ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 33 ಕೋಟಿ ಅನುದಾನ

ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 33 ಕೋಟಿ ಅನುದಾನ - Janathavaniದಾವಣಗೆರೆ, ಫೆ.22- ಹರಿಹರ ವಿಧಾನಸಭಾ ಕ್ಷೇತ್ರದ ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ 33 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ವಾರದೊಳಗೆ  ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ತಿಳಿಸಿದ್ದಾರೆ.

ರಾಜ್ಯ ಹೆದ್ದಾರಿ ಸೇತುವೆಗಳ ಸುಧಾರಣೆಗಳ ಲೆಕ್ಕಶೀರ್ಷಿಕೆಯಡಿ ಎಕ್ಕೆಗೊಂದಿ-ನಂದಿಗುಡಿ ರಸ್ತೆಯನ್ನು ಎಕ್ಕೆಗೊಂದಿ ಕ್ರಾಸ್‌ನಿಂದ ಭಾನುವಳ್ಳಿಯವರೆಗೆ ಅಭಿವೃದ್ಧಿಪಡಿಸಲು 13.50 ಕೋಟಿ ಒದಗಿಸಲಾಗಿದೆ. ಚಿಕ್ಕಬಿದರೆ-ಕಕ್ಕರಗೊಳ್ಳದವರೆಗಿನ ರಸ್ತೆ ಅಭಿವೃದ್ಧಿಪಡಿಸಲು 10 ಕೋಟಿ ರೂ. ಅನುದಾನ ನೀಡಲಾಗಿದೆ.

ರಾಜ್ಯ ರಸ್ತೆ ನಿರ್ವಹಣೆ ಲೆಕ್ಕಶೀರ್ಷಿಕೆಯಡಿ ಹೊಸಪೇಟೆ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಆಯ್ದ ಭಾಗಗಳಲ್ಲಿ ಅಭಿವೃದ್ಧಿಪಡಿಸಲು 7 ಕೋಟಿ ರೂ., ಜಿಲ್ಲಾ ಮುಖ್ಯರಸ್ತೆ ಅಭಿವೃದ್ಧಿಗಾಗಿ 1 ಕೋಟಿ, ಹೆಚ್.ಎಂ. ರಸ್ತೆಯಿಂದ ಕೊಂಡಜ್ಜಿ ಮುಖಾಂತರ ಅರಸೀಕರೆಗೆ ಹೋಗುವ ರಸ್ತೆಯನ್ನು ಕಾಂಕ್ರೀಟ್ ರಸ್ತೆಯನ್ನಾಗಿ ಅಭಿವೃದ್ಧಿಪಡಿಸಲು 5 ಕೋಟಿ ರೂ. ಅನುದಾನವನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಲ್ಲೂಕಿನ ರಸ್ತೆಗಳ ಅಭಿವೃದ್ಧಿಗೆ ಕಾಳಜಿವಹಿಸಿ ಅನುದಾನ ಬಿಡುಗಡೆ ಮಾಡಿದ ಈ ಹಿಂದೆ ಲೋಕೋಪಯೋಗಿ ಸಚಿವರಾಗಿದ್ದ ಗೋವಿಂದ ಕಾರಜೋಳ ಹಾಗೂ ಹಾಲಿ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಅವರನ್ನು ಸಂಸದರು ಅಭಿನಂದಿಸಿದ್ದಾರೆ.

error: Content is protected !!