿತ್ತು. ಇವರು ತಿಂಡಿ, ತಿನಿಸಿನ ಜೊತೆಗೆ, ಹೋಟೆಲ್ ಗೋಡೆಗಳ ಮೇಲೆ ಸಾಧಕರು, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಪಟ ಮತ್ತು ಮಾಹಿತಿ ಬರೆಸುವ ಮೂಲಕ ಗ್ರಾಹಕರಿಗೆ ಜ್ಞಾನವನ್ನು ಉಣ ಬಡಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಮನೋಹರ ತಹಶೀಲ್ದಾರ್, ಪಂಜುರ್ಲಿ ಗ್ರೂಪ್ ಆಫ್ ಹೋಟೆಲ್ಸ್ ಮಾಲೀಕರಾದ ರಾಜೇಂದ್ರ ಶೆಟ್ಟಿ, ಸಂದೀಪ್ ಆಳ್ವಾ, ಗಣೇಶ್ ಶೆಟ್ಟಿ, ರವಿಕಾಂತ ಶೆಟ್ಟಿ, ಶಶಿಕಾಂತ ಶೆಟ್ಟಿ, ರಾಜೇಶ್ ಶೆಟ್ಟಿ, ಅವಿನಾಶ್ ಶೆಟ್ಟಿ, ರಂಜಿತ್ ಶೆಟ್ಟಿ, ಉದಯ ಶೆಟ್ಟಿ, ನಾಗೇಶ್ ಪೂಜಾರಿ, ಉಣಕಲ್ ಪ್ರಕಾಶ್ ಶೆಟ್ಟಿ, ಆನಂದ ಹಿರೇಮಠ ಮತ್ತಿತರರಿದ್ದರು.