ಗ್ರಾಮ ದೇವತೆ ಹಬ್ಬದ ಯಶಸ್ಸಿಗೆ ಮುತುವರ್ಜಿ ವಹಿಸಿ

ಹರಿಹರ : ಸಿದ್ಧತಾ ಸಭೆಯಲ್ಲಿ ಶಾಸಕ ರಾಮಪ್ಪ ನಿರ್ದೇಶನ

ಹರಿಹರ, ಫೆ.20- ಗ್ರಾಮ ದೇವತೆ ಊರಮ್ಮ ದೇವಿ ಜಾತ್ರೆ ಸಮಯದಲ್ಲಿ ಕುಡಿಯುವ ನೀರು, ವಿದ್ಯುತ್, ಸ್ವಚ್ಛತೆ, ಪೊಲೀಸ್ ಭದ್ರತೆ ಸೇರಿದಂತೆ ಯಾವುದೇ ರೀತಿಯ ತೊಂದರೆಗಳು ಆಗದಂತೆ ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಎಸ್. ರಾಮಪ್ಪ ನಿರ್ದೇಶಿಸಿದರು.

ನಗರಸಭೆ ಸಭಾಂಗಣದಲ್ಲಿ ದೇವಿಯ ಹಬ್ಬದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಲಕ್ಷಾಂತರ ಜನರು ಆಗಮಿಸುವುದರಿಂದ ಸ್ವಲ್ಪಮಟ್ಟಿಗೆ ವ್ಯತ್ಯಾಸಗಳು ಆದರೂ, ಅದರಿಂದ ನಗರಕ್ಕೆ ಕೆಟ್ಟ ಹೆಸರು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಈ ಹಬ್ಬದ ಸಮಯದಲ್ಲಿ ವಿದ್ಯುತ್, ಪೊಲೀಸ್ ಮತ್ತು ನಗರಸಭೆ ಜವಾಬ್ದಾರಿ ಹೆಚ್ಚಿನದಾಗಿದ್ದು, ಮುತುವರ್ಜಿಯಿಂದ ನಿಭಾಯಿಸಬೇಕು ಎಂದು ಮನವಿ ಮಾಡಿದರು.

ಜಾತ್ರೆಯ ಪ್ರಯುಕ್ತ ಉತ್ಸವ ಸಮಿತಿ ಆಯೋಜಿಸುವ ಮನೋರಂಜನೆ ಕಾರ್ಯಕ್ರಮ, ಕುಸ್ತಿ, ಟಗರಿನ ಕಾಳಗ, ಎತ್ತಿನ ಬಂಡೆ ಸ್ಪರ್ಧೆ, ಬೆಲ್ಲದ ಬಂಡಿ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ನಗರದವರಿಗೆ ಹೆಚ್ಚಿನ ಪ್ರೋತ್ಸಾಹ ಇರಬೇಕು. ಚರಗ ಹೋಗುವ ಮಾರ್ಗದಲ್ಲಿ ಗಿಡಗಳನ್ನು ತೆರವುಗೊಳಿಸಿ ಮತ್ತು ರಸ್ತೆ ದುರಸ್ತಿ ಪಡಿಸಬೇಕು. ಚೌಕಿ ಮನೆ ಹತ್ತಿರದಲ್ಲಿ ಮಹಿಳೆ ಯರಿಗೆ ಸಮವಸ್ತ್ರವನ್ನು ಬದಲಿಸಲು ಮೊಬೈಲ್ ಕೊಠಡಿ ನಿರ್ಮಾಣ ಮಾಡಬೇಕು, ಒಟ್ಟಾರೆಯಾಗಿ ಸಾರ್ವಜನಿಕರಿಗೆ ಮತ್ತು ಹೊರಗಡೆಯಿಂದ ಬಂದಂತಹ ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ನೋಡಿಕೊಳ್ಳುವುದು ವಿವಿಧ ಇಲಾಖೆಗಳ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ವೀರೇಶ್ ಹನಗವಾಡಿ ಮಾತನಾಡಿ, ಹಬ್ಬದ ಸಮಯದಲ್ಲಿ ವಿದ್ಯುತ್, ಕುಡಿಯುವ ನೀರು, ಪೊಲೀಸ್ ಭದ್ರತೆ ಚೆನ್ನಾಗಿದ್ದರೆ, ಹಬ್ಬವು ಶಾಂತಿಯುತವಾಗಿ ನಡೆಯುತ್ತದೆ ಎಂದು ಹೇಳಿದರು.

ನಗರಸಭೆ ಸದಸ್ಯ ಶಂಕರ್ ಖಟಾವ್ಕರ್ ಮಾತನಾಡಿ, ನಗರಸಭೆ ಹಾಗೂ ಎಲ್ಲಾ ಇಲಾಖೆಯ ಅಧಿಕಾರಿಗಳು ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸಲು ಮುಂದಾಗಬೇಕೆಂದರು.

ಪೌರಾಯುಕ್ತರಾದ ಎಸ್.ಲಕ್ಷ್ಮಿ ಮಾತನಾಡಿ, ಹಬ್ಬದ ಸಮಯದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಗಳು ಬರದಂತೆ ನಗರಸಭೆಯ ವತಿಯಿಂದ ನೋಡಿಕೊಳ್ಳುವುದಾಗಿ ಭರವಸೆ ನೀಡಿದರು.

ಬೆಸ್ಕಾಂ ಎಇಇ ಲಕ್ಷ್ಮಪ್ಪ ಮಾರ್ಕಂಡೇಯ ಮಾತನಾಡಿ, ವಿದ್ಯುತ್ ಪೂರೈಕೆ ಮಾಡುವುದಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಆದರೆ, ಲೋಡಿಂಗ್ ಸಾಮರ್ಥ್ಯವು ಹೆಚ್ಚಾದ ಸಮಯದಲ್ಲಿ ಮೇನ್ ಲೈನ್ ನಲ್ಲಿ ವಿದ್ಯುತ್ ಕಟ್ ಆಗುವ ಸಂಭವ ಹೆಚ್ಚು ಇರುತ್ತದೆ. ಆ ಸಮಯದಲ್ಲಿ ಅದನ್ನು ಸರಿ ಪಡಿಸುವುದಕ್ಕೆ ಸುಮಾರು ಒಂದು ಗಂಟೆ ಅವಧಿ ಬೇಕಾಗುತ್ತದೆ. ಅದೊಂದು ಸಮಸ್ಯೆ ಬಿಟ್ಟರೆ ಇಲಾಖೆಯಲ್ಲಿ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿದರು.

ಉತ್ಸವ ಸಮಿತಿ ಅಧ್ಯಕ್ಷ ಕೆ. ಅಣ್ಣಪ್ಪ ಪೈಲ್ವಾನ್ ಮಾತನಾಡಿ, ಅಧಿಕಾರಿಗಳು ಹಬ್ಬಕ್ಕೆ ಚ್ಯುತಿ ಬರದ ರೀತಿಯಲ್ಲಿ ಉತ್ತಮವಾಗಿ ಸ್ಪಂದಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ನಗರಸಭೆ ಸದಸ್ಯ ಜಂಬಣ್ಣ ಗುತ್ತೂರು ಮಾತನಾಡಿ, ಹಬ್ಬದ ಸಮಯದಲ್ಲಿ ಕೇವಲ ನಗರಕ್ಕೆ ಮಾತ್ರ ವಿದ್ಯುತ್ ಅಲಂಕಾರ ಮಾಡದೇ, ನಗರಕ್ಕೆ ಹೊಂದಿಕೊಂಡಿರುವ ಬಡಾವಣೆಗಳಲ್ಲೂ ವಿದ್ಯುತ್ ಅಲಂಕಾರ ಮಾಡಬೇಕು ಎಂದು ಹೇಳಿದರು.

ಸುರೇಶ್ ಚಂದಪೂರ್, ಜಗದೀಶ್ ಚೂರಿ, ನಗರಸಭೆ ಉಪಾಧ್ಯಕ್ಷ ಬಾಬುಲಾಲ್, ಸದಸ್ಯೆ ನಾಗರತ್ನ, ನಗರಸಭೆ ಮಾಜಿ ಅಧ್ಯಕ್ಷ ಬಿ. ರೇವಣಸಿದ್ದಪ್ಪ, ಪತ್ರಕರ್ತರಾದ ಎಂ. ಚಿದಾನಂದ, ಆರ್. ಮಂಜುನಾಥ್, ಹೆಚ್. ಸುಧಾಕರ್, ಉತ್ಸವ ಸಮಿತಿಯ ಶೇರಾಪುರ ರಾಜಪ್ಪ, ಗಿರೀಶ್ ಗೌಡ್ರು, ಮಲ್ಲೇಶಪ್ಪ, ರಮೇಶ್ ಮಾನೆ, ದುರುಗೋಜಿ ಮೋಹನ್, ರಾಘ ಚೌಗಲೆ, ಬೆಳಕೇರಿ ರಾಜಣ್ಣ ಹಾಗು ಇತರರು ಹಬ್ಬದ ಯಶಸ್ವಿಗೆ ಉತ್ತಮ ಸಲಹೆಗಳನ್ನು ನೀಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ರತ್ನ ಡಿ. ಉಜ್ಜೇಶ್, ಸದಸ್ಯರಾದ ಉಷಾ ಮಂಜುನಾಥ್, ಕೆ.ಜಿ. ಸಿದ್ದೇಶ್, ದಿನೇಶ್ ಬಾಬು, ವಿಜಯಕುಮಾರ್, ಮಾಜೇನಹಳ್ಳಿ ಗೌಡ್ರು ಚನ್ನಬಸಪ್ಪ, ಕಸಬಾ ಗೌಡ್ರು ಲಿಂಗರಾಜ್ ಪಾಟೀಲ್, ಮಾಜೇನಹಳ್ಳಿ ಬಣಕಾರ ಆಂಜನೇಯ, ಕಸಬಾ ಬಣಕಾರ ಸಿದ್ದಪ್ಪ, ಶಾನಭೋಗ್ ಗಿರೀಶ್, ಉತ್ಸವ ಸಮಿತಿಯ ಕಾರ್ಯದರ್ಶಿ ಬೆಣ್ಣೆ ರೇವಣಸಿದ್ದಪ್ಪ, ಸಹ ಕಾರ್ಯದರ್ಶಿ ಪಾಲಾಕ್ಷಪ್ಪ, ಮುಖಂಡರಾದ ಕೆ.ಬಿ. ರಾಜಶೇಖರ್, ಗೌಡ್ರು ಪುಟ್ಟಪ್ಪ, ವಕೀಲರ ನಾಗರಾಜ್,  ಸುರೇಶ್ ಚಂದಾಪೂರ್, ಜಗದೀಶ್ ಚೂರಿ, ಗೀರಿಶ್ ಗೌಡ್ರು, ನಾಗರಾಜ್ ಮೂಗಪ್ಪರ, ಡಿ. ಸಿದ್ದೇಶ್, ಅಶೋಕ, ಸಣ್ಣಗೌಡ್ರು, ದಾದಾ ಪೀರ್, ಜಾಕೀರ್, ಹರಪನಹಳ್ಳಿ ಹನುಮಂತಪ್ಪ, ಬೆಣ್ಣೆ ಸಿದ್ದೇಶ್, ವೇದಮೂರ್ತಿ, ಅರ್ಚಕ ನಾಗ ರಾಜ್, ಪತ್ರಕರ್ತ ಮಂಜುನಾಥ್ ಪೂಜಾರ್, ನಗರಸಭೆ ತಿಪ್ಪೇಸ್ವಾಮಿ, ಮಹಾಂತೇಶ್ ಭಂಡಾರಿ ಹಾಗು ಇತರರು ಹಾಜರಿದ್ದರು. 

error: Content is protected !!