ದಾವಣಗೆರೆ, ಫೆ.21- ಇದೇ ದಿನಾಂಕ 27 ರಂದು ನಡೆಯುವ ದಾವಣಗೆರೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಗೆ ವೀರಪ್ಪ ಎಂ ಬಾವಿ, ಕೆ. ಚಂದ್ರಣ್ಣ ಮತ್ತು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಇ.ಎಂ. ಮಂಜುನಾಥ ಅವರ ತಂಡದ ಅಭ್ಯರ್ಥಿಗಳ ಪಟ್ಟಿಯನ್ನು ನಗರವಾಣಿ ಕಛೇರಿಯಲ್ಲಿ ಇಂದು ಬಿಡುಗಡೆಗೊಳಿಸಲಾಯಿತು.
ನಗರವಾಣಿ ಸಹ ಸಂಪಾದಕ ಬಿ.ಎನ್.ಮಲ್ಲೇಶ್, ತಂಡದ ಅಭ್ಯರ್ಥಿಗಳ ಮಾಹಿತಿ ಹೊಂದಿರುವ ಕರ ಪತ್ರವನ್ನು ಬಿಡುಗಡೆಗೊಳಿಸುವುದರ ಮೂಲಕ ತಮ್ಮ ಸಂಪೂರ್ಣ ಬೆಂಬಲ ನಿಮಗಿದೆ ಎಂದು ತಿಳಿಸಿದರು. ಪತ್ರಕರ್ತರಿಗೆ ಒಂದು ಸೂರು ನೀಡುವುದು ಸಂಘದ ಮುಖ್ಯ ಕರ್ತವ್ಯವಾಗಲಿ, ನಿಮ್ಮಲರಿಗೂ ಶುಭವಾಗಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ವೀರಪ್ಪ ಎಂ.ಬಾವಿ, ರಾಜ್ಯ ಸಮಿತಿ ಸದಸ್ಯ ಕೆ.ಚಂದ್ರಣ್ಣ, ಚುನಾವಣಾ ಅಭ್ಯರ್ಥಿಗಳಾದ ಇ.ಎಂ.ಮಂಜುನಾಥ, ಮಾಗನೂರು ಮಂಜಪ್ಪ, ಹೆಚ್.ಎಂ.ಪಿ.ಕುಮಾರ್, ಆರ್.ಎಸ್.ತಿಪ್ಪೇಸ್ವಾಮಿ, ಜೆ.ಎಸ್.ವೀರೇಶ್, ಇಂದೂಧರ ನಿಶಾನಿಮಠ, ಎನ್. ಆರ್. ರವಿ, ಸಿ. ಸತೀಶ್, ಮದ್ದಯ್ಯ, ತಾರೀಖ್ ನಕಾಶ್, ಸಂಘದ ಸದಸ್ಯ ಕೆ.ಜಿ. ಶಿವಕುಮಾರ್, ಕರವೇ ಅಧ್ಯಕ್ಷ ಎಂ.ಎಸ್. ರಾಮೇಗೌಡ ಮತ್ತಿತರರು ಉಪಸ್ಥಿತರಿದ್ದರು.